ಹುಬ್ಬಳ್ಳಿ: ಕೊರೋನಾ ಸೋಂಕಿತರಿಗೆ ಊಟ ಮಾಡಿಸಿದ ಕಾಂಗ್ರೆಸ್‌ ನಾಯಕ

Kannadaprabha News   | Asianet News
Published : Jun 02, 2021, 11:19 AM ISTUpdated : Jun 02, 2021, 11:40 AM IST
ಹುಬ್ಬಳ್ಳಿ: ಕೊರೋನಾ ಸೋಂಕಿತರಿಗೆ ಊಟ ಮಾಡಿಸಿದ ಕಾಂಗ್ರೆಸ್‌ ನಾಯಕ

ಸಾರಾಂಶ

* ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದ ಮುತ್ತಣ್ಣ ಶಿವಳ್ಳಿ  * ಸೋಂಕಿತರಿಗೆ ಮಾಸ್ಕ್‌ ಹಾಕಿದ ಶಿವಳ್ಳಿ  * ಕೋವಿಡ್‌ ಕೇರ್‌ ಸೆಂಟರ್‌ಗೆ ಭೇಟಿ   

ಹುಬ್ಬಳ್ಳಿ(ಜೂ.02): ಕೊರೋನಾ ಸೋಂಕಿತರಿಗೆ ಊಟ ಮಾಡಿಸುವ ಮೂಲಕ ಜಿಲ್ಲಾ ಕಾಂಗ್ರೆಸ್‌ ಕಿಸಾನ್‌ ಸಮಿತಿ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ ಆತ್ಮಸ್ಥೈರ್ಯವನ್ನು ತುಂಬಿದ್ದಾರೆ. 

ಕುಂದಗೋಳದ ಶಿವಾನಂದ ಮಠದಲ್ಲಿ ತೆರೆಯಲಾಗಿರುವ ಕೋವಿಡ್‌ ಕೇರ್‌ ಸೆಂಟರ್‌ಗೆ ಭೇಟಿ ನೀಡಿ ಸೋಂಕಿತರಿಗೆ ಧೈರ್ಯ ಹೇಳಿದರು. ಎಗ್‌ ಬಿರಿಯಾನಿಯನ್ನು ಸೋಂಕಿತರಿಗಾಗಿ ಮಾಡಿಸಿಕೊಂಡು ಭೇಟಿ ನೀಡಿದ್ದರು. ಈ ವೇಳೆ ಸೋಂಕಿತಗೆ ತಾವೇ ತಿನ್ನಿಸಿ ನೀವೆಲ್ಲ ರೈತರು, ಹೆದರಬೇಡಿ. ಧೈರ್ಯವಾಗಿರಿ. ಏನೂ ಆಗಲ್ಲ. ಎಲ್ಲರೂ ಗುಣಮುಖರಾಗುತ್ತೀರಿ ಎಂದು ಧೈರ್ಯ ತುಂಬಿದ್ದಾರೆ. 

ಇಂದು ವಿಶ್ವ ಬೈಸಿಕಲ್‌ ದಿನ: ಕೊರೋನಾ ಸೋಂಕಿನಿಂದ ಪಾರಾಗಲು ಸೈಕಲ್‌ಗೆ ಮೊರೆ!

ಬಳಿಕ ಕೆಲ ಸೋಂಕಿತರಿಗೆ ಮಾಸ್ಕ್‌ ಹಾಕಿದರು. ಎಲ್ಲರಿಗೂ ಮಾಸ್ಕ್‌, ಸ್ಯಾನಿಟೈಸರ್‌ ವಿತರಿಸಿ ವೈದ್ಯರ ಸಲಹೆಯಂತೆ ಎಲ್ಲರೂ ಚಿಕಿತ್ಸೆ ಪಡೆಯಿರಿ ಎಲ್ಲರೂ ಗುಣಮುಖರಾಗುತ್ತೀರಿ ಎಂದ್ಹೇಳಿ ಅಲ್ಲಿಂದ ತೆರಳಿದರು. ಎಲ್ಲ ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ ದೊರೆಯುವಂತಾಗಬೇಕು. ಇಲ್ಲಿ ಸರಿಯಾಗಿ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಜಿಲ್ಲಾಡಳಿತ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

PREV
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!