ಹಿರಿಯ ಮುಖಂಡಗೆ ಆಹ್ವಾನ ನೀಡಿದ ಡಿಕೆಶಿ : ಸದ್ಯಕ್ಕೆ ಬರಲ್ಲ ಎಂದ ನಾಯಕ

Kannadaprabha News   | Asianet News
Published : Oct 15, 2020, 08:18 AM ISTUpdated : Oct 15, 2020, 08:24 AM IST
ಹಿರಿಯ ಮುಖಂಡಗೆ ಆಹ್ವಾನ ನೀಡಿದ ಡಿಕೆಶಿ : ಸದ್ಯಕ್ಕೆ ಬರಲ್ಲ ಎಂದ ನಾಯಕ

ಸಾರಾಂಶ

ಡಿಕೆ ಶಿವಕುಮಾರ್ ಅವರು ತಮಗೂ ಆಹ್ವಾನ ನೀಡಿದ್ದು ಸದ್ಯಕ್ಕೆ ಮರಳುವುದಿಲ್ಲ ಎಂದು ಹಿರಿಯ ಮುಖಂಡರೋರ್ವರು ಹೇಳಿದ್ದಾರೆ.

ಕೋಲಾರ (ಅ.15) : ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾಸ್ಟರ್‌ ಪ್ಲಾನ್‌ ಮಾಡಿದ್ದು, ತಮಗೂ ಮುಳಬಾಗಿಲು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ತಿಳಿಸಿದ್ದಾರೆ ಎಂದು ಮಾಜಿ ಸಂಸದ ಕೆ.ಎಚ್‌. ಮುನಿಯಪ್ಪ ತಿಳಿಸಿದ್ದಾರೆ. 

ಮುಂದಿನ ದಿನಗಳಲ್ಲಿ ಮುಳಬಾಗಿಲು ಕ್ಷೇತ್ರದಿಂದ ಸ್ಪರ್ಧಿಸುವಿರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತಿರಿಸಿದ ಅವರು, ರಾಜ್ಯ ರಾಜಕಾರಣಕ್ಕೆ ಹಿಂತಿರುಗುವ ಯಾವುದೇ ತೀರ್ಮಾನವನ್ನು ನಾನು ಕೈಗೊಂಡಿಲ್ಲ. 

'ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಂದೇಶ ರವಾನಿಸಲು ಈ ಚುನಾವಣೆ'

ಇದನ್ನು ಹೈ ಕಮಾಂಡ್‌ ತೀರ್ಮಾನಿಸುತ್ತದೆ. ನಾನು ಪಕ್ಷದ ಶಿಸ್ತಿನ ಸಿಪಾಯಿ, ಹೈಕಮಾಂಡ್‌ ಸೂಚನೆಯನ್ನು ಪಾಲಿಸುವುದಷ್ಟೆನನ್ನ ಕೆಲಸ ಎಂದಿದ್ದಾರೆ.

ಈಗಾಗಲೇ ರಾಜ್ಯ ರಾಜಕೀಯದಲ್ಲಿ ಉಪ ಚುನಾವಣೆ ಹಾಗೂ ಪಕ್ಷಾಂತರಗಳು ಜೋರಾಗಿದ್ದು, ಸಾಕಷ್ಟು ಅಬ್ಬರ ರಾಜಕಾರಣ ನಡೆಯುತ್ತಿದೆ. 

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ