ಇದೀಗ ಹಳೆ ಜೋಡೆತ್ತುಗಳ ನಡುವೆ ಫೈಟ್ ಶುರುವಾಗಿದೆ. ಮುನಿಸಿನಿಂದ ಮಾತುಗಳು ಹೊರಬರುತ್ತಿವೆ.
ರಾಮನಗರ (ಅ.15): ಬೇರೆ ಪಕ್ಷದಲ್ಲಿರುವ ಕೆಲವರಿಂದ ನನಗೆ ಸ್ಲೋ ಪಾಯಿಸನ್ ಆಗುವಂತಹ ಘಟನೆಗಳು ನಡೆಯುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಮಾತನಾಡಿದ ಅವರು, ‘ಏನೋ ನಮ್ಮಿಂದಲೇ ಕುಮಾರಸ್ವಾಮಿಗೆ ರಕ್ಷಣೆ ಕೊಟ್ಟಿದ್ದೇವೆ ಎಂದು ಕೆಲವರು ಜನರಲ್ಲಿ ಸಂದೇಶ ಕೊಡಲು ಹೊರಟಿದ್ದಾರೆ. ಈ ಮೂಲಕ ನನ್ನೊಂದಿಗೆ ಬಹಳ ಆತ್ಮೀಯತೆ ತೋರಿಸಿ ಸ್ಲೋ ಪಾಯಿಸನ್ ಆಗುವ ಕೆಲಸ ಮಾಡಲಾಗುತ್ತಿದೆ.
ಬೈ ಎಲೆಕ್ಷನ್‌ನಲ್ಲಿ ಜಾತಿ ವಾರ್: ಹಳೆ ಜೋಡೆತ್ತುಗಳ ನಡುವೆ ಶುರುವಾಯ್ತು ಕಾದಾಟ .
ಇದಕ್ಕೆಲ್ಲ ನಾವು ಯಾವುದೇ ರೀತಿಯಲೂ ಮೈಮರೆಯುವುದಿಲ್ಲ’ ಎಂದರು. ‘ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಮುಗಿಸುವುದು ಕಾಂಗ್ರೆಸ್ಸಿಗರ ಹಗಲು ಗನಸು. ಸಿದ್ದರಾಮಯ್ಯನವರ ಸರ್ಕಾರವಿದ್ದಾಗ ಮಂಡ್ಯದಲ್ಲಿ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರು. ಆ ರೈತರ ಕುಟುಂಬಕ್ಕೆ ನನ್ನ ಸರ್ಕಾರದಲ್ಲಿ ಪರಿಹಾರ ನೀಡಿದೆ. ಈಗ ಜಾತಿ ಹೆಸರು ಹೇಳುತ್ತಿದ್ದಾರೆ’ ಎಂದು ಕಿಡಿಕಾರಿದರು.
ಮಂಡ್ಯದಲ್ಲಿ ರೈತರ ಶಾಲು ಹಾಕಿಕೊಂಡು ಕಾರ್ಯಕ್ರಮ ಮಾಡಿದ್ದಾರೆ. ಈಗ ಅವರಿಗೆಲ್ಲ ಕಾಂಗ್ರೆಸ್ ಶಾಲಿಗೆ ಬೆಲೆಯಿಲ್ಲ ಅಂತಾ ಗೊತ್ತಾಗಿದೆ. ಹಾಗಾಗಿ ಕಾಂಗ್ರೆಸ್ ಶಾಲು ಬಿಟ್ಟು, ರೈತರ ಹಸಿರು ಶಾಲು ಹಾಕಿಕೊಂಡು ಹೋಗಿದ್ದಾರೆ ಎಂದು ಲೇವಡಿ ಮಾಡಿದರು.