20 ವರ್ಷದಿಂದ ಕಾಂಗ್ರೆಸ್ ಬೆಂಬಲಿಸಿದ್ದ ನಾಯಕ BJPಗೆ..!

By Web Desk  |  First Published Nov 25, 2019, 11:30 AM IST

ಉಪಚುನಾವಣೆ ಹೊಸ್ತಿಲಿನಲ್ಲಿರುವ ಕಾಂಗ್ರೆಸ್‌ಗೆ ಬಿಗ್ ಶಾಕ್ ಉಂಟಾಗಿದೆ. 20 ವರ್ಷದಿಂದ ಕಾಂಗ್ರೆಸ್‌ನಲ್ಲಿದ್ದ ನಾಯಕ ಬಿಜೆಪಿ ಸೇರಿದ್ದಾರೆ. ಹುಣಸೂರಿನಲ್ಲಿ ಪ್ರಮುಖ ನಾಯಕ ಪಕ್ಷ ತೊರೆದಿರುವುದು ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆ ಇದೆ.


ಮೈಸೂರು(ನ.25): ಉಪಚುನಾವಣೆ ಹೊಸ್ತಿಲಿನಲ್ಲಿರುವ ಕಾಂಗ್ರೆಸ್‌ಗೆ ಬಿಗ್ ಶಾಕ್ ಉಂಟಾಗಿದೆ. 20 ವರ್ಷದಿಂದ ಕಾಂಗ್ರೆಸ್‌ನಲ್ಲಿದ್ದ ನಾಯಕ ಬಿಜೆಪಿ ಸೇರಿದ್ದಾರೆ. ಹುಣಸೂರಿನಲ್ಲಿ ಪ್ರಮುಖ ನಾಯಕ ಪಕ್ಷ ತೊರೆದಿರುವುದು ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆ ಇದೆ.

ಉಪಚುನಾವಣೆ ಸಮೀಪಿಸಿದ್ದು, ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಅಬ್ಬರದ ಪ್ರಚಾರ ನಡೆಯುತ್ತಿದೆ. ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‌ಗೆ ಬಿಗ್ ಶಾಕ್ ಸಿಕ್ಕಿದ್ದು, 20 ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯವಾಗಿದ್ದ ನಾಯಕ ಏಕಾಏಕಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.

Tap to resize

Latest Videos

ನಾನು ಸಿದ್ದು ಅಣ್ಣ ತಮ್ಮಂದಿರಂತೆ: ಬರ್ತ್‌ಡೇ ಸಂದರ್ಭ ಜಿಟಿಡಿ ಮಾತು

20 ವರ್ಷಗಳಿಂದ ಕಾಂಗ್ರೆಸ್ ಬೆಂಬಲಿಸಿದ್ದ ನಾಯಕ ರಾಜಣ್ಣ ಈಗ ಬಿಜೆಪಿ ತೆಕ್ಕೆಗೆ ಬಂದಿದ್ದು, 2013ರಲ್ಲಿ ವಿಧಾನಸಭೆಗೆ ಸ್ಪರ್ಧಿಸಿದ್ದ ಅವರು 9 ಸಾವಿರ ಮತಗಳನ್ನು ಪಡೆದಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯನ ಕುಟುಂಬ ಬಿಜೆಪಿಗೆ ಸೇರ್ಪಡೆಯಾಗಿದೆ.

ಹುಣಸೂರು ಪ್ರಭಾವಿ ಕಾಂಗ್ರೆಸ್ ಮುಖಂಡ ಸಿ.ಟಿ.ರಾಜಣ್ಣ ಹಾಗೂ ಬೆಂಬಲಿಗರು ಬಿಜೆಪಿ ಸೇರ್ಪಡೆಯಾಗಿದ್ದು, ಕಾಂಗ್ರೆಸ್ ನಾಯಕರ ನಡವಳಿಕೆಯಿಂದ ರಾಜಣ್ಣ ಬೇಸತ್ತಿದ್ರಾದರು ಎನ್ನಲಾಗಿದೆ. ರಾಜಣ್ಣ ಅವರು ಬೆಂಬಲಿಗರ ಸಭೆ ನಡೆಸಿ‌ ಅಸಮಾಧಾನ ಹೋರ ಹಾಕಿದ್ದಾರೆ.

ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲುತ್ತೆ ಅಂತ ಹೇಳೋಕೆ ನಾನೇನು ಜ್ಯೋತಿಷಿನಾ?

ಸಂಜೆ ಹುಣಸೂರಿನಲ್ಲಿ ನಡೆಯಲಿರುವ ಬಿಜೆಪಿ ಸಭೆಯಲ್ಲಿ ಬೆಂಬಲಿಗರೊಂದಿಗೆ ರಾಜಣ್ಣ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಹುಣಸೂರಿನ ಚಿಲ್ಕುಂದ ಜಿಲ್ಲೆಯಲ್ಲಿ ಹೆಚ್ಚು ಪ್ರಭಾವ ಹೊಂದಿರುವ ರಾಜಣ್ಣ ಕುಟುಂಬದಿಂದ ಸದ್ಯ ಅವರ ಪತ್ನಿ ಜಯಲಕ್ಷ್ಮಿ ರಾಜಣ್ಣ ಜಿ.ಪಂ ಸದಸ್ಯೆಯಾಗಿದ್ದಾರೆ.

click me!