'ಸಿಡಿ ಪ್ರಕ​ರ​ಣ​ದ​ಲ್ಲಿ ನಡೆದಿದೆ ಡಿಕೆಶಿ ಸಿಲು​ಕಿ​ಸುವ ಹುನ್ನಾರ'

By Kannadaprabha News  |  First Published Mar 17, 2021, 3:57 PM IST

ರಾಜ್ಯದಲ್ಲಿ ಸೀಡಿ ಪ್ರಕರಣ ಸಾಕಷ್ಟು ಕೋಲಾಹಲವನ್ನೇ ಸೃಷ್ಟಿಸಿದ್ದು ಇದೀಗ ಹೊಸ ಆರೋಪ ಒಂದನ್ನು ಮಾಡಲಾಗಿದೆ. ಸೀಡಿ ಪ್ರಕರಣದಲ್ಲಿ ಡಿಕೆಶಿ ಸಿಲುಕಿಸುವ ತಂತ್ರದ ಬಗ್ಗೆ ಮುಖಂಡರೋರ್ವರು ಮಾತನಾಡಿದ್ದಾರೆ. 


ಮಾಗಡಿ (ಮಾ.17):  ಮಾಜಿ ಸಚಿವರ ಸಿಡಿ ಪ್ರಕ​ರ​ಣ​ದಲ್ಲಿ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಅವ​ರನ್ನು ಸಿಲು​ಕಿ​ಸುವ ಹುನ್ನಾರ ನಡೆ​ಯು​ತ್ತಿದೆ ಎಂದು ಮಾಜಿ ಶಾಸಕ ಎಚ್‌.ಸಿ. ​ಬಾ​ಲ​ಕೃಷ್ಣ ದೂರಿ​ದ​ರು.

ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಸಿಡಿ ಪ್ರಕ​ರ​ಣ​ದಲ್ಲಿ ಡಿ.ಕೆ.​ಶಿ​ವ​ಕು​ಮಾರ್‌ ಅವ​ರನ್ನು ಅನಾ​ವ​ಶ್ಯ​ಕ​ವಾಗಿ ಎಳೆ​ತ​ರುವ ಕೆಲ​ಸವನ್ನು ಬೇರೆ​ಯ​ವರು ಮಾಡು​ತ್ತಿ​ದ್ದಾರೆ. ಕೆಲವೇ ದಿನ​ಗ​ಳಲ್ಲಿ ಸತ್ಯಾ​ಸ​ತ್ಯತೆ ಹೊರ ಬರ​ಲಿದೆ. ಯಾರು ಮಾಡಿದ್ದಾರೊ ಅವರು ಅನುಭವಿಸುತ್ತಾರೆ ಎಂದರು.

Latest Videos

undefined

ಸಾಮಾ​ಜಿಕ ಜವಾ​ಬ್ದಾರಿ ಹೊಂದಿ​ರುವ ಚುನಾಯಿತ ಪ್ರತಿನಿಧಿಗಳು ಕಚ್ಚೆ, ಬಾಯಿ ಭದ್ರವಾಗಿಟ್ಟುಕೊಂಡು ಹುಷಾರಾಗಿರಬೇಕು. ಯಾರೋ ಏನು ಮಾಡಿದ್ದಾರೆ ಎಂದು ಅವರಿವರ ಮೇಲೆ ಆರೋಪ, ಗೂ​ಬೆ ಕೂರಿಸುವ ಮುನ್ನಾ ಸಮಾಜದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ಕಲಿಯಬೇಕು. ರಾಜಕೀಯ ​ಕೋಪಕ್ಕಾಗಿ ಯಾರ ಮೇಲೆ ಯಾರು ಸೇಡು ತೀರಿಸಿಕೊಂಡಿದ್ದಾರೊ ಗೊತ್ತಿಲ್ಲ . ಇಂತಹ ಘಟನೆಗಳು ರಾಜ್ಯದಲ್ಲಿ ನಡೆಯಬಾರದು ರಾಜಕಾರಣಿಗಳಾದವರು ಎಚ್ಚ​ರಿ​ಕೆ​ಯಿಂದ ಇರ​ಬೇಕು ಎಂಬು​ದಕ್ಕೆ ಇದು ಸಾಕ್ಷಿಯಾಗಿದೆ ಎಂದರು.

ಇತ್ತ ಪೋಷಕರ ದೂರು..ಅತ್ತ ಪೊಲೀಸರು ಆಕ್ಟೀವ್... ಸ್ಪೆಷಲ್ ಟೀಂ ರೆಡಿ! ...

ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿ ವಿರೋಧಿ ನಾನಲ್ಲ, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಶಾಸರಿಗೆ ಶಕ್ತಿ ಬೇಕು. ಶಕ್ತಿ ಬೇಕಾದರೆ 5 ವರ್ಷಕ್ಕೊಮ್ಮೆ ಅಡಳಿತ ಪಕ್ಷ ಬರಬೇಕು. ಎರಡು ರಾಷ್ಟ್ರೀಯ ಪಕ್ಷಗಳು 5 ವರ್ಷಕ್ಕಾದರು ಅಧಿಕಾರಕ್ಕೆ ಬರುತ್ತವೆ. ಎಚ್‌.ಡಿ.ಕುಮಾರಸ್ವಾಮಿ ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆಂದು 20 ವರ್ಷಗಳ ಒಡನಾಟ ಇಟ್ಟುಕೊಂಡಿದ್ದೆವು. ಪ್ರಥಮವಾಗಿ ಮುಖ್ಯಮಂತ್ರಿಯಾದ 20 ತಿಂಗಳ ವೇಳೆ ಉತ್ತಮ ಅಡಳಿತ ನೀಡಿ ಹೆಸರು ಗಳಿಸಿದರು. ಎರಡನೇ ಬಾರಿ ಮುಖ್ಯಮಂತ್ರಿಯಾದ ವೇಳೆ ದಿಕ್ಕು ತಪ್ಪಿದರು. ಒಂದು ಬಾರಿ ಅಧಿಕಾರ ಬಂದ ನಂತರ ಜವಾಬ್ದಾರಿಯುತವಾಗಿ ನಡೆಸಿಕೊಂಡು ರಾಜ್ಯದ ಅಭಿವೃದ್ಧಿಗೆ ವಿನಿಯೋಗಿಸಬೇಕಿತ್ತು. ಇರುವ ಅಧಿಕಾರ ಉಳಿ​ಸಿ​ಕೊ​ಳ್ಳ​ಲಾ​ಗದೆ ಬೇರೆ​ಯ​ವ​ರನ್ನು ದೂರು​ವುದು ಸರಿ​ಯಲ್ಲ ಎಂದು ಹೇಳಿ​ದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾದ ವೇಳೆ ನೀಡಿದ ಕಾಮಗಾರಿ ವಾಪಸ್ಸು ಪಡೆದಿದ್ದಾರೆಂದು ವಿಧಾನಸೌಧದಲ್ಲಿ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಧರಣಿ ಕೂರುತ್ತೇನೆ ಎಂಬ ಪರಿಸ್ಥಿತಿ ಬಂದಿದೆ ಎಂದರೆ ಜೆಡಿಎಸ್‌ನ ಸಾಮಾನ್ಯ ಶಾಸಕರ ಕಥೆ ಏನಾಗ​ಬೇಕು ಎಂದು ಪ್ರಶ್ನಿ​ಸಿ​ದರು.

ಜೆಡಿಎಸ್‌ನಲ್ಲಿ ನಾನಿದ್ದಿದ್ದರೆ ಶಾಸಕನಾಗಬಹುದಾಗಿತ್ತು ಅಷ್ಟೆ. ಅಡಳಿತ ಪಕ್ಷದಲ್ಲಿದ್ದರೆ ಯಾವ ಅಭಿವೃದ್ಧಿ ಬೇಕಾದರು ಮಾಡಬಹುದು. ಗುಬ್ಬಿ ಶಾಸಕ ವಾಸು, ಜಿ.ಟಿ.ದೇವೇಗೌಡ ಸೇರಿದಂತೆ ಅ​ನೇ​ಕರು ಚುನಾವಣೆ ಘೋಷಣೆಯಾದರೆ ಜೆಡಿಎಸ್‌ ತೊರೆ​ಯ​ಲಿ​ದ್ದಾರೆ. ಇದಕ್ಕೆ ಕುಮಾರಸ್ವಾಮಿ ಕಾರಣವೇ ಹೊರತು ಬೇರೆ ಯಾರೂ ಅಲ್ಲ.

ಎಚ್‌.ಸಿ.ಬಾಲ​ಕೃಷ್ಣ, ಮಾಜಿ ಶಾಸಕ

click me!