ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳ ಕ್ರಾಸ್ ಬಳಿ ನಡೆದ ಘಟನೆ| ಕಬಡ್ಡಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಕ್ರೀಡಾಪಟುಗಳು| ಈ ಸಂಬಂಧ ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು|
ವಿಜಯಪುರ(ಮಾ.17): ಲಾರಿ ಹಾಗೂ ಟವೇರಾ ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಕ್ರೀಡಾಪಟುಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳ ಕ್ರಾಸ್ ಬಳಿ ಇಂದು(ಬುಧವಾರ) ನಡೆದಿದೆ.
ಮಹಾರಾಷ್ಟ್ರದ ಮೂಲದವ ಸೊಹೇಲ್ (22), ಮಹಾದೇವ (20) ಸಾವನ್ನಪ್ಪಿದ ದುರ್ದೈವಿ ಕ್ರೀಡಾಪಟುಗಳಾಗಿದ್ದಾರೆ. ಹುಬ್ಬಳ್ಳಿ ಕಡೆಗೆ ಕಬಡ್ಡಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಮೂವರು ಕ್ರೀಡಾಪಟುಗಳು ಹೊರಟಿದ್ದರು ಎಂದು ತಿಳಿದು ಬಂದಿದೆ.
ಸದನದಲ್ಲಿ ಮತ್ತೆ ಗುಡುಗಿದ ಬಸನಗೌಡ ಪಾಟೀಲ್ ಯತ್ನಾಳ್...!
ಜವಯಾರನ ಅಟ್ಟಹಾಸಕ್ಕೆ ಇಬ್ಬರು ಕ್ರೀಡಾಪಟುಗಳು ಸಾವನ್ನಪ್ಪಿದ್ದರೆ, ಓರ್ವ ಕ್ರೀಡಾಪಟು ಗಾಯಗೊಂಡಿದ್ದಾರೆ. ಗಾಯಾಳುವನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.