ದೇಶದಲ್ಲಿ ನಿರಂಕುಶ ಆಡಳಿತ ನಡೆಸುತ್ತಿರುವ ಮೋದಿಯು ಜನರ ಅಭಿವೃದ್ಧಿ ಬಯಸಿಲ್ಲ. ಬಂಡವಾಳ ಶಾಹಿಗಳ ಪರ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್ ಆಂಜನೇಯ ವಾಗ್ದಾಳಿ ನಡೆಸಿದರು.
ಚಿತ್ರದುರ್ಗ [ಡಿ. 24]: ನಮ್ಮ ಭಾರತ ಒಂದೇ ಧರ್ಮಕ್ಕೆ ಸೇರಿದ ದೇಶವಲ್ಲ. ಇದು ಸರ್ವಧರ್ಮೀಯರಿಗೂ ಸೇರಿದ ದೇಶವಾಗಿದೆ ಎಂದು ಮಾಜಿ ಸಚಿವ ಎಚ್ ಆಂಜನೇಯ ಹೇಳಿದರು.
ಚಿತ್ರದುರ್ಗದಲ್ಲಿ ಪೌರತ್ವ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್ ಆಂಜನೇಯ ನಮ್ಮ ದೇಶದಲ್ಲಿ ಹಿಂದೂ ಮುಸ್ಲಿಂ, ಸಿಖ್, ಪಾರ್ಸಿ ಸೇರಿದಂತೆ ವಿವಿಧ ಧರ್ಮಗಳಿವೆ. ಭಾರತವನ್ನಾಳುವ ಸರ್ಕಾರ ಎಲ್ಲರನ್ನೂ ಒಂದೇ ಎಂದು ಕಾಣಬೇಕು ಎಂದರು.
undefined
ದೇಶದಲ್ಲಿ ಮೋದಿ ಪ್ರಧಾನಿಯಾದ ಮೇಲೆ ಒಂದೂ ಒಳ್ಳೆ ಕೆಲ ಮಾಡಿಲ್ಲ. ಬಂಡವಾಳ ಶಾಹಿಗಳ ಪರವಾಗಿ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ. ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳನ್ನೂ ಕೂಡ ಅವರು ಖರೀದಿ ಮಾಡಿದ್ದಾರೆ. ಅವರ ನಿರಂಕುಶ ಅಧಿಕಾರ ಪ್ರಶ್ನಿಸಿದವರನ್ನು ಬಂಧಿಸುತ್ತಾರೆ ಎಂದು ಆಂಜನೇಯ ವಾಗ್ದಾಳಿ ನಡೆಸಿದರು.
ಮಂಗಳೂರು ಗಲಭೆಗೆ ಸಂಬಂಧಿಸಿದ ಸಮಗ್ರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ಕಿಸಿ
ಐಟಿ ಭಯ ಹುಟ್ಟಿಸುತಿದ್ದಾರೆ. ನಾವು 70 ವರ್ಷ ಆಳ್ವಿಕೆ ನಡೆಸಿದರೂ ಇಂತಹ ಏಕಪಕ್ಷೀಯ ಆಡಳಿತ ಮಾಡಿಲ್ಲ. ಅಚ್ಚೇ ದಿನ್ ಮೋದಿಗೆ ಬಂದಿದೆಯೇ ಹೊರತು ಜನರಿಗಲ್ಲ. ಪ್ರಧಾನಿ ಮೋದಿ ಓರ್ವ ಸುಳ್ಳುಗಾರ,ನಾಟಕಕಾರ. ದೇಶದ ಅಮಾಯಕ ಕಾರ್ಮಿಕರು,ದಲಿತರು,ಮುಸ್ಲಿಮರನ್ನು ಶೋಷಣೆ ಮಾಡಲು ಪ್ರಧಾನಿ ಆಗಿದ್ದಾರೆ ಎಂದು ಆಂಜನೇಯ ಹೇಳಿದರು.
ಮುಸ್ಲಿಮರ ಜೊತೆಗೆ ಹಿಂದೂಗಳು ಸದಾ ಇರುತ್ತೇವೆ. ಸರ್ವಾಧಿಕಾರಿ ಧೋರಣೆ ವಿರುದ್ಧ ಹೋರಾಡೋಣ ಎಂದು ಮಾಜಿ ಸಚಿವ ಆಂಜನೇಯ ಕರೆ ನೀಡಿದರು.