ನೋಡಿ ಹೋದ ಕೆಲವೇ ನಿಮಿಷದಲ್ಲಿ ಕುಸಿದ ಸೇತುವೆ, ಅಪಾಯದಿಂದ ಪರಮೇಶ್ವರ್ ಪಾರು

By Suvarna News  |  First Published Aug 26, 2022, 7:53 PM IST

ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸ್ವಲ್ಪದರಲ್ಲೇ ಭಾರೀ ಅನಾಹುತದಿಂದ ಪಾರಾಗಿದ್ದಾರೆ. ಅಂತಹದ್ದೆನಾಯ್ತು ಎನ್ನುವುದನ್ನು ನೋಡಿ.


ತುಮಕೂರು, (ಆಗಸ್ಟ್.26):ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಭೇಟಿ ನೀಡಿ ಇನ್ನೇನು ಅಲ್ಲಿಂದ ಹೊರಟ ಐದೇ ನಿಮಿಷದಲ್ಲೇ ತೀತಾ ಸೇತುವೆ ಕುಸಿದುಬಿದ್ದಿದೆ.ಅದೃಷ್ಟವಶಾತ್ ಪರಮೇಶ್ವರ್ ಸ್ವಲ್ಪದರಲ್ಲೇ ಭಾರೀ ಅನಾಹುತದಿಂದ ಪಾರಾಗಿದ್ದಾರೆ

ಹೌದು.. ಪರಮೇಶ್ವರ್ ಭೇಟಿ ಬಳಿಕ 5 ನಿಮಿಷಕ್ಕೆ ಕೊರಟಗೆರೆ ತಾಲ್ಲೂಕಿನ ತೀತಾ-ಗೊರವನಹಳ್ಳಿ ನಡುವಿನ ಸೇತುವೆ ಕುಸಿತಗೊಂಡಿದೆ. ತೀತಾ ಸೇತುವೆ ನಿನ್ನೆ (ಆ 25) ರಾತ್ರಿ ಸುರಿದ ಮಳೆಗೆ ಮುಂಜಾನೆ ಅರ್ಧ ಕುಸಿದಿತ್ತು.ಸೇತುವೆ ಕುಸಿತ ಹಿನ್ನೆಲೆ ಇಂದು(ಶುಕ್ರವಾರ) ಸಂಜೆ ಡಾ.ಜಿ ಪರಮೇಶ್ವರ್ ಅವರು ತಹಶೀಲ್ದಾರ್ ಜೊತೆಗೆ ಭೇಟಿ ನೀಡಿದ್ದರು. 

Tap to resize

Latest Videos

ರಾಜ್ಯ, ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭೇಟಿ ವೇಳೆ ಸೇತುವೆ ಮೇಲೆ ನಿಂತು ಸೇತುವೆ ಕುಸಿತವನ್ನು ವೀಕ್ಷಿಸಿದ್ದು, ಸೇತುವೆ ಸರಿ ಪಡಿಸುವಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆ ನೀಡಿ ಮುಂದೆ ಹೋದ 5 ನಿಮಿಷಕ್ಕೆ ಸೇತುವೆಯ ಇನ್ನೊಂದು ಭಾಗ ಕುಸಿತಗೊಂಡಿದೆ.

 ಪರಮೇಶ್ವರ್ ನಿಂತು ವೀಕ್ಷಿಸಿದ್ದ ಸ್ಥಳವೂ ಸಹ ಕುಸಿತಗೊಂಡಿದೆ. ಇದರಿಂದ ಡಾ.ಜಿ.ಪರಮೇಶ್ವರ್ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ತೀತಾ ಡ್ಯಾಂ ನಿಂದ ನೀರು ಹರಿಯುವ ಹಳ್ಳಕ್ಕೆ ಅಡ್ಡಲಾಗಿ ಈ ಸೇತುವೆ ನಿರ್ಮಿಸಲಾಗಿದೆ.

ರಾಜ್ಯದಲ್ಲಿ ಇನ್ನೂ 5 ದಿನ ಮಳೆ ಮುನ್ಸೂಚನೆ
ನೈರುತ್ಯ ಮುಂಗಾರು ಚುರುಕಾಗಿರುವ ಹಿನ್ನೆಲೆ ರಾಜ್ಯದಲ್ಲಿ ಇನ್ನು 5 ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರವಾಳಿ, ಉತ್ತರ ಒಳನಾಡು, ದಕ್ಷಿಣ ಒಳನಾಡಿಗೂ ಹವಮಾನ ಇಲಾಖೆ ಅಲರ್ಟ್ ಘೋಷಣೆ ಮಾಡಿದೆ. ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯಾತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿಗೆ ಇನ್ನು 5 ದಿನ ಮಳೆ ಇರಲಿದ್ದು, ಇಂದು (ಆ.26) ಯೆಲ್ಲೋ ಅಲರ್ಟ್ ನೀಡಲಾಗಿದೆ. ದಕ್ಷಿಣ ಒಳನಾಡಿಗೆ ಮುಂಗಾರು ಚುರುಕಾಗಿದ್ದು ಯಲ್ಲೋ ಅಲರ್ಟ್ ನೀಡಿದ್ದು, ಕೆಲವೊಮ್ಮೆ ಅತಿಭಾರಿ ಮಳೆಯಾಗುವ ಸಾಧ್ಯತೆ ಇದೆ.

ಉತ್ತರ ಒಳನಾಡಿಗೆ ಇಂದು ಮಾತ್ರ ಯಲ್ಲೋ ಅಲರ್ಟ್ ನೀಡಿದ್ದು ಬಾಗಲಕೋಟೆ, ಗದಗ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯಾತೆ ಇದೆ ಎಂದು ಮುನ್ಸೂಚನೆ ನೀಡಿದೆ.

click me!