Davanagere; ಮಾಯಕೊಂಡ ತಾಲೂಕು ಕೇಂದ್ರ ಘೋಷಣೆ ಮಾಡಲು ಮುಂದುವರಿದ ಹೋರಾಟ

Published : Aug 26, 2022, 06:00 PM IST
Davanagere; ಮಾಯಕೊಂಡ ತಾಲೂಕು ಕೇಂದ್ರ ಘೋಷಣೆ ಮಾಡಲು ಮುಂದುವರಿದ ಹೋರಾಟ

ಸಾರಾಂಶ

ದಾವಣಗೆರೆ ಜಿಲ್ಲೆಯ ಮಾಯಕೊಂಡ  ತಾಲೂಕು ಕೇಂದ್ರ ಘೋಷಣೆಗೆ ಒತ್ತಾಯಿಸಿ  ಇಂದು ಮಾಯಕೊಂಡ ತಾಲೂಕು ಹೋರಾಟ ಸಮಿತಿಯಿಂದ  ಪ್ರತಿಭಟನೆ ನಡೆಯಿತು.

ವರದಿ : ವರದರಾಜ್ ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ (ಆ. 26): ದಾವಣಗೆರೆ ಜಿಲ್ಲೆಯ ಮಾಯಕೊಂಡ  ತಾಲೂಕು ಕೇಂದ್ರ ಘೋಷಣೆಗೆ ಒತ್ತಾಯಿಸಿ  ಇಂದು ಮಾಯಕೊಂಡ ತಾಲೂಕು ಹೋರಾಟ ಸಮಿತಿಯಿಂದ  ಪ್ರತಿಭಟನೆ ನಡೆಯಿತು. ಮಾಯಕೊಂಡವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸುವಂತೆ ಮಾಯಕೊಂಡ ಗ್ರಾಮಸ್ಥರಿಂದ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಎಂ ಎಸ್ ಕೆ ಶಾಸ್ತ್ರೀ  ನೇತೃತ್ವದಲ್ಲಿ ಮಾಯಕೊಂಡ ತಾಲೂಕು ಹೋರಾಟ  ಸಮಿತಿಯಿಂದ ನಡೆದ  ಪ್ರತಿಭಟನೆಯಲ್ಲಿ ನೂರಾರು ಜನ ಭಾಗವಹಿಸಿದ್ದರು‌. ಕಳೆದ ಒಂದು ದಶಕದಿಂದ ತಾಲೂಕು ಕೇಂದ್ರಕ್ಕೆ ಆಗ್ರಹಿಸಿ ಹೋರಾಟ ನಡೆಯುತ್ತಿದೆ. ಕಳೆದ ವಿಧಾನ ಸಭೆ ಚುನಾವಣೆ ವೇಳೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು  ಭರವಸೆ ನೀಡಿದ್ದರು. ಈ ಬಾರಿ ಬಿಜೆಪಿ ಗೆಲ್ಲಿಸಿದ್ರೆ  ತಾಲೂಕು ಕೇಂದ್ರ ಮಾಡುತ್ತೇನೆ ಎಂದು ಭರಸವೆ ನೀಡಿದ್ರು‌. ಆದ್ರೆ ಮತ್ತೊಂದು ಚುನಾವಣೆ ಬಂದ್ರು ತಾಲೂಕು ಕೇಂದ್ರ ಮರೀಚಿಕೆಯಾಗಿಯೇ ಉಳಿದಿದೆ. ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಸರ್ಕಾರದ ಅವಧಿ ಇನ್ನು ಆರು ತಿಂಗಳು ಇದ್ದು ಮುಂದಿನ ಅಧಿವೇಶನದಲ್ಲಾದ್ರು ತಾಲೂಕು ಘೋಷಣೆಯಾಗಲಿ ಎಂದರು. ಸರ್ಕಾರ ತೀರ್ಮಾನ ತೆಗೆದುಕೊಳ್ಳದಿದ್ದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. 

ಮಾಯಕೊಂಡ ತಾಲೂಕು ಕೇಂದ್ರವಾಗಲು ಸಾಕಷ್ಟು  ಅರ್ಹತೆಗಳಿವೆ:
ಮಾಯಕೊಂಡ  ತಾಲೂಕು ಕೇಂದ್ರ ಆಗಬೇಕೆಂದು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಕಾಲದಿಂದಲು ಹೋರಾಟ ನಡೆದಿದೆ. ಮಾಯಕೊಂಡ ತಾಲೂಕು ಗಾಗಿ  ದಶಕಗಳ‌ ಹೋರಾಟದ ಇತಿಹಾಸವಿದೆ. ಮಾಯಕೊಂಡದಲ್ಲಿ 18500 ಜನಸಂಖ್ಯೆ ಇದೆ.ಮತದಾರರ ಸಂಖ್ಯೆ 12 ಸಾವಿರ ಇದೆ. ಮಾಯಕೊಂಡ ಟು ದಾವಣಗೆರೆ 32 ಕಿ ಮೀ ಇದೆ.

ಹೊನ್ನಾಳಿ ನ್ಯಾಮತಿಗೆ ಕೇವಲ 11 ಕಿ ಮೀ ಇದೆ ಆದ್ರೆ ನ್ಯಾಮತಿ  ತಾಲೂಕು ಕೇಂದ್ರವಾಗಿದೆ ಆದ್ರೆ ಮಾಯಕೊಂಡ  ತಾಲೂಕು ಕೇಂದ್ರವಾಗಿ ಘೋಷಣೆಯಾಗಲಿಲ್ಲ. ಮಾಯಕೊಂಡ  ತಾಲೂಕು ನಲ್ಲಿ ಬರುವ ಹುಚ್ಚವನಹಳ್ಳಿ , ಬಸಾಪುರ, ಕ್ಯಾತನಹಳ್ಳಿ ಕೋಮಾರನಹಳ್ಳಿಗೆ ದಾವಣಗೆರೆ 50 ಕಿ ಮೀ ದೂರ ಇದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಡಿಪ್ಲಮೋ  ಐಟಿಐ ಕಾಲೇಜ್, ಪೊಲೀಸ್ ಠಾಣೆ  ರಾಜ್ಯ ಹೆದ್ದಾರಿ , ರಾಷ್ಟ್ರೀಯ ಹೆದ್ದಾರಿ ಒಳಗೊಂಡಿರುವ ಮಾಯಕೊಂಡ ಕ್ಷೇತ್ರದಲ್ಲಿ 1950 ನೇ ವರ್ಷದಿಂದ ಗ್ರಾಮೀಣ‌ ಜನತೆ  ಸಂಕಷ್ಟ ಅನುಭವಿಸುತ್ತಿದ್ದಾರೆ.

ದಾವಣಗೆರೆ: ರೈತ ಮಹಿಳೆ ಹೊತ್ತೊಯ್ದು ಕೊಂದ ಚಿರತೆ, ಸೆರೆ ಹಿಡಿಯಲು ಗ್ರಾಮಸ್ಥರ ಪ್ರತಿಭಟನೆ

ಮಾಯಕೊಂಡ ವಿಧಾನಸಭಾ ಕ್ಷೇತ್ರ ಘೋಷಣೆಯಾಗಿ ಇಲ್ಲಿಂದ ಗೆದ್ದ ಶಾಸಕರು ಸಚಿವರಾಗಿ ಅಧಿಕಾರ ಅನುಭವಿಸಿದರು.ಈಗಲು ಎಸ್ಸಿ ಮೀಸಲು ಕ್ಷೇತ್ರವಾಗಿ ಇಡೀ ರಾಜ್ಯದಲ್ಲೇ ತನ್ನದೆಯಾದ ಪ್ರಾಮುಖ್ಯತೆ ಹೊಂದಿದೆ.

ಯಾರಾಗ್ತಾರೆ ದಾವಣಗೆರೆ ಮೇಯರ್, ಉಪಮೇಯರ್? ಬಿಜೆಪಿಯಲ್ಲಿ ಶುರುವಾಗಿದೆ

ಆದ್ರು ತಾಲೂಕು ಕೇಂದ್ರವಾಗಿ ಘೋಷಣೆಯಾಗದಿರುವುದು ಮಾಯಕೊಂಡಕ್ಕೆ ಎಸಗಿದ ದ್ರೋಹ ಎನ್ನುತ್ತಾರೆ ಮಾಯಕೊಂಡ ತಾಲೂಕ್ ಹೋರಾಟ ಸಮಿತಿ ಮುಖಂಡ ಎಂ ಎಸ್ ಕೆ ಶಾಸ್ತ್ರೀ. ಈ ಹಿಂದೆ ದಾವಣಗೆರೆ ವಿಶ್ವವಿದ್ಯಾಲಯ ಘೋಷಣೆಯಾಗಲು ತನ್ನದೆ ಯಾದ ಹೋರಾಟದ‌ ಕೊಡುಗೆ ನೀಡಿರುವ ಎಂ ಎಸ್ ಕೆ ಶಾಸ್ತ್ರಿ ಈ ಇಳಿವಯಸ್ಸಿನಲ್ಲು ಮಾಯಕೊಂಡ ತಾಲೂಕ್ ಘೋಷಣೆ ಮಾಡಿಸಬೇಕೆಂದು ಅದಮ್ಯ ವಿಶ್ವಾಸದಿಂದ ಹೋರಾಟ ನಡೆಸಿದ್ದಾರೆ.

PREV
Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಮಾಂಸದ ಮುದ್ದೆಯಂಥಾದ ಮೃತದೇಹದ ಮುಂದೆ ಮಗನ ಕಣ್ಣೀರು, ಪಂಚಭೂತದಲ್ಲಿ ಲೀನರಾದ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ!