ಬಹು ದಿನದ ಮುನಿಸು ಮರೆತು ಹೆಚ್ ಡಿ ಕುಮಾರಸ್ವಾಮಿ ಜೊತೆ ಜಿ ಟಿ.ದೇವೇಗೌಡ ವೇದಿಕೆ ಹಂಚಿಕೊಂಡಿದ್ದಾರೆ. ಹುಣಸೂರಿನಲ್ಲಿ ನಡೆದ ಕೆಂಪೇಗೌಡರ 513ನೇ ಜಯಂತಿಯಲ್ಲಿ ಈ ಸನ್ನಿವೇಶ ನಡೆದಿದೆ.
ಮೈಸೂರು (ಆ.26): ದಳಪತಿಗಳ ತೆನೆಯಿಂದ ಉದುರಿ ಹೋಗುತ್ತಿದ್ದ ದಳವೊಂದು ಮತ್ತೆ ತೆನೆ ಸೇರಿಕೊಂಡಿದೆ. ನಾಯಕರ ಮೇಲಿನ ಬಹು ದಿನದ ಮುನಿಸು ಮರೆತು ಹೆಚ್ ಡಿ ಕುಮಾರಸ್ವಾಮಿ ಜೊತೆ ಜಿ ಟಿ.ದೇವೇಗೌಡ ವೇದಿಕೆ ಹಂಚಿಕೊಂಡಿದ್ದಾರೆ. ಹುಣಸೂರಿನಲ್ಲಿ ನಡೆದ ಕೆಂಪೇಗೌಡರ 513ನೇ ಜಯಂತಿಯಲ್ಲಿ ಹೆಚ್‌ಡಿಕೆ ಜಿಟಿಡಿ ಹೊಂದಾಗಲು ಆದಿಚುಂಚನಗಿರಿಯ ನಿರ್ಮಲಾನಂದ ನಾಥ ಸ್ವಾಮೀಜಿ ಕಾರಣೀ ಭೂತರಾದರು. ರಾಜ್ಯದಲ್ಲಿ ಸಂಮಿಶ್ರ ಸರ್ಕಾರ ಅಧಿಕಾರ ಬಂದಾಗಲಿಂದ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಮ್ಮನ್ನ ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಕಾರಣಕ್ಕೆ ಚಾಮುಂಡೇಶ್ವರಿ ಕ್ಷೇತ್ರದ ಶಾಸದ ಜಿ.ಟಿ. ದೇವೇಗೌಡ ಪಕ್ಷದಿಂದ ಅಂತ ಕಾಯ್ದು ಕೊಂಡಿದ್ದರು.
ತಮ್ಮ ಜೊತೆಗೆ ಮಗನ ಭವಿಷ್ಯವನ್ನು ಮುಂದಿಟ್ಟುಕೊಂಡು ಬಿಜೆಪಿ ಹಾಗೂ ಕಾಂಗ್ರೆಸ್ ಜೊತೆಗೆ ಮೈತ್ರಿ ಸಾಧಿಸಲು ಸಾಕಷ್ಟು ಕಸರತ್ತು ನಡೆಸಿದ್ದರು. ಮುಂದಿನ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಎರಡೂ ರಾಷ್ಟ್ರೀಯ ಪಕ್ಷಗಳ ಜೊತೆ ನಡೆಸಿದ ಮಾತುಕತೆ ಮುರಿದು ಬಿದ್ದಿದೆ. ಅದರ ಪರಿಣಾಮ ಜಿ ಟಿ. ದೇವೇಗೌಡ ಜೆಡಿಎಸ್ ಪಕ್ಷದಲ್ಲೇ ಉಳಿದುಕೊಂಡಿದ್ದು, ಇಂದು ವರಿಷ್ಠ ಹೆಚ್‌ಡಿ. ಕುಮಾರಸ್ವಾಮಿ ಜೊತೆಗೆ ವೇದಿಕೆ ಹಂಚಿಕೊಂಡರು.
undefined
ಹುಣಸೂರು ತಾಲೂಕು ಒಕ್ಕಲಿಗರ ಸಂಘವು ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜನೆ ಮಾಡಿದ್ದ 513ನೇ ಕೆಂಪೇಗೌಡ ಜಯಂತಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಶಾಸಕ ಜಿಟಿ.ದೇವೇಗೌಡ ಒಟ್ಟಿಗೆ ವೇದಿಕೆ ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಭಾಷಣ ಮಾಡಿದ ಶಾಸಕ ಜಿಟಿ.ದೇವೇಗೌಡ ಕುಮಾರಸ್ವಾಮಿಯನ್ನು ಹಾಡಿ ಹೊಗಳಿದರು. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ಕಟ್ಟಿರುವ ಪಕ್ಷವನ್ನು ನೀವು ಉಳಿಸಿ ಬೆಳೆಸಬೇಕು ಅಂತ ಕೇಳಿಕೊಂಡರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ: ರಾಧಾಕೃಷ್ಣ
ನಂತರ ಭಾಷಣ ಮಾಡಿದ ಹೆಚ್.ಡಿ.ಕುಮಾರಸ್ವಾಮಿ ಜಿಟಿಡಿ ಜೊತೆಗೆ ದೊಡ್ಡ ಮಟ್ಟದ ಬಿನ್ನಾಭಿಪ್ರಯಾ ಇರಲಿಲ್ಲ ಎಂದರು. ಮುಂದಿನ ಚುನಾವಣೆ ದೃಷ್ಟಿಯಿಂದ ಜಿಟಿ.ದೇವೇಗೌಡ ನೀಡಿರುವ ಸಲಹೆಗಳನ್ನು ಪಾಲನೆಮಾಡುತ್ತೇ ಎಂದಿದ್ದಾರೆ.
ಕೆ.ಎನ್.ರಾಜಣ್ಣ, ಜೆಡಿಎಸ್ ಶಾಸಕ ಗೌರಿ ಶಂಕರ್‌ಗೆ ಓಪನ್ ಆಫರ್ ಕೊಟ್ಟ ಬಿಜೆಪಿ ನಾಯಕ
ಇನ್ನು ವೇದಿಕೆ ತುಂಬೆಲ್ಲ ಇಬ್ಬರೂ ನಾಯಕರ ಪರಸ್ಪರ ಪಕ್ಕದಲ್ಲೇ ಕುಳಿತು ಮಾತುಕತೆ ನಡೆಸುತ್ತಿದ್ದುದು ಎಲ್ಲರ ಗಮನ ಸೆಳೆಯಿತು. ಮುಂದಿನ ಚುನಾವಣೆಯಲ್ಲಿ ಮಗ ಹರೀಶ್ ಗೌಡಗೆ ಟಿಕೆಟ್ ಬಯಸಿರುವ ಜಿಟಿಡಿಗೆ ಎರಡೂ ರಾಷ್ಟ್ರೀಯ ಪಕ್ಷಗಳು ಬಾಗಿಲು ಮುಚ್ಚಿವೆ. ಇತ್ತ ಮೈಸೂರು ಭಾಗದಲ್ಲಿ ಜೆಡಿಎಸ್ ತನ್ನ ಪ್ರಾಬಲ್ಯ ಮೆರೆಯಲು ಜಿಟಿಡಿ ಅವಶ್ಯಕತೆ ಇದ್ದು, ನಾಯಿಯು ಹಸಿದಿತ್ತು, ರೊಟ್ಟಿಯೂ ಹಳಸಿತ್ತು ಎನ್ನುವಂತಾಗಿದೆ ದಳಪತಿಗಳ ಈ ಪರಿಸ್ಥಿತಿ.