‘ನೆಕ್ಸ್ಟ್‌ಸಿಎಂ’ ಎಂದು ಅಭಿಮಾನಿಗಳ ಜೈಕಾರ

By Kannadaprabha News  |  First Published Jun 28, 2021, 8:11 AM IST
  • ಕೊರೋನಾಗೆ ಬಲಿಯಾದ ಕೈ ಮುಖಂಡನ ಮನೆಗೆ ಡಿಕೆಶಿ ಭೇಟಿ
  • ಮುಂದಿನ ಸಿಎಂ ಎಂದು ಘೋಷಣೆ ಕೂಗಿದ ಅಭಿಮಾನಿಗಳು
  • ನಾನಾ ಚರ್ಚೆಗೆ ಕಾರಣವಾದ ಮುಂದಿನ ಸಿಎಂ ಘೋಷಣೆ

ಕೊಳ್ಳೇಗಾಲ (ಜೂ.28): ಕೊರೋನಾಗೆ ಬಲಿಯಾದ ಹನೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ, ಇಕ್ಕಡಹಳ್ಳಿಯ ಕೆಂಪಯ್ಯ ಅವರ ಮನೆಗೆ ಶಿವಕುಮಾರ್‌ ಭೇಟಿ ನೀಡಿದರು.

ಕುಟುಂಬಕ್ಕೆ ಸಾಂತ್ವಾನ ಹೇಳಿ ಹಿಂತಿರುಗುವ ವೇಳೆ ಅಭಿಮಾನಿಗಳು ‘ನೆಕ್ಟ್ ಸಿಎಂ, ನೆಕ್ಟ್ ಸಿಎಂ’(ಮುಂದಿನ ಸಿಎಂ, ಮುಂದಿನ ಸಿಎಂ) ಎಂದು ಜೈಕಾರ ಕೂಗಿದರು. 

Tap to resize

Latest Videos

undefined

ಈ ಹಿಂದೆ ಸಿದ್ದರಾಮಯ್ಯ, ಬಳಿಕ ಪರಮೇಶ್ವರ್‌ ಹಾಗೂ ಈಗ ಶಿವಕುಮಾರ್‌ ಅವರನ್ನು ಮುಂದಿನ ಸಿಎಂ ಎಂದು ಅಭಿಮಾನಿಗಳು ಘೋಷಣೆ ಕೂಗುತ್ತಿರುವುದು ನಾನಾ ರೀತಿಯ ಚರ್ಚೆಗೆ ಕಾರಣವಾಗಿದೆ.

ರಾಜ್ಯದಲ್ಲಿ ಇಳಿದ ಕೊರೋನಾ ಕೇಸ್‌: ಪಾಸಿಟಿವಿಟಿ ದರ ಶೇ 2.18ಕ್ಕೆ ಇಳಿಕೆ

ಕೊರೋನಾದಿಂದ ಜಿಲ್ಲೆಯಲ್ಲಿ ಮೃತರಾದವರ ಮನೆಗಳಿಗೆ ಭೇಟಿ ನೀಡಿ, ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಆಕ್ಸಿಜನ್‌ ದುರಂತದಲ್ಲಿ ಸತ್ತವರನ್ನು ಕೇವಲ 3 ಮಂದಿ ಎಂದು ಹೇಳಿದೆ. ಕೋರ್ಟ್‌ ಇದನ್ನು ಗಮನಿಸಿ, ಇಬ್ಬರು ನ್ಯಾಯಾ​ಧೀಶರನ್ನು ನೇಮಿಸಿ ತನಿಖೆ ನಡೆಸಿ ಸತ್ತವರು ಮೂರು ಮಂದಿ ಅಲ್ಲ 36 ಮಂದಿ ಎಂದು ವರದಿ ಮಾಡುವ ಮೂಲಕ ನೊಂದವರಿಗೆ ನ್ಯಾಯ ಸಿಗುವಂತೆ ಮಾಡಿ, ತಲಾ 2 ಲಕ್ಷ ಪರಿಹಾರ ಕೊಡಿಸಿದೆ ಎಂದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!