* ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಜಿಗಣೆಹಳ್ಳಿಯಲ್ಲಿ ನಡೆದ ಘಟನೆ
* ಹಾವುಗಳು ಕಚ್ಚಿ ಮೂವರು ಮಹಿಳೆಯರು ಸಾವು
* ಹಾವಿಗೆ ಮೂವರ ಬಲಿ
ಕಡೂರು(ಜೂ.28): ಒಂದೇ ದಿನ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಹಾವುಗಳು ಕಚ್ಚಿ ಮೂವರು ಮಹಿಳೆಯರು ಮೃತಪಟ್ಟಿರುವ ಪ್ರತ್ಯೇಕ ಘಟನೆಗಳು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಶನಿವಾರ ನಡೆದಿದೆ.
ತೋಟದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿ ಪೊಲೀಸ್ ಪೇದೆಯೊಬ್ಬರ ಪತ್ನಿ ಅನಿತಾ (33) ಮೃತಪಟ್ಟಿರುವ ಘಟನೆ ಜಿಗಣೆಹಳ್ಳಿಯಲ್ಲಿ ನಡೆದಿದೆ.
ತಾಳಿಕೋಟೆ: ಸೀಟಿನ ಕೆಳಗೆ ಹಾವಿದ್ದರೂ ಗೊತ್ತಿಲ್ಲದೆ ಬೈಕಲ್ಲಿ ಸುತ್ತಿದ..!
ಇನ್ನು ತಾಲೂಕಿನ ನಿಡಘಟ್ಟದಲ್ಲಿ ಸಂಜೆ 7 ಗಂಟೆ ಸಮಯದಲ್ಲಿ ತೋಟದಲ್ಲಿ ಎಡೆಮಟ್ಟೆ ಆರಿಸುತ್ತಿದ್ದಾಗ ಹಾವು ಕಚ್ಚಿ ಶಾರದಾ ಬಸಪ್ಪ (65) ಸಾವನ್ನಪ್ಪಿದ್ದಾರೆ. ಟೊಮೆಟೋ ಕೊಯ್ಯುವಾಗ ಹಾವು ಕಚ್ಚಿದ್ದರಿಂದ ಸಖರಾಯಪಟ್ಟಣ ಹೋಬಳಿಯ ಹೊನ್ನೇನಹಳ್ಳಿ ಗ್ರಾಮದ ರತ್ನಮ್ಮ ಮೃತಪಟ್ಟಿದ್ದಾರೆ.