ಲಾಕ್‌ಡೌನ್‌: ಬಡವರಿಗೆ ಕುಂಬಳಕಾಯಿ ಹಂಚಿದ ಕಾಂಗ್ರೆಸ್ ಮುಖಂಡ

By Kannadaprabha NewsFirst Published May 9, 2020, 11:47 AM IST
Highlights

ತಮ್ಮ ಜಮೀನಿನಲ್ಲಿ ಕುಂಬಳಕಾಯಿ ಬೆಳೆದು ಲಾಕ್‌ ಡೌನ್‌ನಿಂದಾಗಿ ಮಾರಾಟ ಮಾಡಲಾಗದೆ ಆರ್ಥಿಕ ಸಂಕಷ್ಟಕ್ಕೊಳಗಾದ ಪಿರಿಯಾಪಟ್ಟಣ ತಾಲೂಕಿನ ವಿವಿಧೆಡೆಯ ರೈತ ಕುಟುಂಬಗಳ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌ ನೆರವಾಗಿದ್ದಾರೆ.

ಮೈಸೂರು(ಮೇ 09): ತಮ್ಮ ಜಮೀನಿನಲ್ಲಿ ಕುಂಬಳಕಾಯಿ ಬೆಳೆದು ಲಾಕ್‌ ಡೌನ್‌ನಿಂದಾಗಿ ಮಾರಾಟ ಮಾಡಲಾಗದೆ ಆರ್ಥಿಕ ಸಂಕಷ್ಟಕ್ಕೊಳಗಾದ ಪಿರಿಯಾಪಟ್ಟಣ ತಾಲೂಕಿನ ವಿವಿಧೆಡೆಯ ರೈತ ಕುಟುಂಬಗಳ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌ ನೆರವಾಗಿದ್ದಾರೆ.

ಮೇ 7ರ ಕನ್ನಡಪ್ರಭ ಪತ್ರಿಕೆಯಲ್ಲಿ ತಾಲೂಕಿನ ಬೆಕ್ಕರೆ ಗ್ರಾಮದ ರೈತ ನಾರಾಯಣಗೌಡ ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಕುಂಬಳಕಾಯಿ ಕಟಾವು ಮಾಡಿ ಮಾರಾಟ ಮಾಡಲಾಗದ ಸ್ಥಿತಿ ತಲುಪಿ ನಷ್ಟಉಂಟಾಗುವ ಬಗ್ಗೆ ವರದಿ ಪ್ರಕಟವಾಗಿತ್ತು.

'ಆನ್‌ಲೈನ್ ಬೇಡ': ಶಾಲೆ ಕಂಪೌಂಡ್ ಒಳಗಡೆ ನಡೆಯುತ್ತಾ ಪಾಠ..?

ಇದನ್ನು ಗಮನಿಸಿದ ವಿಜಯಕುಮಾರ್‌ ತಕ್ಷಣ ರೈತನ ಮೊಬೈಲ್‌ಗೆ ಕರೆ ಮಾಡಿ ಸಂಕಷ್ಟಆಲಿಸಿದರು. ನಂತÃ ಅವರೇ ಖುದ್ದಾಗಿ ಜಮೀನಿಗೆ ಭೇಟಿ ನೀಡಿ ಕುಂಬಳಕಾಯಿ ಕೊಳ್ಳುವುದರ ಮೂಲಕ ಆರ್ಥಿಕ ನೆರವು ನೀಡಿದರು.

ಇದೇ ವೇಳೆ ತಾಲೂಕಿನ ಕಣಗಾಲು ಗ್ರಾಮದ ರೈತ ಮಹದೇವ್‌ ಅವರು ಸಹ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಕುಂಬಳಕಾಯಿ ಹಾಗೂ ಕೋಸನ್ನು ಸಹ ಖರೀದಿಸುವ ಮೂಲಕ ಅವರಿಗೆ ಆರ್ಥಿಕ ಸಹಾಯ ಮಾಡಿದರು.

ಕೊರೋನಾ ಸೋಂಕಿತ ಮಹಿಳೆಯಿಂದ ಸಂಡೂರಿಗೆ ಆತಂಕ..!

ಗ್ರಾಪಂ ಸದಸ್ಯ ರವಿ, ಮುಖಂಡ ನಂಜಪ್ಪ, ರೈತರಾದ ನಾರಾಯಣ ಗೌಡ, ರುಕ್ಮಾಂಗದಚಾರ್‌, ಚನ್ನೇಗೌಡ, ವೇಣುಗೋಪಾಲ, ನಿವೃತ್ತ ಯೋಧ ಪ್ರದೀಪ್‌, ದರ್ಶನ್‌ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ ಮಂಜು ಇದ್ದರು.

click me!