ಕೊರೋನಾ ಮಧ್ಯೆಯೂ ಹಿಂದೂ ಯುವಕನನ್ನ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ರಾ..?

By Suvarna NewsFirst Published May 9, 2020, 11:35 AM IST
Highlights

ತಮಿಳುನಾಡಿನ ಹಿಂದೂ ಯುವಕನನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿರುವ ಶಂಕೆ| ಕಾರ್ತಿಕ್ ಎಂಬಾತನನ್ನು‌ ಸಾಧಿಕ್ ಎಂದು ಹೆಸರು ಬದಲಾವಣೆ| ಸುಳ್ಳು ದಾಖಲೆ‌‌ ನೀಡಿರುವ ಕುರಿತು ಹಾಗೂ ಮತಾಂತರ ಮಾಡಿರುವ ಬಗ್ಗೆ‌ ಮಾಲೂರು ತಹಶೀಲ್ದಾರ್‌ರಿಂದ ದೂರು| ಮಾಲೂರು ಪೊಲೀಸ್ ಠಾಣೆಗೆ ದೂರು ಪ್ರಕರಣ ದಾಖಲು|

ಕೋಲಾರ(ಮೇ.09): ಮತಾಂತರ ಮಾಡಿ ಹಾಗೂ ಸುಳ್ಳು ಮಾಹಿತಿ ಕೊಟ್ಟು ಹೊರ ರಾಜ್ಯದವರಿಗೆ ಕೋಲಾರದಲ್ಲಿ ‌ಕ್ವಾರಂಟೇನ್ ಮಾಡಲಾಗಿದೆ ಎಂಬ ಆರೋಪವೊಂದು ಕೇಳಿ ಬಂದಿದೆ. ಹೌದು, ಈ ಬಗ್ಗ ಸ್ವತಃ ಜಿಲ್ಲೆಯ ಮಾಲೂರು ತಹಶೀಲ್ದಾರ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಏನಿದು ಪ್ರಕರಣ..? 

ಏಕಾಏಕಿ ದೇಶಾದ್ಯಂತ ಲಾಕ್‌ಡೌನ್‌ ಘೋಷಣೆಯಾಗಿದ್ದರಿಂದ ಜಿಲ್ಲೆಯ ಮಾಲೂರು ತಾಲೂಕಿನ ಕೆಲವರು ಗುಜರಾತ್‌ನ ಸೂರತ್‌ ನಗರದಲ್ಲಿ ಸಿಲುಕಿಕೊಂಡಿದ್ದರು. ಬಳಿಕ ಲಾಕ್‌ಡೌನ್‌ ಸಡಿಲಿಕೆಯಾಗಿದ್ದರಿಂದ ಮೇ. 03 ಹಾಗೂ ಮೇ. 05 ರಂದು 44 ಜನರು ಜಿಲ್ಲೆಗೆ ಆಗಮಿಸಿದ್ದರು.

ಲಾಕ್‌ಡೌನ್‌ ಸಡಿಲ: ಗುಜರಾತ್‌ನಿಂದ ಕೋಲಾರಕ್ಕೆ ಬಂದ 44 ಮಂದಿ, ಹೆಚ್ಚಿದ ಆತಂಕ

ಇವರೆಲ್ಲರಿಗೆ ಚೆಕ್‌ಪೋಸ್ಟ್‌ನಲ್ಲಿ ಆರೋಗ್ಯ ತಪಾಸಣೆ ತಪಾಸಣೆ ಮಾಡುವ ವೇಳೆ ದಾಖಲೆ ಪರಿಶೀಲಿಸುವ ವೇಳೆ ತಮಿಳುನಾಡಿನ ಕಾರ್ತಿಕ್ ಎಂಬಾತನನ್ನು‌ ಸಾಧಿಕ್ ಎಂದು ಹೆಸರು ಬದಲಾವಣೆ ಮಾಡಲಾಗಿತ್ತು. ಹೀಗಾಗಿ ಮಾಲೂರು ತಹಶೀಲ್ದಾರ್ ಅವರು ಸುಳ್ಳು ದಾಖಲೆ‌‌ ನೀಡಿರುವ ಕುರಿತು ಹಾಗೂ ಮತಾಂತರ ಮಾಡಿರುವ ಬಗ್ಗೆ‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿ, ತನಿಖೆಗೆ ಆಗ್ರಹಿಸಿದ್ದಾರೆ.

ಉತ್ತರ ಪ್ರದೇಶದ ಇಬ್ಬರು, ತಮಿಳುನಾಡಿನ ಓರ್ವ ಹಾಗೂ ಪಾದರಾಯನಪುರದ ಓರ್ವನನ್ನು ಕೋಲಾರದಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. 
 

click me!