ಶಾಸಕ ಸಂಗ​ಮೇ​ಶ್‌ ನಡವಳಿಕೆಗೆ ಸಭಾಪತಿ ಹೊರಟ್ಟಿ ಬೇಸರ

Kannadaprabha News   | Asianet News
Published : Mar 07, 2021, 10:27 AM IST
ಶಾಸಕ ಸಂಗ​ಮೇ​ಶ್‌ ನಡವಳಿಕೆಗೆ ಸಭಾಪತಿ ಹೊರಟ್ಟಿ ಬೇಸರ

ಸಾರಾಂಶ

ಜ​ನ​ಪ್ರ​ತಿ​ನಿಧಿ​ಗಳು ಕೆ​ಲ ವಿ​ಚಾರ​ಗ​ಳಲ್ಲಿ ಸ​ಮಾ​ಧಾ​ನ​ದಿಂದ ವ​ರ್ತಿ​ಸ​ಬೇಕು| ಸ​ಭಾ​ಪತಿ ಅ​ಥ​ವಾ ಸ್ಪೀ​ಕ​ರ್‌ಗೆ ಹೋಗಿ ಮ​ನವಿ ಮಾ​ಡ​ಬೇಕು. ಅದನ್ನು ಬಿಟ್ಟು ಮೈ​ಮೇ​ಲಿನ ಬಟ್ಟೆ ಬಿ​ಚ್ಚು​ವುದು, ಅ​ಸ​ಹ್ಯ​ಕರ ರೀ​ತಿ​ಯಲ್ಲಿ ವ​ರ್ತಿ​ಸು​ವುದು ಸರಿಯಲ್ಲ| ಸಾರ್ವಜನಿಕ ಜೀವನದಲ್ಲಿರುವ ಜ​ನ​ಪ್ರ​ತಿ​ನಿಧಿ​ಗ​ಳು ಬಹಳ ಎ​ಚ್ಚ​ರಿ​ಕೆ​ಯಿಂದ ಇ​ರ​ಬೇಕು: ಹೊರಟ್ಟಿ| 

ಹುಬ್ಬಳ್ಳಿ(ಮಾ.07): ಶಾ​ಸ​ಕರಾದವರು ಸದನದ ಒಳಗೆ, ಹೊರಗೆ ಗೌರವಯುತವಾಗಿ ನಡೆದುಕೊಳ್ಳಬೇಕು. ಸ​ದ​ನದ ಗೌ​ರವ ಹೆ​ಚ್ಚಿ​ಸುವ ರೀ​ತಿ​ಯಲ್ಲಿ ವ​ರ್ತಿ​ಸ​ಬೇಕು. ಭ​ದ್ರಾ​ವತಿ ಕ್ಷೇ​ತ್ರದ ಶಾ​ಸಕ ಬಿ.ಕೆ. ಸಂಗಮೇಶ್‌ ಶರ್ಟ್‌ ಬಿ​ಚ್ಚಿದ ಪ್ರ​ಕ​ರಣದಿಂದ ವೈ​ಯ​ಕ್ತಿ​ಕ​ವಾಗಿ ನನಗೆ ಬ​ಹಳ ನೋ​ವಾ​ಗಿದೆ ಎಂದು ವಿ​ಧಾನಪ​ರಿ​ಷತ್‌ ಸ​ಭಾ​ಪತಿ ಬ​ಸ​ವರಾಜ ಹೊ​ರಟ್ಟಿ ಬೇ​ಸರ ವ್ಯ​ಕ್ತ​ಪ​ಡಿ​ಸಿ​ದ್ದಾರೆ. 

ಶ​ನಿ​ವಾರ ಸು​ದ್ದಿ​ಗಾ​ರ​ರೊಂದಿಗೆ ಮಾ​ತ​ನಾ​ಡಿ, ಜ​ನ​ಪ್ರ​ತಿ​ನಿಧಿ​ಗಳು ಕೆ​ಲ ವಿ​ಚಾರ​ಗ​ಳಲ್ಲಿ ಸ​ಮಾ​ಧಾ​ನ​ದಿಂದ ವ​ರ್ತಿ​ಸ​ಬೇಕು. ಸ​ಭಾ​ಪತಿ ಅ​ಥ​ವಾ ಸ್ಪೀ​ಕ​ರ್‌ಗೆ ಹೋಗಿ ಮ​ನವಿ ಮಾ​ಡ​ಬೇಕು. ಅದನ್ನು ಬಿಟ್ಟು ಮೈ​ಮೇ​ಲಿನ ಬಟ್ಟೆಬಿ​ಚ್ಚು​ವುದು, ಅ​ಸ​ಹ್ಯ​ಕರ ರೀ​ತಿ​ಯಲ್ಲಿ ವ​ರ್ತಿ​ಸು​ವುದು ಸರಿಯಲ್ಲ ಎಂದರು.

ಸದನದಲ್ಲಿ ಶರ್ಟ್ ಬಿಚ್ಚಿದ ಶಾಸಕ ಸಂಗಮೇಶ್, ಸ್ಪೀಕರ್ ಗರಂ

ಸಾರ್ವಜನಿಕ ಜೀವನದಲ್ಲಿರುವ ಜ​ನ​ಪ್ರ​ತಿ​ನಿಧಿ​ಗ​ಳು ಬಹಳ ಎ​ಚ್ಚ​ರಿ​ಕೆ​ಯಿಂದ ಇ​ರ​ಬೇಕು. ಪ​ರಿ​ಷತ್‌ ಕ​ಲಾ​ಪ​ದ ವೇಳೆ ಮಾ​ಧ್ಯಮವನ್ನು ನಿಷೇ​ಧಿ​ಸು​ವಂತೆ ಅನೇಕರು ಹೇಳಿದ್ದಾರೆ. ಆ​ದರೆ, ನಾನು ಮಾಧ್ಯಮವನ್ನು ಬ್ಯಾನ್‌ ಮಾ​ಡಿಲ್ಲ. ಮಾ​ಧ್ಯ​ಮ​ದ​ವರು ಎಷ್ಟು ಜನ ಇ​ರು​ತ್ತಾರೋ ಅಷ್ಟು ನ​ಮಗೆ ಒ​ಳ್ಳೆ​ಯದು ಎಂದರು.
 

PREV
click me!

Recommended Stories

ನನ್ನ ಬಳಿ ಕೆಜಿಗಟ್ಟಲೇ ಕದ್ದ ಚಿನ್ನ ಐತಿ, ಬನ್ನಿ ಎಂದು ಪಂಗನಾಮ ಹಾಕಿದ ಶಿಗ್ಲಿ ಬಸ್ಯಾ
ಬಿಲ್ ಪಾವತಿ, ಹೊಸ ಸಂಪರ್ಕ, ವರ್ಗಾವಣೆ ಸೇರಿ ಬೆಸ್ಕಾಂ ಆನ್‌ಲೈನ್ ಸೇವೆಗಳು ಇನ್ನು 21 ದಿನ ಸಿಗಲ್ಲ