ನಡುರಸ್ತೆಯಲ್ಲೇ ಪ್ರಿಯತಮೆಗೆ ಥಳಿಸಿದ ಯುವಕ : ಬುದ್ದಿವಾದ ಹೇಳಿದ ಪೊಲೀಸರು

Published : Dec 16, 2019, 11:06 AM IST
ನಡುರಸ್ತೆಯಲ್ಲೇ ಪ್ರಿಯತಮೆಗೆ ಥಳಿಸಿದ ಯುವಕ : ಬುದ್ದಿವಾದ ಹೇಳಿದ ಪೊಲೀಸರು

ಸಾರಾಂಶ

ಯುವಕನೋರ್ವ ಸಾರ್ವಜನಿಕವಾಗಿ ಪ್ರಿಯತಮೆಗೆ ಥಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ವೇಳೆ ಪೊಲೀಸರು ಅವರನ್ನು ಠಾಣೆಗೆ ಕರೆಸಿಕೊಂಡು ಬುದ್ದಿವಾದ ಹೆಳಿದ್ದಾರೆ. 

ಬೆಂಗಳೂರು [ಡಿ.16] : ನಡುರಸ್ತೆಯಲ್ಲೇ ಯುವತಿಯ ಮೇಲೆ ಯುವಕನೋರ್ವ ಹಲ್ಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಬೆಂಗಳೂರಿನ ಮಹಾಲಕ್ಷ್ಮೀ  ಲೇಔಟ್ ನಲ್ಲಿ ಪ್ರಿಯಕರನೇ ಪ್ರಿಯತಮೆಯ ಮೇಲೆ ಹಲ್ಲೆ ನಡೆಸಿದ್ದು, ಈ ವೇಳೆ ಯುವತಿಯನ್ನು ಆತನಿಂದ ರಕ್ಷಣೆ ಮಾಡಲಾಗಿದೆ.

ಬಳಿಕ ಸ್ಥಳೀಯ ಯುವಕರು ಪ್ರಿಯಕರನಿಗೆ ಥಳಿಸಿದ್ದು, ನುಡರಸ್ತೆಯಲ್ಲಿಯೇ ಯುವತಿಯ ಮೇಲೆ ಹಲ್ಲೆ ನಡೆಸಿದ ಆತನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಹಾಲಕ್ಷ್ಮೀಪುರ ಪೊಲೀಸ್ ಠಾಣೆಯ ಬಳಿಯಲ್ಲಿಯೇ ಈ ಘಟನೆ ನಡೆದಿದ್ದು, ಈ ವಿಚಾರವನ್ನು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದು, ಈ ವೇಳೆ ಇಬ್ಬರನ್ನು ಠಾಣೆಗೆ ಕರೆಸಿ ಬುದ್ದಿವಾದ ಹೇಳಲಾಗಿದೆ. 

ಸ್ವಂತ ಅಪಾರ್ಟ್‌ಮೆಂಟ್, ಖಾತೆಯಲ್ಲಿ ಲಕ್ಷ ಲಕ್ಷ ಹಣ : ವಿದ್ಯಾರ್ಥಿಗೆ ಇದೆಲ್ಲಾ ಬಂದಿದ್ದೆಲ್ಲಿಂದ?...

ಸಾರ್ವಜನಿಕವಾಗಿ ಯುವತಿಗೆ ಥಳಿಸಿರುವ ಸಂಬಂಧ ಯುವಕನಿಗೆ ಈ ರೀತಿ ನಡೆದುಕೊಳ್ಳದಂತೆ ತಿಳಿ ಹೇಳಲಾಗಿದೆ.

PREV
click me!

Recommended Stories

ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ಹೊಸ ಪದ್ದತಿಗೆ ಮುನ್ನುಡಿ
ಮೃತದೇಹದ ಬಟ್ಟೆ ಮೇಲಿದ್ದ ಟ್ಯಾಗ್ ನೀಡಿತು ರೋಚಕ ಸುಳಿವು, ಒಂದೇ ವಾರಕ್ಕೆ ಕೊಲೆಯ ರಹಸ್ಯ ಬೇಧಿಸಿದ ಪೊಲೀಸರು