ಸಿದ್ದು ರಾಜಕೀಯ ಜೀವನ ಕೋಲಾರದಲ್ಲಿ ಸಮಾಪ್ತಿ: ಸಚಿವ ಅಶ್ವತ್ಥನಾರಾಯಣ

By Kannadaprabha News  |  First Published Mar 14, 2023, 6:03 AM IST

ಕಾಂಗ್ರೆಸ್‌ ಪಕ್ಷ ಕರೆಪ್‌್ಟಪಕ್ಷವಾಗಿದೆ, ಅವರಿಗೆ ಜನರ ಹಿತ ಮುಖ್ಯವಲ್ಲ ಬರೀ ಭ್ರಷ್ಟಾಚಾರ ಹಾಗೂ ಸ್ವಾರ್ಥ ರಾಜಕಾರಣ ಮುಖ್ಯವಾಗಿದೆ. ಇಂತಹ ಕರೆಪ್‌್ಟಪಕ್ಷವನ್ನು ಜನರು ತಿರಸ್ಕರಿಸಿ ಜನಪರವಾದ ಬಿಜೆಪಿಯನ್ನು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರಲು ಮುಂದಾಗಬೇಕೆಂದು ಉನ್ನತ ಶಿಕ್ಷಣ ಸಚಿವ ಸಿ.ಅಶ್ವತ್ಥನಾರಾಯಣ ಹೇಳಿದರು.


ಬಂಗಾರಪೇಟೆ :   ಕಾಂಗ್ರೆಸ್‌ ಪಕ್ಷ ಕರೆಪ್‌್ಟ ಪಕ್ಷವಾಗಿದೆ, ಅವರಿಗೆ ಜನರ ಹಿತ ಮುಖ್ಯವಲ್ಲ ಬರೀ ಭ್ರಷ್ಟಾಚಾರ ಹಾಗೂ ಸ್ವಾರ್ಥ ರಾಜಕಾರಣ ಮುಖ್ಯವಾಗಿದೆ. ಇಂತಹ ಕರೆಪ್‌್ಟಪಕ್ಷವನ್ನು ಜನರು ತಿರಸ್ಕರಿಸಿ ಜನಪರವಾದ ಬಿಜೆಪಿಯನ್ನು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರಲು ಮುಂದಾಗಬೇಕೆಂದು ಉನ್ನತ ಶಿಕ್ಷಣ ಸಚಿವ ಸಿ.ಅಶ್ವತ್ಥನಾರಾಯಣ ಹೇಳಿದರು.

ಪಟ್ಟಣದಲ್ಲಿ ಪಕ್ಷದಿಂದ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜವಾದಿಯಂತೆ ವರ್ತಿಸುತ್ತಾರೆ. ಆದರೆ ಅವರ ಹೇಳಿಕೆಗೂ ನಡೆದುಕೊಳ್ಳುವ ರೀತಿಗೂ ಯಾವುದೇ ಸಂಬಂಧವೇ ಇಲ್ಲ. ಕಾಂಗ್ರೆಸ್‌ ವಂಶಪಾರಂಪರ್ಯ ಆಡಳಿತಕ್ಕೆ ಹೆಸರುವಾಸಿ ವರುಣ ಕ್ಷೇತ್ರವನ್ನು ಸಿದ್ದರಾಮಯ್ಯ ಆಸ್ತಿ ಎಂಬಂತೆ ಮಗನಿಗೆ ಬಿಟ್ಟುಕೊಟ್ಟು ಇವರು ಅಲೆ ಮಾರಿಯಾಗಿದ್ದಾರೆ. ಕೋಲಾರ ಸಿದ್ದರಾಮಯ್ಯ ರಾಜಕೀಯ ಜೀವನದ ಸಮಾಪ್ತಿ ಕ್ಷೇತ್ರವಾಗಲಿದೆ ಎಂದು ಭವಿಷ್ಯ ನುಡಿದರು.

Latest Videos

undefined

ಕ್ಷೇತ್ರದ ಶಾಸಕರು ಏನು ಮಾಡಿದ್ದಾರೆ?

ಬಿಜೆಪಿ ಡಬಲ್‌ ಎಂಜಿನ್‌ ಸರ್ಕಾರ ಜನಸಾಮಾನ್ಯರ ಜೀವನ ಮಟ್ಟಸುಧಾರಿಸಲು ಯೋಜನೆಗಳನ್ನು ರುಪಿಸುತ್ತಿದೆ. ಆದರೆ ಕಾಂಗ್ರೆಸ್‌ ಅದಕ್ಕೆ ವಿರುದ್ದವಾಗಿದೆ, ಜನ ಸಾಮಾನ್ಯರ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಅಭಿವೃದ್ದಿಯ ವಿರೋಧಿಗಳಿಗೆ ಮಣೆ ಹಾಕಬಾರದು. ಈ ಬಾರಿ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಸಾಥ್‌ ನೀಡಬೇಕು. ಇದುವರೆಗೂ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್‌ ಶಾಸಕರನ್ನು ಆಯ್ಕೆ ಮಾಡಿದ್ದೀರಿ ಅವರು ಏನು ಮಾಡಿದ್ದಾರೆ ಎಂಬುದನ್ನು ಚಿಂತನೆ ಮಾಡಿ ಎಂದರು.

ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ ಕೋಲಾರ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಜನ ಯಾಕೆ ಬಿಜೆಪಿಗೆ ಮತ ಹಾಕಬೇಕೆಂದು ಪತ್ರಕರ್ತರ ಪ್ರಶ್ನೆಗೆ ನಮಗೆ ಮತ ನೀಡಿ ನಂತರ ನೋಡಿ ಎಂದರಲ್ಲದೆ ಜಿಲ್ಲೆಯನ್ನು ಸರ್ಕಾರ ಕಡೆಗಣಿಸಿಲ್ಲ ಎಂದು ಹೇಳಿ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಸರ್ಕಾರದ ಲೋಪಗಳನ್ನು ಪ್ರಶ್ನೆ ಮಾಡಿದ ಪತ್ರಕರ್ತರನ್ನು ನೀವು ಕಾಂಗ್ರೆಸ್‌ ಪಕ್ಷದ ವಕ್ತಾರರೇ ಎಂದು ಆವೇಶದಿಂದ ಪ್ರಶ್ನಿಸಿದರು.

ಈ ಬಾರಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ

ಉಸ್ತುವಾರಿ ಸಚಿವ ಮುನಿರತ್ನ ಮಾತನಾಡಿ ಸರ್ಕಾರ ಯಾವುದೇ ಇರಲಿ ಸ್ಥಳೀಯ ಶಾಸಕರಿಗೆ ಕ್ಷೇತ್ರ ಅಭಿವೃದ್ದಿ ಬಗ್ಗೆ ಇಚ್ಚಾಶಕ್ತಿ ಇರಬೇಕು. ಆದರೆ ಇಲ್ಲಿನ ಶಾಸಕರು ಬರೀ ರಾಜಕಾರಣ ಮಾಡಿ ಕೆಸರೆರಚಾಟದಲ್ಲಿ ತೊಡಗಿರುವುದರಿಂದ ಅಭಿವೃದ್ದಿ ಇಲ್ಲವಾಗಿದೆ. ಹಿಂದಿನ ತಪ್ಪನ್ನು ಮತದಾರರು ತಿದ್ದಿಕೊಂಡು ಕ್ಷೇತ್ರದ ಸೇರಿದಂತೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಿ ಜಿಲ್ಲೆಯನ್ನು ಬೆಂಗಳೂರು ಮಾದರಿ ಅಭಿವೃದ್ಧಿ ಮಾಡಿ ತೋರಿಸುತ್ತೇವೆ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರೆಂಬ ಪ್ರಶ್ನೆಗೆ ಯಾವುದೇ ಉತ್ತರ ನೀಡದೆ ನಿರ್ಗಮಿಸಿದರು.

ಸಂಸದ ಎಸ್‌.ಮುನಿಸ್ವಾಮಿ,ಪಕ್ಷದ ಜಿಲ್ಲಾಧ್ಯಕ್ಷ ಡಾಃವೇಣುಗೋಪಾಲ್‌,ತಾಲೂಕು ಅಧ್ಯಕ್ಷ ನಾಗೇಶ್‌,ಮಾಜಿ ಶಾಸಕರಾದ ಎಂ.ನಾರಾಯಣಸ್ವಾಮಿ,ವೆಂಟಕಮುನಿಯಪ್ಪ,ಮುಖಂಡರಾದ ವಿ.ಶೇಷು, ಕೆ.ಚಂದ್ರಾರೆಡ್ಡಿ,ಬಿ.ವಿ.ಮಹೇಶ್‌,ಶ್ರೀನಿವಾಸಗೌಡ,ಅಮರೇಶ್‌,ಬಿ.ಪಿ.ಮಹೇಶ್‌,ಮಾರ್ಕಂಡೇಗೌಡ,ಬತ್ತಲಹಳ್ಳಿ ಮಂಜುನಾಥ್‌ ಮತ್ತಿತರರು ಇದ್ದರು.

click me!