Karnataka Congress : ಆರೋಪಿಗೆ ಕಾಂಗ್ರೆಸ್‌ನಿಂದ ಚುನಾವಣೆ ಟಿಕೆಟ್‌!

By Kannadaprabha News  |  First Published Dec 17, 2021, 7:22 AM IST
  • ಅಕ್ರಮ ಅದಿರು ಸಾಗಣೆ ಪ್ರಕರಣದಲ್ಲಿ ಭ್ರಷ್ಟಾಚಾರದಲ್ಲಿ ಸಿಲುಕಿದ್ದಾರೆಂದು ಆರೋಪ
  • ಕಾಂಗ್ರೆಸ್‌ ಪಕ್ಷದಿಂದಲೇ ಈಗ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರಸಭೆಯ 20ನೇ ವಾರ್ಡ್‌ಗೆ ಖಾರದಪುಡಿ ಮಹೇಶ್‌ಗೆ ಬಿ-ಫಾರಂ

ಹೊಸಪೇಟೆ (ಡಿ.17): ಅಕ್ರಮ ಅದಿರು ಸಾಗಣೆ ಪ್ರಕರಣದಲ್ಲಿ ಭ್ರಷ್ಟಾಚಾರದಲ್ಲಿ ಸಿಲುಕಿದ್ದಾರೆಂದು ಆರೋಪಿಸಿದ್ದ ಕಾಂಗ್ರೆಸ್‌ ಪಕ್ಷವೇ ಈಗ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರಸಭೆಯ 20ನೇ ವಾರ್ಡ್‌ಗೆ ಖಾರದಪುಡಿ ಮಹೇಶ್‌ಗೆ ಬಿ-ಫಾರಂ ನೀಡಿದೆ. ಈಗ ಮಹೇಶ್‌ ನಾಮಪತ್ರ ಕೂಡ ಸಲ್ಲಿಸಿದ್ದಾರೆ. ಇದು ಈಗ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. 

ಅಕ್ರಮ ಗಣಿಗಾರಿಕೆ ವಿರುದ್ಧ ಬೆಂಗಳೂರಿನಿಂದ (Bengaluru) ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, (Siddaramaiah) ಡಿ.ಕೆ.ಶಿವಕುಮಾರ್‌ ಮತ್ತು ಡಾ.ಜಿ.ಪರಮೇಶ್ವರ ಅವರು ಬಳ್ಳಾರಿಗೆ ಪಾದಯಾತ್ರೆ ನಡೆಸಿದ್ದರು. ಆಗಿನ ಕಂಪ್ಲಿ ಶಾಸಕ ಟಿ.ಎಚ್‌. ಸುರೇಶ್‌ ಬಾಬು ಬೆಂಬಲಿಗರು ಎಂದು ಗುರುತಿಸಿಕೊಂಡಿದ್ದ ಖಾರದಪುಡಿ ಮಹೇಶ್‌ ಮತ್ತು ಸ್ವಸ್ತಿಕ್‌ ನಾಗರಾಜ್‌ ಅವ​ರ ಬಂಧನಕ್ಕೆ ಆಗ್ರಹಿಸಿದ್ದರು. ಈಗಲೂ ಖಾರದಪುಡಿ ಮಹೇಶ್‌ ವಿರುದ್ಧ ಅಕ್ರಮ ಅದಿರು ಸಾಗಣೆ ಪ್ರಕರಣದ ಆರೋಪ ಇದೆ. ಆದರೂ ಅವರಿಗೆ ಕಾಂಗ್ರೆಸ್‌ ಬಿ-ಫಾರಂ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

Tap to resize

Latest Videos

undefined

ಸಿದ್ದರಾಮಯ್ಯಗೆ ಕ್ಷೇತ್ರ ಬಿಟ್ಟು ಕೊಡುವೆ : 

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ(Assembly Election) ಸಿದ್ದರಾಮಯ್ಯ(Siddaramaiah) ಅವರಿಗೆ ಸ್ಪರ್ಧಿಸಲು ತಮ್ಮ ಕ್ಷೇತ್ರ ಬಿಟ್ಟುಕೊಡಲು ಸಿದ್ಧರಿರುವುದಾಗಿ ಕಾಂಗ್ರೆಸ್‌ನ ಚಾಮರಾಜನಗರ ಕ್ಷೇತ್ರದ ಶಾಸಕ ಸಿ.ಪುಟ್ಟರಂಗ ಶೆಟ್ಟಿ(C Puttaranga Shetty) ಹಾಗೂ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ(Raghavendra Hitnal) ಘೋಷಿಸಿದ್ದಾರೆ. 

ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಎನ್ನುವುದು ಇಡೀ ರಾಜ್ಯಕ್ಕೇ(Karnataka) ಗೊತ್ತಿದೆ. ಅವರು ಎಲ್ಲಿ ನಿಂತರೂ ಗೆಲ್ತಾರೆ, ಅವರು ತಾವು ಮಾತ್ರವಲ್ಲದೆ ಸಾಕಷ್ಟು ಅಭ್ಯರ್ಥಿಗಳ ಗೆಲುವಿಗೂ ಕಾರಣರಾಗುತ್ತಾರೆ ಎಂದು ಇಬ್ಬರು ಶಾಸಕರೂ ಅಭಿಪ್ರಾಯಪಟ್ಟಿದ್ದಾರೆ.

Karnataka Congress Politics: ಬಾದಾಮಿ ಬಿಟ್ಟು ಕೊಡಲ್ವಂತೆ ಚಿಮ್ಮನಕಟ್ಟಿ: ಸಿದ್ದು ಎಲ್ಲಿಂದ ಸ್ಪರ್ಧೆ?

2018ರಲ್ಲೂ ಕುಷ್ಟಗಿ(Kushtagi) ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಆಹ್ವಾನ ಮಾಡಿದ್ದೆವು. ಆದರೆ, ಅವರು ಬಾದಾಮಿ(Badami) ಕ್ಷೇತ್ರದಲ್ಲಿನ ಅಭಿಮಾನಿಗಳ ಒತ್ತಡಕ್ಕೆ ಮಣಿದು ಅಲ್ಲಿಂದ ಸ್ಪರ್ಧೆ ಮಾಡಿದರು ಎಂದು ಹಿಟ್ನಾಳ ತಿಳಿಸಿದ್ದಾರೆ. ಇದೇ ವೇಳೆ, ಸಿದ್ದರಾಮಯ್ಯ ಚಾಮರಾಜನಗರ(Chamarajanagar) ಕ್ಷೇತ್ರದಿಂದ ಸ್ಪರ್ಧಿಸಿದರೆ ಜಿಲ್ಲೆಯ ಅಭಿವೃದ್ಧಿ ಆಗಲಿದೆ ಎಂದು ಪುಟ್ಟರಂಗ ಶೆಟ್ಟಿಹೇಳಿಕೊಂಡಿದ್ದಾರೆ.

ಸಿದ್ದರಾಮಯ್ಯ ಬಾದಾಮಿಯಲ್ಲೇ ಸ್ಪರ್ಧಿಸಬೇಕು

ಬಾದಾಮಿ: ಬಾದಾಮಿಯಲ್ಲಿ ಮಾಜಿ ಸಿಎಂ ಶಾಸಕ ಸಿದ್ದರಾಮಯ್ಯ ಚಿಕ್ಕಮುಚ್ಚಳಗುಡ್ಡ ಗ್ರಾಮದ ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್‌ ಇಳಿದ ತಕ್ಷಣವೆ ಕ್ಷೇತ್ರದ ಯುವ ಕಾಂಗ್ರೆಸ್‌(Congress) ಕಾರ್ಯಕರ್ತರ ಪಡೆ ಈ ಬಾರಿ ಬಾದಾಮಿಯಲ್ಲೇ ಸ್ಪರ್ಧಿಸಬೇಕು. ಬೇಕೇ ಬೇಕು ಬಾದಾಮಿಗೆ ಸಿದ್ದರಾಮಯ್ಯ ಬೇಕು ಎಂದು ಘೋಷಣೆ ಕೂಗಿದರು.

ಹೆಲಿಪ್ಯಾಡ್‌ನಿಂದ ಬಾದಾಮಿವರೆಗೆ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ನೂರಾರು ಅಭಿಮಾನಿಗಳು ಬೈಕ್‌ ರಾರ‍ಯಲಿ ಮಾಡಿದರು. ಬೈಕ್‌ಗಳು ಮುಂದೆ ಮುಂದೆ ಶಾಸಕರ ಕಾರು ವಾಹನ ಹಿಂದೆ. ನೂರಾರು ಕಾರ್ಯಕರ್ತರು ಸಿದ್ದರಾಮಯ್ಯ ಅವರು ಬಾದಾಮಿಯಲ್ಲೇ ಸ್ಪರ್ಧೆ ಮಾಡಬೇಕು. ಅಭಿವೃದ್ಧಿ ಹರಿಕಾರ ಸಿದ್ದರಾಮಯ್ಯ ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕು. ಅಭಿವೃದ್ಧಿ ಎಂದರೆ ಸಿದ್ದರಾಮಯ್ಯ ಎಂಬ ನಾಮಫಲಕಗಳನ್ನು ಹೊತ್ತು ಬೈಕ್‌ಗಳ ಮೂಲಕ ಘೋಷಣೆ ಕೂಗುತ್ತ ಅವರನ್ನು ಬಾದಾಮಿಗೆ ಅದ್ಧೂರಿಯಾಗಿ ಸ್ವಾಗತಿಸಿದರು. ಇದೊಂದು ಬೈಕ್‌ ರಾರ‍ಯಲಿಯಾಗಿ ಮಾರ್ಪಟ್ಟಿದ್ದು ಕಂಡು ಬಂತು.

ನಂತರ ಬಾದಾಮಿಯಲ್ಲಿ ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಅವರು ಅವಳಿ ಜಿಲ್ಲೆಯ ವಿಧಾನ ಪರಿಷತ್‌ ಚುನಾವಣೆಯಲ್ಲಿ(Vidhan Parishat Election) ಭಾಗಿಯಾಗಿ ಪಟ್ಟಣದ ಪುರಸಭೆ 260ರ ಮತಗಟ್ಟೆಯಲ್ಲಿ ಮತದಾನ ಮಾಡಿ ಹಕ್ಕು ಚಲಾಯಿಸಿದರು.

ಪುರಸಭೆ ಅಧ್ಯಕ್ಷ ಮಂಜುನಾಥ ಹೊಸಮನಿ, ಉಪಾಧ್ಯಕ್ಷೆ ರಾಮವ್ವ ಮಾದರ, ಕಾಂಗ್ರೆಸ್‌ ಪಕ್ಷದ ಸದಸ್ಯರಾದ ಆರ್‌.ಎಫ್‌.ಬಾಗವಾನ, ಪರಶು ರೋಣದ, ಪಾಂಡು ಕಟ್ಟಿಮನಿ, ಶಂಕರ ಕನಕಗಿರಿ, ಫಾರೂಕ್‌ ದೊಡಮನಿ, ಭೀಮಸಿ ಕಂಬಾರ, ಗೌರಮ್ಮ ಬೇಲೂರಪ್ಪನವರ, ಶ್ರೀಮತಿ ಕಾಗಿ, ಶ್ರೀಮತಿ ರಾಜೂರ, ಯಮುನಾ ಹೊಸಗೌಡ್ರ ಅವರೊಂದಿಗೆ ಮತದಾನ ಮಾಡುವಲ್ಲಿ ಭಾಗಿಯಾಗಿ ಶಾಂತರೀತಿಯಲ್ಲಿ ಮತದಾನ ಮಾಡಿದರು.

Karnataka Politics : ಸಿದ್ದು ಸ್ಪರ್ಧಿಸುವ ಕಡೆ ಕಾಂಗ್ರೆಸಲ್ಲೇ ಸುಂಟರಗಾಳಿ

ವಿಜಯನಗರದಲ್ಲಿ ಸ್ಪರ್ಧಿಸಲು ಸಿದ್ದರಾಮಯ್ಯಗೆ ಆಹ್ವಾನ!

ಹೊಸಪೇಟೆ(Hosapete): ಮಾಜಿ ಸಿಎಂ ಸಿದ್ದರಾಮಯ್ಯಗೆ ವಿಜಯನಗರ (ಹೊಸಪೇಟೆ) ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಅಭಿಮಾನಿಗಳು ಆಹ್ವಾನ ನೀಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ವಿಜಯನಗರ(Vijayanagara) ಜಿಲ್ಲೆಯ ವಿಜಯನಗರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲಿ ಎಂದು ಅವರ ಅಭಿಮಾನಿಗಳಾದ ಸೋಮಶೇಖರ್‌ ಬಣ್ಣದಮನೆ ಆಹ್ವಾನ ನೀಡಿದ್ದಾರೆ. ‘ಅಣ್ಣ’ರಾಮಯ್ಯ ವಿಜಯನಗರ ಕ್ಷೇತ್ರಕ್ಕೆ ಸ್ಪರ್ಧಿಸಿದ್ರೆ ಅತ್ಯಂತ ಪ್ರೀತಿಯಿಂದ ಸ್ವಾಗತಿಸುತ್ತೇವೆ. ವಿಜಯನಗರ ಜಿಲ್ಲೆಗೂ ವಿಜಯನಗರದ ಗತಕಾಲದ ವೈಭವ, ಇತಿಹಾಸ ಮರುಕಳಿಸುವಂತಾಗಲಿದೆ ಎಂದು ಫೇಸ್‌ಬುಕ್‌ನಲ್ಲಿ(Favebook) ಸೋಮಶೇಖರ್‌ ಬಣ್ಣದಮನೆ ಪೋಸ್ಟ್‌ ಮಾಡಿದ್ದಾರೆ. ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್(Anand Singh) ಅವರು ಶಾಸಕರಾಗಿರುವ ಕ್ಷೇತ್ರಕ್ಕೆ ಸಿದ್ದರಾಮಯ್ಯನವರನ್ನು ಆಹ್ವಾನಿಸಿರುವುದರಿಂದ, ಈ ಪೋಸ್ಟ್‌ ಭಾರಿ ವೈರಲ್‌ ಆಗುತ್ತಿದೆ.

click me!