ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮುಖಂಡರು : ಸ್ವಾಗತಿಸಿದ ಶಾಸಕರು

By Kannadaprabha NewsFirst Published Aug 31, 2021, 1:18 PM IST
Highlights
  • ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಮುಖಂಡರು
  • ಅಭಿವೃದ್ಧಿ ಹೆಸರಿನಲ್ಲಿ ರಾಜಕೀಯ ಮಾಡದೇ ಜನರ ಮಧ್ಯೆಯೇ ಇದ್ದು, ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವೆ ಎಂದ ಶಾಸಕರು

ಕೆ.ಆರ್.ಪುರ (ಆ.31): ಅಭಿವೃದ್ಧಿ ಹೆಸರಿನಲ್ಲಿ ರಾಜಕೀಯ ಮಾಡದೇ ಜನರ ಮಧ್ಯೆಯೇ ಇದ್ದು, ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಮೂಲಕ ಸಾಮರಸ್ಯ ಕಾಪಾ ಡುತ್ತೇನೆ ಎಂದು ಶಾಸಕ ಅರವಿಂದ ಲಿಂಬಾವಳಿ ಹೇಳಿ ದರು. 

ಮಹದೇವಪುರ ಕ್ಷೇತ್ರದ ಬಿದರಹಳ್ಳಿ ಹಾಗೂ ಕುರುಡುಸೊಣ್ಣೇನಹಳ್ಳಿಯಲ್ಲಿ ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. 

ಮಹದೇವಪುರ ಕ್ಷೇತ್ರದಲ್ಲಿ ಗ್ರಾಮ ಪಂಚಾಯತಿಗಳು ಹೆಚ್ಚಿನ ಪ್ರಮಾಣ ದಲ್ಲಿರುವುದರಿಂದ ಗ್ರಾಮಗಳ ಅಭಿವೃದ್ಧಿಗೆ ಹಣಕಾಸು ಮಂಜೂರು ಸಿಗುವುದು ಸ್ವಲ್ಪ ಕಷ್ಟಸಾಧ್ಯ. ಬಿಬಿಎಂಪಿಗೆ ಅನುಗುಣವಾಗಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಎಷ್ಟು ಸಾಧ್ಯವೋ ಅಷ್ಟನ್ನು ಗ್ರಾಮಗಳ ಅಭಿವೃದ್ಧಿಗೆ ಶ್ರಮವಹಿಸಲಾಗುವುದು.

ಅಂದು ನನ್ನನ್ನು ಬಿಜೆಪಿಗೆ ಕರೆದಿದ್ದರು ಎಂದ ಕೈ ಶಾಸಕಗೆ ಈಗ ಮತ್ತೆ ಆಹ್ವಾನ 

ಮಹದೇವಪುರ ಕ್ಷೇತ್ರವನ್ನು ಕಾಂಗ್ರೆಸ್ ಮುಕ್ತ ಮಾಡುವುದು ಮೊದಲ ಆದ್ಯತೆ ಎಂ ದು ಹೇಳಿದರು. ಅರವಿಂದ ಲಿಂಬಾವಳಿ ಅವರು ಕಾಂಗ್ರೆಸ್ ಮುಖಂಡ ಹಾಗೂ ಬಿದರಹಳ್ಳಿ ಗ್ರಾಮ ಪಂಚಾ ಯತಿ ಸದಸ್ಯ ಬಿ.ಜಿ.ರಾಜೇಶ್ ಅವರನ್ನು ಪಕ್ಷದ ಬಾವು ಟ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು. 

ಬಿಜೆಪಿ ಆಂಧ್ರಪ್ರದೇಶ ರಾಜ್ಯ ಕಾರ್ಯದರ್ಶಿ ರಮೇಶ್ ನಾಯ್ಡು, ಬೆಂಗಳೂರು ಗ್ರಾಮಾಂತರ ಅಧ್ಯಕ್ಷ ನಟ ರಾಜ್, ಮುಖಂಡರಾದ ಜಯಚಂದ್ರರೆಡ್ಡಿ, ಮನೋಹ ರರೆಡ್ಡಿ, ಕೆ.ವಿ. ನಾಗರಾಜ್, ಮಧು, ಚನ್ನಸಂದ್ರ ಚಂದ್ರ ಶೇಖರ್ ಮತ್ತಿತರರು ಇದ್ದರು.  

click me!