'ಕಾಂಗ್ರೆಸ್ ಬಿಜೆಪಿ ಭರಾಟೆ ರಾಜಕೀಯದಲ್ಲಿ ಜೆಡಿಎಸ್‌ಗೆ ಅಧಿಕಾರ'

By Kannadaprabha News  |  First Published Aug 31, 2021, 8:18 AM IST
  • ಬಿಜೆಪಿ ಬಗ್ಗೆ ನಾವು ಯಾವತ್ತೂ ಮೃದು ಧೋರಣೆ ತಾವು ತಳೆದಿಲ್ಲ
  • ಕಾಂಗ್ರೆಸ್‌, ಬಿಜೆಪಿ ಭರಾಟೆಯ ಪ್ರಚಾರದಲ್ಲಿ ತೊಡಗಿವೆ
  • ಅಸಲು ಕಲಬುರಗಿಯಲ್ಲಿ ಜೆಡಿಎಸ್‌ ಅಧಿಕಾರ ನಡೆಸಲಿದೆ 

ಕಲಬುರಗಿ (ಆ.31: ‘ಬಿಜೆಪಿ ಬಗ್ಗೆ ನಾವು ಯಾವತ್ತೂ ಮೃದು ಧೋರಣೆ ತಾವು ತಳೆದಿಲ್ಲ. ಕೋವಿಡ್‌ ಸಂದರ್ಭದಲ್ಲಿ ಸರ್ಕಾರಕ್ಕೆ ಸಹಕಾರ ಕೊಡೋದು ಜವಾಬ್ದಾರಿಯೇ ಹೊರತು ಹಾಗಂತ ಅದನ್ನೇ ಮೃದು ಧೋರಣೆ ಎಂದು ಹೇಳಿದರೆ ಹೇಗೆ?’

-ಇದು ಬಿಜೆಪಿ ಬಗ್ಗೆ ಜೆಡಿಎಸ್‌ ಮೃದುಧೋರಣೆ ತಾಳಿದೆ ಎಂಬ ಕಾಂಗ್ರೆಸ್‌ ಮುಖಂಡರ ಆರೋಪಗಳಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾಸ್ವಾಮಿ ನೀಡಿರುವ ಪ್ರತಿಕ್ರಿಯೆ.

Tap to resize

Latest Videos

ನಗರದಲ್ಲಿ ಸೋಮವಾರ ಮಹಾನಗರ ಪಾಲಿಕೆ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್‌ ಸಂದರ್ಭದಲ್ಲಿ ಸರ್ಕಾರಕ್ಕೆ ಸಹಕಾರ ಕೊಡೋದು ನನ್ನ ಜವಾಬ್ದಾರಿ. ಜನರು ಸಂಕಷ್ಟದಲ್ಲಿರುವ ಕಾರಣ ಆಡಳಿತ ಪಕ್ಷಕ್ಕೆ ಸಹಕಾರ ಕೊಡಲೇಬೇಕು. ಇದನ್ನ ಬಿಟ್ಟು ನಾನು ಬಿಜೆಪಿ ಬಗ್ಗೆ ಯಾವತ್ತು ಮೃದುವಾಗಿಲ್ಲ ಎಂದು ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದರು. ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್‌ ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕೆಂದು 45ರಷ್ಟುಉಮೇದುವಾರರನ್ನು ಕಣಕ್ಕೆ ಇಳಿಸಿದ್ದೇವೆ ಎಂದರು.

ಹುಬ್ಬಳ್ಳಿ -ಧಾರವಾಡ ಹೈಟೆಕ್‌ ಸಿಟಿ ಮಾಡಲು ಜೆಡಿಎಸ್‌ಗೆ ಮತ ನೀಡಿ: ಎಚ್‌ಡಿಕೆ

ಕಾಂಗ್ರೆಸ್‌, ಬಿಜೆಪಿ ಭರಾಟೆಯ ಪ್ರಚಾರದಲ್ಲಿ ತೊಡಗಿವೆ. ಆದರೆ ಅಸಲು ಕಲಬುರಗಿಯಲ್ಲಿ ಜೆಡಿಎಸ್‌ ಅಧಿಕಾರ ನಡೆಸಲಿದೆ ಎಂದರು.

ಕೃಷ್ಣ ವಿಚಾರದಲ್ಲಿ ಕೇಂದ್ರ ದ್ವಂದ್ವ ನೀತಿ

ಕಲಬುರಗಿ: ಉತ್ತರ ಕರ್ನಾಟಕದ ಪ್ರಮುಖ ಜೀವನದಿ ಕೃಷ್ಣ ನದಿ ನೀರಿನ ಸದ್ಬಳಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ದ್ವಂದ್ವ ನೀತಿ ತಳೆದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ದೂರಿದ್ದಾರೆ. ಆಲಮಟ್ಟಿಜಲಾಶಯ ರಾಷ್ಟ್ರೀಯ ಯೋಜನೆ ಎಂದು ಘೋಷಿಸುವಲ್ಲಿಯೂ ಕೇಂದ್ರ ಮೀನಮೇಷ ಎಣಿಸುತ್ತಿದೆ. ಜೊತೆಗೇ ಕೃಷ್ಣಾ ಮೇಲ್ದಂಡೆ ಯೋಜನೆ 3 ನೇ ಹಂತದ ಕಾಮಗಾರಿಗೆ ಅನುಮತಿಸುವ ವಿಚಾರದಲ್ಲಿಯೂ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದರು.

 ರಾಜ್ಯದ ನೀರಾವರಿ ವಿಷಯವಾಗಿ ತಾವು ಭೇಟಿ ಮಾಡಿ ಚರ್ಚಿಸಬೇಕೆಂದು ಮುಖಮಂತ್ರಿ ಬೊಮ್ಮಾಯಿಯವರ ಸಮಯ ಕೇಳಿದ್ದು ಅವರು 2 ವಾರವಾದರೂ ಸಮಯವನ್ನೇ ನೀಡುತ್ತಿಲ್ಲ. ಅವರು ತುಂಬ ಕೆಲಸದಲ್ಲಿದ್ದಾರೆ. ಆದರೂ ರಾಜ್ಯದ ಇಂತಹ ನೀರಾವರಿ ಸಮಸ್ಯೆಗಳ ವಿಚಾರದಲ್ಲಿ ಪರಿಹಾರ ಕಂಡು ಹಿಡಿಯುವ ಕೆಲಸ ಆಗಲೇಬೇಕಲ್ಲವೆ?

-​ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

click me!