ಬ್ಯಾಡಗಿ: ದಾಯಾದಿಗಳ ಕಲಹ, ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ

By Kannadaprabha News  |  First Published Nov 16, 2020, 12:37 PM IST

ದಾಯಾದಿಗಳ ಕಲಹ: ಒಬ್ಬನಿಗೆ ಚಾಕು ಇರಿತ| ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿ ದೀಪಾವಳಿ ಸಂಭ್ರಮ ಮಾಯ| ಹಳೆವೈಷಮ್ಯ ಕಾರಣ: ಪೊಲೀಸರ ಶಂಕೆ| ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಸಿದ್ದಾಪುರದಲ್ಲಿ ನಡೆದ ಘಟನೆ| 


ಬ್ಯಾಡಗಿ(ನ.16): ದಾಯಾದಿಗಳ ಎರಡು ಕುಟುಂಬಗಳ ಮಧ್ಯೆ ಚಾಕು ಹಾಗೂ ಬಡಿಗೆಗಳಿಂದ ಬಡಿದಾಡಿಕೊಂಡು ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ಕಾಗಿನೆಲೆ ಪೊಲೀಸ್‌ ಠಾಣೆಯ ವ್ಯಾಪ್ತಿಯ ಸಿದ್ದಾಪುರ ಗ್ರಾಮದಲ್ಲಿ ಭಾನುವಾರ ನಡೆದಿದ್ದು, ಮೇಲ್ನೋಟಕ್ಕೆ ಕ್ಷುಲ್ಲಕ ಕಾರಣವಾಗಿದ್ದರೂ ಹಳೆಯ ವೈಷಮ್ಯವಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಘಟನೆಯಲ್ಲಿ ಚಾಕು ಇರಿತಕ್ಕೊಳಗಾಗಿ ತೀವ್ರ ನೋವು ಅನುಭವಿಸುತ್ತಿದ್ದ ನಾಗರಾಜ ಕಚವಿ ಎಂಬಾತನನ್ನು ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಗೂ, ತಲೆಗೆ ತೀವ್ರ ಪೆಟ್ಟುಬಿದ್ದ ಮಲ್ಲಿಕಾರ್ಜುನ ಕಚವಿ ಎಂಬುವನನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Latest Videos

undefined

ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ

ನಾಗರಾಜ ಕಚವಿ ಪತ್ನಿ ಹೂವಿನ ಗಿಡಕ್ಕೆ ಹಾಕಿದ ನೀರು ಮಲ್ಲಿಕಾರ್ಜುನ ಅವರ ಮನೆಯ ಮುಂಬಾಲಿಗೆ ತಾಕಿದ್ದರಿಂದ ಜಗಳ ಪ್ರಾರಂಭವಾಗಿ ಕೈಕೈ ಮಿಲಾಯಿಸಿದ್ದು ಎರಡೂ ಕುಟುಂಬಗಳ ಮಧ್ಯದ ಘರ್ಷನೆಗೆ ಕಾರಣವಾಗಿದೆ.
ಜಗಳ ಪ್ರಾರಂಭವಾಗುತ್ತಿದ್ದಂತೆ ಮಲ್ಲಿಕಾರ್ಜುನ ಪತ್ನಿ ರೇಣುಕಾ ಅವರ ಸಹೋದರರಾದ ಹಾನಗಲ್ಲ ತಾಲೂಕು ಗುಡ್ಡದಮತ್ತಿಹಳ್ಳಿ ಗ್ರಾಮದ ರವಿ ಬಣಕಾರ ಹಾಗೂ ದೇವರಾಜ ಬಣಕಾರ ನಾಗರಾಜ ಕಚವಿಗೆ ಚಾಕುವಿನಿಂದ ಇರಿದಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಹಾವೇರಿ ಮೆಡಿಕಲ್‌ ಕಾಲೇಜು ಆರ್ಥಿಕ, ಶೈಕ್ಷಣಿಕ ಬೆಳವಣಿಗೆಗೆ ಪೂರಕ: ಸಿಎಂ ಯಡಿಯೂರಪ್ಪ

ಚಾಕು ಇರಿತದ ಸುದ್ದಿ ಗ್ರಾಮದೆಲ್ಲೆಡೆ ಹರಡುತ್ತಿದ್ದಂತೆ ಚಾಕುವಿನಿಂದ ಇರಿಯಲು ಕಾರಣ ಎನ್ನಲಾದ ರೇಣುಕಾ, ಮಲ್ಲಿಕಾರ್ಜುನ, ರವಿ ಹಾಗೂ ಮಹೇಂದ್ರ ಮೂವರನ್ನು ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಕಚವಿಗೂ ಕೂಡ ತಲೆಗೆ ತೀವ್ರ ತರಹದ ಪೆಟ್ಟು ಬಿದ್ದಿದ್ದು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಮಿಸಿದ ಕಾಗಿನಲೆ ಪಿಎಸ್‌ಐ ಬಳಿಗಾರ ನೇತೃತ್ವದ ತಂಡ ಹೆಚ್ಚು ಅನಾಹುತ ನಡೆಯದಂತೆ ನೋಡಿಕೊಂಡರು.

ದೂರು, ಪ್ರತಿ ದೂರು:

ಘಟನೆ ಸಂಬಂಧಿಸಿದಂತೆ ರೇಣುಕಾ ಕಚವಿ, ಮಲ್ಲಿಕಾರ್ಜುನ ಕಚವಿ, ರವಿ ಬಣಕಾರ ಹಾಗೂ ಮಹೇಂದ್ರ ಬಣಕಾರ ಅವರ ವಿರುದ್ಧ ಕಾಗಿನೆಲೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅದೇ ಗ್ರಾಮದ ಸಿದ್ದಾಪುರದ ನಾಗರಾಜ ಹನುಮಂತಪ್ಪ ಕಚÜವಿ, ಕುಮಾರ ಹನುಮಂತಪ್ಪ ಕಚವಿ, ಶಿವರುದ್ರಪ್ಪ ಮೂಲಿಕೇರಿ, ವಿರೇಶ ಮೂಲಿಕೇರಿ, ಕರಬಸಪ್ಪ ಮೂಲಿಕೇರಿ ಎಂಬುವರ ಮೇಲೆ ಪ್ರತಿ ದೂರು ದಾಖಲಾಗಿದೆ.
 

click me!