ಪವಾಡ ಪುರುಷ ಕೊರಗಜ್ಜನ ಹುಂಡಿಯಲ್ಲಿ ಕಾಂಡೋಮ್

By Kannadaprabha News  |  First Published Jan 20, 2021, 2:16 PM IST

ಆಧುನಿಕ ಪವಾಡ ಪುರುಷ ಎಂದೇ ಕರೆಸಿಕೊಳ್ಳುವ ಕೊರಗಜ್ಜನ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಸೇರಿದಂತೆ ವಿವಿಧ ವಿವಾದಿತ ಪತ್ರಗಳು ಪತ್ತೆಯಾಗಿವೆ.


ಮಂಗಳೂರು (ಜ.20): ಪವಾಡ ಪುರುಷ ಎಂದೇ ಕರೆಸಿಕೊಳ್ಳುವ ಕೊರಗಜ್ಜ ದೈವದ ಕಾಣಿಕೆ ಹುಂಡಿಗೆ ಕಿಡಿಗೇಡಿಗಳು  ಕಾಂಡೋಮ್ ಹಾಕಿದ ವಿಚಾರ ಬೆಳಕಿಗೆ ಬಂದಿದೆ. 

ಮಂಗಳೂರು ಹೊರವಲಯದ ಉಳ್ಳಾಲದ ಕೇಂದ್ರ ಬಸ್‌ ನಿಲ್ದಾಣದ ಬಳಿ ಇರುವ ಸ್ವಾಮಿ ಕೊರಗಜ್ಜ ಮತ್ತು ಗುಳಿಗಜ್ಜನ ಕ್ಷೇತ್ರದ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿದ್ದಾರೆ. 

Tap to resize

Latest Videos

undefined

ಕಾಂಡೋಮ್ ಮತ್ತು ನಿಂದನಾರ್ಹ ಬರಹಗಳುಳ್ಳ ಭಿತ್ತಿಪತ್ರವನ್ನು ಹಾಕಿ ವಿಕೃತಿ ಮೆರೆದಿದ್ದಾರೆ. ಯಡಿಯೂರಪ್ಪ, ವಿಜಯೇಂದ್ರ ಹಾಗೂ ಇನ್ನಿತರ ಬಿಜೆಪಿ ನಾಯಕರ ಚಿತ್ರಗಳನ್ನು ವಿರೂಪಗೊಳಿಸಿ ಅವಹೇಳನ ಮಾಡಿದ್ದು, ಕಾಣಿಕೆ ಡಬ್ಬಿಯ ಹಣ ತೆಗೆಯುವಾಗ ಈ ಘಟನೆ ಬೆಳಕಿಗೆ ಬಂದಿದೆ. 

ಕೊರಗಜ್ಜ ಕಟ್ಟೆ ಪ್ರಕರಣ: ಪರ - ವಿರೋಧದ ಕೂಗು ...

ಬೆಂಗಳೂರಿನ ಕೆ.ಆರ್‌. ಐಡಿಯಲ್‌ ನಿಗಮದ ಅಧ್ಯಕ್ಷ ಎಂ ರುದ್ರೇಶ್‌ ಅವರಿಗೆ ಶುಭಕೋರಿದ ಫ್ಲೆಕ್ಸ್‌. ರಾಜಕಾರಣಿಗಳನ್ನು ಹೊಡೆದು ಕೊಲ್ಲಬೇಕು ಎಂಬ ಬರಹ. ರಕ್ತ ಹೀರುವ ರಾಜಕಾರಣಿಗಳನ್ನು ಅಟ್ಟಾಡಿಸಿ ಹಿಡಿದು ಕೊಲ್ಲಬೇಕು ಎಂದು ಬರೆದು ಹಾಕಲಾಗಿದೆ. 

ಈ ಸಂಬಂಧ ಕೊರಗಜ್ಜ ಸೇವಾ ಸಮಿತಿಯವರು ಉಳ್ಳಾಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ಮಂಗಳೂರು ಕಮಿಷನರ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

click me!