ಬಿಜೆಪಿಗೆ ಹೋದವರು, ಮರಳಿ ಕಾಂಗ್ರೆಸ್‌ಗೆ: ಸಚಿವ ಸುಧಾಕರ್‌ ಪ್ರತಿಕ್ರಿಯೆ

Kannadaprabha News   | Asianet News
Published : Jan 20, 2021, 01:53 PM IST
ಬಿಜೆಪಿಗೆ ಹೋದವರು, ಮರಳಿ ಕಾಂಗ್ರೆಸ್‌ಗೆ: ಸಚಿವ ಸುಧಾಕರ್‌ ಪ್ರತಿಕ್ರಿಯೆ

ಸಾರಾಂಶ

ಯಾರೂ ಕಾಂಗ್ರೆಸ್ಸಿಗೆ ಹೋಗಲ್ಲ| ಕಾಂಗ್ರೆಸ್‌ನಿಂದ ಬಂದು ಇಲ್ಲಿ ಮಂತ್ರಿ ಆಗಿದ್ದೇವೆ| ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ| ಬಿಜೆಪಿಗೆ ಬಂದು ಸರ್ಕಾರ ರಚನೆಗೆ ನೆರವಾದ 17 ಜನರಲ್ಲಿ ಒಬ್ಬರೂ ತಮ್ಮ ಪಕ್ಷಗಳಿಗೆ ವಾಪಸ್‌ ಹೋಗಲ್ಲ| ಬಿಜೆಪಿಯಲ್ಲೇ ಮುಂದುವರಿಯುತ್ತೇವೆ: ಸುಧಾಕರ್‌| 

ಹುಬ್ಬಳ್ಳಿ(ಜ.20): ಸರ್ಕಾರ ರಚನೆಗಾಗಿ ತ್ಯಾಗ ಮಾಡಿ ಕಾಂಗ್ರೆಸ್‌ನಿಂದ ಬಂದು ಇಲ್ಲಿ ಮಂತ್ರಿಯಾಗಿದ್ದೇವೆ. ಪುನಃ ಕಾಂಗ್ರೆಸ್‌ಗೆ ಹೋಗುವ ಮಾತೇ ಇಲ್ಲ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ. 

ಬಿಜೆಪಿಗೆ ಕಾಂಗ್ರೆಸ್‌ನಿಂದ ಹೋದವರು, ಮರಳಿ ಕಾಂಗ್ರೆಸ್‌ಗೆ ಮರಳಲಿದ್ದಾರೆ ಎಂಬ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಸಂಬಂಧಪಟ್ಟಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್‌ನಿಂದ ಬಂದು ಇಲ್ಲಿ ಮಂತ್ರಿ ಆಗಿದ್ದೇವೆ. ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಬಿಜೆಪಿಗೆ ಬಂದು ಸರ್ಕಾರ ರಚನೆಗೆ ನೆರವಾದ 17 ಜನರಲ್ಲಿ ಒಬ್ಬರೂ ತಮ್ಮ ಪಕ್ಷಗಳಿಗೆ ವಾಪಸ್‌ ಹೋಗಲ್ಲ. ಬಿಜೆಪಿಯಲ್ಲೇ ಮುಂದುವರಿಯುತ್ತೇವೆ. ಡಿಕೆಶಿ ಹೇಳಿದ್ದು ಯಾವುದೂ ಸತ್ಯವಾಗಿಲ್ಲ, ಕಾಂಗ್ರೆಸ್‌ಗೆ ವಾಪಸ್‌ ಬರ್ತಾರೆ ಎನ್ನುವುದು ಸತ್ಯವಾಗುತ್ತಾ?’ಎಂದು ಪ್ರಶ್ನಿಸಿದರು.

ಕೊರೋನಾ ಲಸಿಕೆ ಸಂಪೂರ್ಣ ಸುರಕ್ಷಿತ: ಸಚಿವ ಸುಧಾಕರ್‌

ಸಚಿವ ಸಂಪುಟ ವಿಸ್ತರಣೆ ಬಳಿಕ ಶಾಸಕರ ಅಸಮಾಧಾನದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಮ್ಮ ಮುಖ್ಯಮಂತ್ರಿ ಸಮರ್ಥರಿದ್ದಾರೆ. ಹೈಕಮಾಂಡ್‌ ಬಲಿಷ್ಠವಾಗಿದೆ. ಯಾರಿಗೆ ಮಂತ್ರಿ ಸ್ಥಾನ, ಯಾವ ಇಲಾಖೆ ಕೊಡಬೇಕು ಎನ್ನುವುದನ್ನು ಸರಿಯಾಗಿ ನಿರ್ಧರಿಸುತ್ತಾರೆ ಎಂದರು.

PREV
click me!

Recommended Stories

ಸವಣೂರು ಘಟನೆ ಕಾಂಗ್ರೆಸ್ ಓಲೈಕೆ ರಾಜಕಾರಣದ ಪ್ರತಿಬಿಂಬ, ರಾಜ್ಯದಲ್ಲಿ ಪೊಲೀಸರ ನಿಷ್ಕ್ರಿಯತೆ ಬಗ್ಗೆಯೂ ಸಂಸದ ಬೊಮ್ಮಾಯಿ ಕಿಡಿ
ಮಾಟ ಮಂತ್ರ ಪರಿಹಾರದ ನಾಟಕ: ಮಲ್ಲೇಶ್ವರಂನಲ್ಲಿ ಚಿನ್ನಾಭರಣ ದೋಚಿದ ನಕಲಿ ಸ್ವಾಮಿಗಳು!