ಕೊಪ್ಪಳ ಸಂಸದ ಕರಡಿ ಸಂಗಣ್ಣರನ್ನು ಹುಡುಕಿ ಕೊಡಲು ಠಾಣೆಗೆ ದೂರು..!

By Kannadaprabha News  |  First Published Nov 15, 2022, 10:30 PM IST

ರೆಡ್‌ಸ್ಟಾರ್‌ ವತಿಯಿಂದ ಮಂಗಳವಾರ ಪೊಲೀಸ್‌ ಠಾಣೆಗೆ ದೂರು ನೀಡಲಾಗುವುದು ಎಂದು ತಿಳಿಸಿದ ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ್‌ 


ಸಿಂಧನೂರು(ನ.15):  ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದ ಕರಡಿ ಸಂಗಣ್ಣ ಅವರನ್ನು ಹುಡುಕಿ ಕೊಡುವಂತೆ ಸಿಪಿಐ(ಎಂಎಲ್‌) ರೆಡ್‌ಸ್ಟಾರ್‌ ವತಿಯಿಂದ ಮಂಗಳವಾರ ಪೊಲೀಸ್‌ ಠಾಣೆಗೆ ದೂರು ನೀಡಲಾಗುವುದು ಎಂದು ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ್‌ ತಿಳಿಸಿದ್ದಾರೆ.

ಸೋಮವಾರ ಹೇಳಿಕೆ ನೀಡಿರುವ ಅವರು, ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನಿಗದಿ, ಖರೀದಿ ಕೆಂದ್ರ ತೆರೆಯುವುದು, ರೈತರ ಬೆಳೆಗಳು ನೀರಿಲ್ಲದೆ ಒಣಗುತ್ತಿರುವುದು, ತುಂಗಭದ್ರಾ ಎಡದಂಡೆಯ ಎಲ್ಲ ವಿತರಣಾ ಕಾಲುವೆಗಳ ಕೆಳಭಾಗದ ರೈತರಿಗೆ ಸಮರ್ಪಕ ನೀರು ಒದಗಿಸುವುದು ಸೇರಿದಂತೆ ಸಿಂಧನೂರು ತಾಲೂಕಿನಲ್ಲಿ ಮನೆ ಕಳ್ಳತನಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಸಂಬಂಧಿಸಿದ ಪೋಲಿಸ್‌ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಅಂತ ತಿಳಿಸಿದ್ದಾರೆ. 

Tap to resize

Latest Videos

undefined

ಕನ್ನಡದ ಕೋಟ್ಯಧಿಪತಿ ಸ್ಫೂರ್ತಿ: 30-40 ಸಾವಿರ ಪ್ರಶ್ನೆಗಳಿಗೆ ಉತ್ತರ ನೀಡುವ ಪುಟ್ಟ ಅಣ್ಣ-ತಂಗಿ

ಎಗ್ಗಿಲ್ಲದೆ ಅಕ್ರಮ ಮರಳು ದಂಧೆ ಸಂಸದರ ಕಣ್ಣಿಗೆ ಕಾಣದಾಗಿದೆ. ಬಂಗಾಲಿ ಕ್ಯಾಂಪ್‌ಗಳಲ್ಲಿ ಪೌರತ್ವದ ವಿಷಯ ಮತ್ತು ಆ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವುದು. ಆರ್‌ಎಚ್‌ ನಂ.1 ರಿಂದ 5 ರವರೆಗೆ ದತ್ತು ಪಡೆದು ಅಭಿವೃದ್ಧಿ ಪಡಿಸುತ್ತೇವೆಂದು ಹೇಳಿದ ಕೆಲಸಗಳು ಹಾಗೆಯೇ ಉಳಿದಿವೆ. ಇವುಗಳ ಬಗ್ಗೆ ಗಮನ ಹರಿಸಬೇಕಾಗಿರುವುದರಿಂದ ಸಂಸದ ಕರಡಿ ಸಂಗಣ್ಣ ಅವರನ್ನು ಹುಡುಕಿ ಕೊಡುವಂತೆ ಪೋಲಿಸ್‌ ಠಾಣೆಗೆ ದೂರು ನೀಡಲಾಗುತ್ತದೆ ಎಂದು ವಿವರಿಸಿದ್ದಾರೆ.
 

click me!