ಕಮಲ ಮಹಲ್, ಕಲ್ಲಿನ ತೇರು, ವಿಜಯ ವಿಠ್ಠಲ ದೇಗುಲ, ಮಹಾನವಮಿ ದಿಬ್ಬ ಸೇರಿ ನಾನಾ ಕಡೆ ಅನುಮತಿ ಇಲ್ಲದೇ ಶೂಟಿಂಗ್| ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಅನುಮತಿ ಪಡೆಯದೆ ಹಂಪಿಯಲ್ಲಿ ಡ್ರೋನ್ ಬಳಸಿ ಶೂಟಿಂಗ್| ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಹಂಪಿ|
ಹೊಸಪೇಟೆ(ನ.25): ವಿಶ್ವ ಪರಂಪರೆ ತಾಣ ಹಂಪಿಯಲ್ಲಿ ಪ್ರೀವೆಡ್ಡಿಂಗ್ ಶೂಟಿಂಗ್ ನಡೆಸಿದ ಭಾವಿ ದಂಪತಿ ಸೇರಿ ಇತರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆಯ ಅಧ್ಯಕ್ಷ ವಿಶ್ವನಾಥ ಮಾಳಗಿ ದೂರು ನೀಡಿದ್ದಾರೆ.
ಹೈದರಾಬಾದ್ ಮೂಲದ ಜಾಹ್ನವಿ ರೆಡ್ಡಿ, ಸಿದ್ಧಾಂತ, ಮಹಿಮ್, ಸುಮನ್, ವಿಜಯ್ ಈಸಮ್ ಆ್ಯಂಡ್ ಕಂಪನಿ ಹಾಗೂ ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿ ಕಾಳಿಮುತ್ತು ಮತ್ತು ಸಿಬ್ಬಂದಿ ವಿರುದ್ಧ ಕ್ರಮವಹಿಸಬೇಕು ಎಂದು ದೂರಿದ್ದಾರೆ.
ಹಂಪಿಯಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್, ಜೋಡಿ ಮಾಡಿದ ಅವಾಂತರ ನೋಡಿ
ದೂರಿನ ಸಾರಾಂಶ:
ಹಂಪಿಯಲ್ಲಿ ಪ್ರೀವೆಡ್ಡಿಂಗ್ ಶೂಟಿಂಗ್ ಮಾಡಿ 2020ರ ಅಕ್ಟೋಬರ್ 13ರಂದು ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದ್ದು, ಕಮಲ ಮಹಲ್, ಕಲ್ಲಿನ ತೇರು, ವಿಜಯ ವಿಠ್ಠಲ ದೇಗುಲ, ಮಹಾನವಮಿ ದಿಬ್ಬ ಸೇರಿ ನಾನಾ ಕಡೆ ಅನುಮತಿ ಇಲ್ಲದೇ ಶೂಟಿಂಗ್ ಮಾಡಿದ್ದಾರೆ. ಜತೆಗೆ ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಅವರ ಅನುಮತಿ ಪಡೆಯದೆ ಹಂಪಿಯಲ್ಲಿ ಡ್ರೋನ್ ಬಳಸಿ ಶೂಟಿಂಗ್ ಮಾಡಲಾಗಿದೆ. ಈ ಬಗ್ಗೆ ಕ್ರಮವಹಿಸಬೇಕು ಎಂದು ಡಾ. ವಿಶ್ವನಾಥ ಮಾಳಗಿ ಹಂಪಿ ಪೊಲೀಸರಿಗೆ ಒತ್ತಾಯಿಸಿದ್ದಾರೆ. ಪೊಲೀಸರು ದೂರು ಸ್ವೀಕರಿಸಿದ್ದಾರೆ.