ಗಾಂಧಿನಗರದ ಕಪಾಲಿ ಚಿತ್ರಮಂದಿರ ಇದ್ದ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕಲು ಮಣ್ಣು ತೆಗೆದ ವೇಳೆ ಪಕ್ಕದ ಎರಡು ಕಟ್ಟಡಗಳು ಕುಸಿದು ಬಿದ್ದಿವೆ. ಈ ಹಿನ್ನೆಲೆಯಲ್ಲಿ ಹೊಸ ಕಟ್ಟಡದ ಮಾಲೀಕನ ವಿರುದ್ಧ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ ಎಂದು ಪಶ್ಚಿಮ ವಲಯದ ಜಂಟಿ ಆಯುಕ್ತ ಚಿದಾನಂದ್ ತಿಳಿಸಿದ್ದಾರೆ.
ಬೆಂಗಳೂರು(ಜು.29): ಗಾಂಧಿನಗರದ ಕಪಾಲಿ ಚಿತ್ರಮಂದಿರ ಇದ್ದ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕಲು ಮಣ್ಣು ತೆಗೆದ ವೇಳೆ ಪಕ್ಕದ ಎರಡು ಕಟ್ಟಡಗಳು ಕುಸಿದು ಬಿದ್ದಿವೆ. ಈ ಹಿನ್ನೆಲೆಯಲ್ಲಿ ಹೊಸ ಕಟ್ಟಡದ ಮಾಲೀಕನ ವಿರುದ್ಧ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ ಎಂದು ಪಶ್ಚಿಮ ವಲಯದ ಜಂಟಿ ಆಯುಕ್ತ ಚಿದಾನಂದ್ ತಿಳಿಸಿದ್ದಾರೆ.
ಅಲ್ಲದೆ, ಈ ಹೊಸ ಬಹುಮಹಡಿ ಕಟ್ಟಡಲ್ಲಿ ಬಿಬಿಎಂಪಿ ನೀಡಿದ್ದ ನಕ್ಷೆ ಮಂಜೂರಾತಿಯನ್ನು ರದ್ದುಪಡಿಸಲಾಗಿದೆ. ಬುಧವಾರ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿದಂತೆ ಪಾಲಿಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಮುಂದೇನು ಮಾಡಬೇಕೆಂಬ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದಿದ್ದಾರೆ.
undefined
ಸೋಂಕಿತರ ಪತ್ತೆಗೆ ವಾಸನೆ ಗ್ರಹಿಕೆ ಟೆಸ್ಟ್!
‘ಕನ್ನಡಪ್ರಭ’ದೊಂದಿಗೆ ಮಾನತಾಡಿದ ಚಿದಾನಂದ್, ಅಕ್ಕಪಕ್ಕದ ಕಟ್ಟಡಗಳು ಅಪಾಯದ ಹಂತದಲ್ಲಿ ಇದೆ ಎಂದು ವಿಷಯ ತಿಳಿದು ನಮ್ಮ ಬಿಬಿಎಂಪಿ ಅಧಿಕಾರಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಅಕ್ಕ ಪಕ್ಕದ ಕಟ್ಟಡದಲ್ಲಿ ಇರುವ ಜನರನ್ನು ಮುಂಜಾಗ್ರತೆಯಿಂದ ತೆರವು ಮಾಡಿದ್ದರು. ಇದರಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.
37 ವರ್ಷದ ಹಿಂದೆ ಇದೇ ಸ್ಥಳದಲ್ಲಿ ಅವಘಡ!
ಬೆಂಗಳೂರಿನಲ್ಲಿ ಕೆಲವು ದಶಕಗಳ ಹಿಂದೆ ಇದೇ ಕಪಾಲಿ ಚಿತ್ರಮಂದಿರದ ಪಕ್ಕದಲ್ಲಿದ್ದ ನಿರ್ಮಾಣ ಹಂತದ ಬಹುಮಹಡಿ ಕಟ್ಟಡ ಕುಸಿದು 123 ಜನ ಸಾವನ್ನಪ್ಪಿ, 120ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. 1983ರ ಸೆ.12ರಂದು ಇದೇ ಸ್ಥಳದಲ್ಲಿ ಎನ್.ಗಂಗಾರಾಮ್ ಎಂಬುವರಿಗೆ ಸೇರಿದ ಏಳು ಹಂತದ ಕಟ್ಟಡ ಕುಸಿತು ಬಿದ್ದಿತ್ತು. 37 ವರ್ಷದ ಹಿಂದೆ ನಡೆದಿದ್ದ ಈ ದುರ್ಘಟನೆ ಬೆಂಗಳೂರಿನ ಅತಿ ಕೆಟ್ಟದುರಂತ ಎಂದೇ ಕರೆಯಲ್ಪಟ್ಟಿತ್ತು. ಆದರೆ, ಈಗ ನಡೆದಿರುವ ಕಟ್ಟಡ ಕುಸಿತ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬುದೇ ಸಮಾಧಾನದ ಸಂಗತಿ.
ಬಿಗ್ ಬಾಸ್ ಜಯಶ್ರೀ ಕೇಶ ಮುಂಡನಕ್ಕೇನು ಕಾರಣ? ಹೊಸ ಬಾಳಿಗೆ ಹೆಜ್ಜೆ ಇಟ್ಟ ನಟಿ!
ಸುರಕ್ಷತಾ ಕ್ರಮಕೈಗೊಳ್ಳದೆ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದರಿಂದ ಈ ದುರ್ಘಟನೆ ನಡೆದಿದೆ. ಕಟ್ಟಡ ನಿರ್ಮಾಣದಾರರಿಂದ ನಿಯಮ ಪಾಲನೆಯಾಗದ ಬಗ್ಗೆ ಪರಿಶೀಲಿಸಿದ್ದ ನಮ್ಮ ಬಿಬಿಎಂಪಿ ಅಧಿಕಾರಿಗಳು ಮಾಲೀಕನ ವಿರುದ್ಧ ಸೋಮವಾರವೇ ಎಫ್‌ಐಆರ್ ದಾಖಲಿಸಿದ್ದರು. ಬುಧವಾರ ಕಟ್ಟಡ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.