ಸಿದ್ದ​ರಾ​ಮಯ್ಯ ವಿರುದ್ಧ ಅವ​ಹೇಳ​ನ​ಕಾರಿ ಪೋಸ್ಟ್‌: ಸಂಬರಗಿ ವಿರುದ್ಧ ದೂರು

Kannadaprabha News   | Asianet News
Published : Dec 18, 2020, 08:39 AM ISTUpdated : Dec 18, 2020, 08:44 AM IST
ಸಿದ್ದ​ರಾ​ಮಯ್ಯ ವಿರುದ್ಧ ಅವ​ಹೇಳ​ನ​ಕಾರಿ ಪೋಸ್ಟ್‌:  ಸಂಬರಗಿ ವಿರುದ್ಧ ದೂರು

ಸಾರಾಂಶ

ಸಿದ್ದ​ರಾ​ಮಯ್ಯ ಹಾಗೂ ಕಾಂಗ್ರೆ​ಸ್‌ನ ಕೇಂದ್ರ ನಾಯಕರ ಫೋಟೋ​ಗ​ಳನ್ನು ಹಾಕಿ ಕೆಟ್ಟ ಪದ​ಗ​ಳಿಂದ ನಿಂದಿ​ಸಿ​ದ್ದ ಸಂಬರಗಿ| ಪ್ರಾಣಿ​ಗಳ ಫೋಟೋ​ಗಳಿಗೆ ಮುಖಂಡ​ರ ಭಾವ​ಚಿ​ತ್ರ​ಗ ಹೊಂದಿಸಿ ಅವ​ಹೇ​ಳ​ನ​ಕಾ​ರಿ​ಯಾಗಿ ಪ್ರಕ​ಟಿ​ಸಿ​ದ್ದ​ ಪ್ರಶಾಂತ್‌ ಸಂಬ​ರ​ಗಿ| 

ಬೆಂಗಳೂರು(ಡಿ.18): ಫೇಸ್‌​ಬು​ಕ್‌​ನಲ್ಲಿ ಮಾಜಿ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಸೇರಿ ಹಲವು ಕಾಂಗ್ರೆಸ್‌ ಮುಖಂಡರ ವಿರುದ್ಧ ಅವ​ಹೇಳ​ನ​ಕಾರಿ ಫೋಟೋ​ಗ​ಳನ್ನು ಪ್ರಕ​ಟಿ​ಸಿದ ಆರೋ​ಪದ ಮೇಲೆ ಸಾಮಾ​ಜಿ​ಕ ಕಾರ್ಯ​ಕರ್ತ ಪ್ರಶಾಂತ್‌ ಸಂಬ​ರ​ಗಿ ವಿರುದ್ಧ ದಕ್ಷಿಣ ವಿಭಾಗದ ಸಿಇ​ಎ​ನ್‌​ ಪೊಲೀಸ್‌ ಠಾಣೆ​ಯಲ್ಲಿ ದೂರು ದಾಖಲಾಗಿದೆ.

ಮಾಜಿ ಸಿಎಂ ಸಿದ್ದ​ರಾ​ಮಯ್ಯ ಹಾಗೂ ಕಾಂಗ್ರೆ​ಸ್‌ನ ಕೇಂದ್ರ ನಾಯಕರ ಫೋಟೋ​ಗ​ಳನ್ನು ಹಾಕಿ ಕೆಟ್ಟ ಪದ​ಗ​ಳಿಂದ ನಿಂದಿ​ಸಿ​ದ​ಲ್ಲದೆ, ಪ್ರಾಣಿ​ಗಳ ಫೋಟೋ​ಗಳಿಗೆ ಮುಖಂಡ​ರ ಭಾವ​ಚಿ​ತ್ರ​ಗ​ಳನ್ನು ಹೊಂದಿಸಿ ಅವ​ಹೇ​ಳ​ನ​ಕಾ​ರಿ​ಯಾಗಿ ಪ್ರಕ​ಟಿ​ಸಿ​ದ್ದ​ರು. 

ಯೂ ಟರ್ನ್ ಆದ ಪ್ರಕರಣ : ಸಂಬರಗಿ ವಿರುದ್ಧವೇ ಕೇಸ್

ಈ ಸಂಬಂಧ ಕಾಂಗ್ರೆಸ್‌ ಮುಖಂಡ ವಿಜಯ್‌ ಆನಂದ್‌ ಎಂಬ​ವರು ದೂರು ನೀಡಿ​ದ್ದರು. ಈ ಹಿನ್ನೆ​ಲೆ​ಯಲ್ಲಿ ಪ್ರಶಾಂತ್‌ ಸಂಬ​ರಗಿ ವಿರುದ್ಧ ಪ್ರಕ​ರಣ ದಾಖ​ಲಾ​ಗಿದೆ ಎಂದು ಪೊಲೀ​ಸರು ಹೇಳಿ​ದ​ರು.
 

PREV
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!