* ಸಾಮಾಜಿಕ ಹೋರಾಟಗಾರ ಮಾನಸಯ್ಯ ಅವರಿಂದ ದೂರು
* ರಾಯಚೂರು ಜಿಲ್ಲೆಯ ಲಿಂಗಸುಗೂರು ಪೊಲೀಸ್ ಠಾಣೆಗೆ ದೂರು
* ಮತಾಂತರ ನಿಷೇಧ ವಿಧೇಯಕ ಮಂಡನೆ ವೇಳೆ ಪರಿಶಿಷ್ಟ ಜಾತಿ, ವರ್ಗದ ಜನರ ನಿಂದನೆ ಆರೋಪ
ಲಿಂಗಸುಗೂರು(ಡಿ.27): ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ಮಂಡನೆ ಸಮಯದಲ್ಲಿ ಪರಿಶಿಷ್ಟ ಜಾತಿ, ವರ್ಗದ ಜನರ ನಿಂದನೆ ಮಾಡಿದ್ದು ಕೂಡಲೇ ಸಿಎಂ(Chief Minister of Karnataka), ಸ್ಪೀಕರ್(Speaker), ಗೃಹ ಸಚಿವರ(Home Minister) ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡ (ದೌರ್ಜನ್ಯ ತಡೆ)ಕಾಯ್ದೆ 1989ರಡಿ ಪ್ರಕರಣ ದಾಖಲಿಸಬೇಕೆಂದು ಸಾಮಾಜಿಕ ಹೋರಾಟಗಾರ ಆರ್. ಮಾನಸಯ್ಯ(R Manasayya) ಲಿಂಗಸುಗೂರು(Lingsugur) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಡಿ.22ರಂದು ಬೆಳಗಾವಿ(Belagavi) ಸುವರ್ಣಸೌಧದಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ(Vishweshwar Hegde Kageri) ಅಧ್ಯಕ್ಷತೆಯಲ್ಲಿ ನಡೆದ ಅಧಿವೇಶನದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ(Araga Jnanendra) ಹಾಗೂ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಸಮ್ಮತಿದೊಂದಿಗೆ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ವಿಧೇಯಕ 2021 ಮಂಡಿಸಲಾಗಿದೆ. ವಿಧೇಯಕದ ಸೆಕ್ಷನ್ 5ರಲ್ಲಿ ಅಪ್ರಾಪ್ತ ಅಥವಾ ಅಸ್ವಸ್ಥಚಿತ್ತದ ವ್ಯಕ್ತಿ ಅಥವಾ ಮಹಿಳೆ ಸಂದರ್ಭದಲ್ಲಿ ಅಥವಾ ಅನುಸೂಚಿತ ಜಾತಿ, ಅನುಸೂಚಿತ ಪಂಗಡಕ್ಕೆ ಸೇರಿದ 3ನೇ ಪ್ರಕರಣದ ಉಪಬಂಧಗಳನ್ನು ಉಲ್ಲಂಘಿಸಿದರೆ 3 ವರ್ಷದಿಂದ 10 ವರ್ಷ ವಿಸ್ತರಿಸಬಹುದಾದ ಕಾರಾಗೃಹ ವಾಸದ ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದಿದೆ.
Belagavi Session: ಬೆಳಗಾವಿ ಅಧಿವೇಶನ ಅಂತ್ಯ, ತಮ್ಮದೇ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಯತ್ನಾಳ್
ಸರ್ಕಾರದ ವಿಧೇಯಕದಲ್ಲಿ ಸೆಕ್ಷನ್ 2(ಎ)ರಲ್ಲಿ ಅಮಿಷ ಎಂದು ತೋರಿಸಿದ್ದಾರೆ. ಮತಾಂತರಗೊಳ್ಳುವವರು(Conversion) ನಗದು ಹಣ, ವಸ್ತುಗಳ ರೂಪದಲ್ಲಿ ದಾನ, ಧಾರ್ಮಿಕ ಸಂಸ್ಥೆ ನಡೆಸುವ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗ, ಶಿಕ್ಷಣವನ್ನು ವಿಧೇಯಕದಲ್ಲಿ ಅಮಿಷಗಳೆಂದು ತೋರಿಸಿ ಇದರಿಂದ ಮತಾಂತರವಾಗುವ ಸಾಧ್ಯತೆಗಳಿವೆ ಎಂದು ತೋರಿಸಲಾಗಿದೆ. ಅಲ್ಲದೇ ವಿಧೇಯಕದಲ್ಲಿ ಪರಿಶಿಷ್ಟಜಾತಿ, ಪಂಗಡದ ಜನರನ್ನು ಪ್ರತ್ಯೇಕವಾಗಿ ತೋರಿಸಿ ಈ ಸಮುದಾಯಗಳ ಜನರು ಬಿಕಾರಿಗಳು, ದರಿದ್ರರು, ಹಣ, ಬಟ್ಟೆ, ಧಾನಧರ್ಮಗಳ ಅಮಿಷಕ್ಕೆ ಒಳಗಾಗಿ ಮತಾಂತರಗೊಳ್ಳುತ್ತಾರೆ ಎಂದು ಬಿಂಬಿಸಿ ಅವಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪ ಮಾಡಿದ್ದಾರೆ.
Anti Conversion Bill: ಮತಾಂತರ ನಿಷೇಧ, ಭಯಪಡುವ ಅಗತ್ಯವಿಲ್ಲ: ಸತೀಶ ಜಾರಕಿಹೊಳಿ
ಪರಿಶಿಷ್ಟ ಜಾತಿ, ಪಂಗಡದವರು ಮತಾಂತರಗೊಂಡರೆ ಸಮುದಾಯದ ಜನ ಪಡೆಯುತ್ತಿದ್ದ ಎಸ್‌ಸಿಪಿ, ಟಿಎಸ್‌ಪಿ ಯೋಜನೆಗಳು, ವಿದ್ಯೆ, ಉದ್ಯೋಗದ ಮೀಸಲಾತಿ, ಶಾಸನ ಸಭೆಗಳಿಗೆ ಆಯ್ಕೆಯಾಗುವ ಎಲ್ಲಾ ಸೌಲತ್ತು ರದ್ದುಗೊಳಿಸುವ ಬೆದರಿಕೆ ಹಾಕಲಾಗಿದೆ. ಜಾತಿ ತಾರತಮ್ಯ, ಸಾಮಾಜಿಕ ಅಸಮಾನತೆ, ಜನರನ್ನು ಇತರೆ ಸಮುದಾಯಗಳಿಂದ ಪ್ರತ್ಯೇಕಿಸುವ ವಿಧೇಯಕಕ್ಕೆ ಬಿಜೆಪಿ(BJP) ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿ ಪರಿಶಿಷ್ಟ ಜಾತಿ, ಪಂಗಡ ಸಮುದಾಯಗಳಿಗೆ ಅವಮಾನ ಮಾಡಿದ್ದಾರೆ. ಇದರಿಂದ ವಿಧೇಯಕ ಮಂಡಿಸಲು ಅವಕಾಶ ನೀಡಿದ ಸ್ಪಿಕರ್, ಸಿಎಂ, ಗೃಹ ಸಚಿವರು ಹಾಗೂ ವಿಧೇಯಕ ಮೇಜು ಕುಟ್ಟಿ ಬೆಂಬಲಿಸಿದ ಬಿಜೆಪಿ ಸದಸ್ಯರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡ (ದೌರ್ಜನ್ಯ ತಡೆ)ಕಾಯ್ದೆ 1989ರಡಿ ಪ್ರಕರಣ ದಾಖಲಿಸಬೇಕೆಂದು ಕೋರಿದ್ದಾರೆ.
ಅಧಿವೇಶನ ಮುಕ್ತಾಯ, ವಿಧಾನ ಪರಿಷತ್ತಿನಲ್ಲಿ ಮಂಡನೆಯಾಗದ ಮತಾಂತರ ಮಸೂದೆ
ಬೆಳಗಾವಿ: ಸುಮಾರು 10 ದಿನಗಳ ಕಾಲ ನಡೆದ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ (Belagavi Winter Session) ಮುಕ್ತಾಯಗೊಂಡಿದೆ.
ಪ್ರಮುಖವಾಗಿ ವಿಧಾನಸಭೆ ಅಧಿವೇಶನದಲ್ಲಿ ಕಾಂಗ್ರೆಸ್ ತೀವ್ರ ವಿರೋಧದ ನಡುವೆಯೇ ಮತಾಂತರ ನಿಷೇಧ ಕಾಯ್ದೆಯನ್ನು (Anti Conversion Bill) ಮಂಡಿಸಲಾಗಿದ್ದು, ಅದು ಅಂಗೀಕಾರ ಆಗಿದೆ ಕೂಡ. ಆದ್ರೆ, ಅದು ವಿಧಾನ ಪರಿಷತ್ ಮಂಡನೆ ಆಗಿಲ್ಲ. ಹೌದು, ವಿಪಕ್ಷ ಕಾಂಗ್ರೆಸ್ ಒತ್ತಡಕ್ಕೆ ಮಣಿದ ರಾಜ್ಯ ಬಿಜೆಪಿ ಸರ್ಕಾರ ಮತಾಂತರ ನಿಷೇಧ ಮಸೂದೆಯನ್ನು ಸದ್ಯಕ್ಕೆ ಹಿಂತೆಗೆದುಕೊಂಡು, ಮುಂದಿನ ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಿದೆ.