* ವಿದ್ಯುತ್ ಚಾಲಿತ ರೈಲುಗಳ ಸಂಚಾರ ಯಶಸ್ವಿ
* ಹಂಪಿ ಎಕ್ಸ್‌ಪ್ರೆಸ್, ಅಮರಾವತಿ ಎಕ್ಸ್‌ಪ್ರೆಸ್ ಆಗಮನ
* ವಾಯುಮಾಲಿನ್ಯ ತಡೆ, ಸಮಯ ಉಳಿತಾಯ
ಹುಬ್ಬಳ್ಳಿ(ಡಿ.27): ಇಲ್ಲಿನ ನೈಋುತ್ಯ ರೈಲ್ವೆ(South Western Railway) ಶ್ರೀ ಸಿದ್ಧಾರೂಢ ಸ್ವಾಮೀಜಿ (ಎಸ್‌ಎಸ್‌ಎಸ್) ನಿಲ್ದಾಣದಿಂದ ಭಾನುವಾರ ಮೊದಲ ಬಾರಿ ಎರಡು ಇ-ಲೋಕೋಮೋಟಿವ್ (ವಿದ್ಯುತ್ ಚಾಲಿತ) ರೈಲುಗಳು(Train) ಯಶಸ್ವಿ ಸಂಚಾರ ನಡೆಸಿದವು. ಮೈಸೂರು- ಹುಬ್ಬಳ್ಳಿ(Mysuru-Hubballi) ನಡುವಿನ ಹಂಪಿ ಎಕ್ಸ್‌ಪ್ರೆಸ್ (16592) ರೈಲು ಎಸ್‌ಎಸ್‌ಎಸ್ ನಿಲ್ದಾಣಕ್ಕೆ ಆಗಮಿಸಿದ ಮೊದಲ ವಿದ್ಯುತ್ ಲೋಕೋಮೋಟಿವ್(Electric Locomotive) ರೈಲು ಎನಿಸಿತು.
ಶನಿವಾರ ಸಂಜೆ ಹಂಪಿ 6.35ಕ್ಕೆ ಮೈಸೂರಿನಿಂದ (ಆರ್‌ಪಿಎಂ) ಡಬ್ಲೂಎಪಿ-7 30680 ಎಂಜಿನ್ ಮೂಲಕ ಹೊರಟಿದ್ದ ಇ-ಲೋಕೋಮೋಟೆವ್ ಹಂಪಿ ಎಕ್ಸ್‌ಪ್ರೆಸ್(Hampi Express) ಮೈಸೂರು- ಬೆಂಗಳೂರು- ಗುಂತಕಲ್- ಬಳ್ಳಾರಿ- ಹೊಸಪೇಟೆ- ಗದಗ ಮಾರ್ಗವಾಗಿ ಹುಬ್ಬಳ್ಳಿಗೆ ಆಗಮಿಸಿತು. ಬೆಳಗ್ಗೆ 10.30ಕ್ಕೆ ಎಸ್‌ಎಸ್‌ಎಸ್ ರೈಲ್ವೆ ನಿಲ್ದಾಣ ಪ್ರವೇಶಿತು. ಬಳಿಕ ಸಂಜೆ 6.20ಕ್ಕೆ ಪುನಃ ಮೈಸೂರಿಗೆ ತೆರಳಿದೆ.
Intercity express Train : ಯಶವಂತಪುರ - ಶಿವಮೊಗ್ಗ ರೈಲಿಗೆ ವಿಸ್ಟಾಡೋಮ್ ಕೋಚ್
ಇಲ್ಲಿವರೆಗೆ ಹೊಸಪೇಟೆ(Hosapete) ವರೆಗೆ ವಿದ್ಯುತ್ ಮಾರ್ಗವಿದ್ದ ಕಾರಣ ಅಲ್ಲಿ ನಿಲುಗಡೆ ಮಾಡಿ ಇ-ಲೋಕೋಮೋಟಿವ್ ಎಂಜಿನ್ ಬದಲಿಸಿ ಡೀಸೆಲ್ ಎಂಜಿನ್ ಜೋಡಿಸಲಾಗುತ್ತಿತ್ತು. ಇದೀಗ ಹೊಸಪೇಟೆಯಿಂದ ಹುಬ್ಬಳ್ಳಿ ವರೆಗೂ ವಿದ್ಯುತ್ ಮಾರ್ಗ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮೊದಲ ಬಾರಿ ವಿದ್ಯುತ್ ಚಾಲಿತ ರೈಲು ಸಂಚಾರ ನಡೆಸಿದೆ.
ಇನ್ನು ವಿಜಯವಾಡ- ಹುಬ್ಬಳ್ಳಿ ನಡುವಿನ ಅಮರಾವತಿ ಎಕ್ಸ್‌ಪ್ರೆಸ್ (17225/26) ಇ-ಲೋಕೋಮೋಟಿವ್ ರೈಲು ಕೂಡ ಮೊದಲ ಬಾರಿ ಎಸ್‌ಎಸ್‌ಎಸ್ ನಿಲ್ದಾಣ ಪ್ರವೇಶಿಸಿದೆ. ಶನಿವಾರ ರಾತ್ರಿ 7.35ಕ್ಕೆ ಹೊರಟಿದ್ದ ವಿಜಯವಾಡ ರೈಲು ಬೆಳಗ್ಗೆ ಹುಬ್ಬಳ್ಳಿಗೆ 11.20ಕ್ಕೆ ಪ್ರವೇಶಿಸಿತು. ಈ ಹಿಂದೆ ಗುಂತಕಲ್‌ನಲ್ಲಿ ಈ ರೈಲನ್ನು ನಿಲುಗಡೆ ಮಾಡಿ ಡೀಸೆಲ್ ಎಂಜಿನ್ ಜೋಡಣೆ ಮಾಡಲಾಗುತ್ತಿತ್ತು. ಈ ಇ-ಲೋಕೋಮೋಟಿವ್ ರೈಲು ಮಧ್ಯಾಹ್ನ 1.20ಕ್ಕೆ ವಾಪಸ್ ತೆರಳಿದೆ.
ಡೀಸೆಲ್‌ನಿಂದ(Diesel) ಉಂಟಾಗುತ್ತಿದ್ದ ವಾಯುಮಾಲಿನ್ಯವನ್ನು(Air pollution) ಇ-ಲೋಕೋಮೋಟಿವ್ ತಡೆಯಲಿದೆ. ಜತೆಗೆ ಎಂಜಿನ್ ಬದಲಿಸಲು 15 ನಿಮಿಷ ಸಮಯ ಉಳಿತಾಯವಾಗುತ್ತಿದೆ. ರೈಲ್ವೆ ಪ್ರಯಾಣ ಆರಂಭದಿಂದ ಅಂತ್ಯದ ವರೆಗೆ ಇ-ಲೋಕೋಮೋಟಿವ್ ರೈಲು ಸಂಚಾರ ಆಗಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟುರೈಲುಗಳನ್ನು ಇ-ಲೋಕೋಮೋಟಿವ್ ಆಗಿ ಪರಿವರ್ತಿಸಲಾಗುವುದು ಎಂದು ನೈಋುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನಿಶ್ ಹೆಗಡೆ ತಿಳಿಸಿದೆ.
ಕಾರಟಗಿ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಸಮಯ ಬದಲು
ಗಂಗಾವತಿ: ಕಾರಟಗಿ-ಯಶವಂತಪುರ ಎಕ್ಸ್‌ಪ್ರೆಸ್ ರೈಲಿನ (16546) ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ. ಕಾರಟಗಿಯಿಂದ ಸಂಜೆ 6ಕ್ಕೆ ಹೊರಟು ಗಿಣಗೇರಾ ಮಾರ್ಗದಿಂದ ಹುಲಗಿ ರೇಲ್ವೆ ನಿಲ್ದಾಣವನ್ನು ರಾತ್ರಿ 8ಕ್ಕೆ, ಹೊಸಪೇಟೆಯನ್ನು 8.30, ಬಳ್ಳಾರಿಯನ್ನು 10.20ಕ್ಕೆ ತಲುಪಲಿದೆ. ಮುಂದೆ ರಾಯದುರ್ಗ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ಯಶವಂತಪುರವನ್ನು ಮರುದಿನ ಮುಂಜಾನೆ 8.35ಕ್ಕೆ ತಲುಪಲಿದೆ.
ರೈಲ್ವೆ ಮಾರ್ಗದ ಸಮಯ ಬದಲಾವಣೆ ಮಾಡಿರುವುದು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಕೊಪ್ಪಳ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ತಿಳಿಸಿದ್ದಾರೆ.
ಜ.1ರಿಂದ ಮಂಗಳೂರಿಂದ ಎರಡು ನಗರಗಳಿಗೆ ರೈಲು ಸಂಚಾರ ಆರಂಭ
ಮಂಗಳೂರು: ಕೋವಿಡ್ (Covid ) ವೇಳೆ ನಿಲುಗಡೆಯಾಗಿದ್ದ ರೈಲುಗಳ (Train) ಸಂಚಾರವನ್ನು ಹಂತ ಹಂತವಾಗಿ ಆರಂಭಿಸಲಾಗುತ್ತಿದ್ದು, ಇದೀಗ ದಕ್ಷಿಣ ರೈಲ್ವೆ (Railway) ನಾಲ್ಕು ಸೂಪರ್ ಫಾಸ್ಟ್ ರೈಲುಗಳ ಸಂಚಾರವನ್ನು 2022 ಜನವರಿ 1ರಿಂದ ಆರಂಭಿಸುತ್ತಿದೆ. ಈ ರೈಲುಗಳು ರಿಸರ್ವೇಶನ್ ರಹಿತ ರೈಲುಗಳಾಗಿದ್ದು, ನಿಗದಿತ ಕೋಚ್‌ಗಳನ್ನು (Coach) ಮಾತ್ರ ಹೊಂದಿರುತ್ತವೆ.
Bengaluru Suburban Rail: ಹೀಲಲಿಗೆ-ಯಲಹಂಕ-ರಾಜಾನುಕುಂಟೆ ಸಬ್‌ಅರ್ಬನ್ ರೈಲು ಕಾಮಗಾರಿ ಶೀಘ್ರ
ನಂ.16603-16604 ಮಂಗಳೂರು (Mangaluru) ಸೆಂಟ್ರಲ್-ತಿರುವನಂತಪುರ ಸೆಂಟ್ರಲ್ ಮಾವೇಲಿ ಎಕ್ಸ್ ಪ್ರೆಸ್ ರೈಲು (Express Train) ಜ.1ರಿಂದ ಸಂಚಾರ ಆರಂಭಿಸಲಿದೆ. ನಂ.12601-12602 ಡಾ.ಎಂಜಿಆರ್ (MGR) ಚೆನ್ನೈ ಸೆಂಟ್ರಲ್ - ಮಂಗಳೂರು (Mangaluru) ಸೆಂಟ್ರಲ್ ಎಕ್ಸ್‌ಪ್ರೆಸ್ ಚೆನ್ನೈ ಸೆಂಟ್ರಲ್ ಮೈಲ ರೈಲು (Train) ಜ.1ರಿಂದ ಸಂಚರಿಸಲಿದೆ. ನಂ.16629-16630 ತಿರುವನಂತಪುರಂ ಸೆಂಟ್ರಲ್-ಮಂಗಳೂರು ಸೆಂಟ್ರಲ್ ಎಕ್ಸ್ ಪ್ರೆಸ್ ಮಲಬಾರ್ ಎಕ್ಸ್‌ಪ್ರೆಸ್ ರೈಲು ಜ.1ರಿಂದ 16ರ ವರೆಗೆ ಸಂಚರಿಸಲಿದೆ.
ನಂ.22637-22638 ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ - ಮಂಗಳೂರು (Mangaluru) ಸೆಂಟ್ರಲ್ ಎಕ್ಸ್ ಪ್ರೆಸ್ ವೆಸ್ಟ್$ಕೋಸ್ಟ್ ಎಕ್ಸ್ ಪ್ರೆಸ್ ರೈಲು ಜ.17ರಿಂದ ಸಂಚಾರ ಕೈಗೊಳ್ಳಲಿದೆ. ಈ ರೈಲುಗಳಿಗೆ ದ್ವಿತೀಯ ದರ್ಜೆಯ ಕುಳಿತುಕೊಳ್ಳುವ ಆಸನದ ಕೋಚ್ ಇರುತ್ತದೆ. ಅಲ್ಲದೆ ಹೆಚ್ಚುವರಿ ಸೂಪರ್ ಫಾಸ್ಟ್ ರೈಲಿನ ಶುಲ್ಕ ವಿಧಿಸಲಾಗುವುದು ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.