ವಿಪ್‌ ಉಲ್ಲಂಘಿಸಿ ಕಾಂಗ್ರೆಸ್‌ಗೆ ಮತ: ಬಿಜೆಪಿ ಸದಸ್ಯರ ವಿರುದ್ಧ ದೂರು

By Kannadaprabha NewsFirst Published Nov 4, 2020, 12:23 PM IST
Highlights

ಕೊಪ್ಪಳ ಜಿಪಂ ಚುನಾವಣೆ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸಿಗೆ ಮತ| ಚುನಾವಣೆಯಲ್ಲಿ ನನಗೆ ಮತ ಚಲಾಯಿಸದೆ ನನ್ನ ವಿರುದ್ಧ ಮತದಾನ ಮಾಡಿದ್ದಾರೆ. ಆದ ಕಾರಣ ಆ 6 ಸದಸ್ಯರ ಸದಸ್ಯತ್ವ ರದ್ದುಪಡಿಸಬೇಕೆಂದು  ದೂರು ನೀಡಿದ ಗಂಗಮ್ಮ|

ಕೊಪ್ಪಳ(ನ.04): ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪಕ್ಷದ ವಿಪ್‌ ಉಲ್ಲಂಘಿಸಿ ಕಾಂಗ್ರೆಸ್ಸಿಗೆ ಮತ ಚಲಾಯಿಸಿದ 6 ಬಿಜೆಪಿ ಸದಸ್ಯರ ವಿರುದ್ಧ ಪಕ್ಷದ ಮುಖಂಡರು ಜಿಪಂ ಸಿಇಒಗೆ ವಿಪ್‌ ಉಲ್ಲಂಘನೆ ದೂರು ನೀಡಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಅವರು ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್‌ ಅವರ ಆದೇಶದ ಮೇರೆಗೆ ದೂರು ಸಲ್ಲಿಸಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಅವರ ಸದಸ್ಯತ್ವ ರದ್ದು ಮಾಡಬೇಕು ಎಂದ ದೊಡ್ಡನಗೌಡ ಪಾಟೀಲ ಹಾಗೂ ಜಿಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಇಟಗಿ ಕ್ಷೇತ್ರದ ಗಂಗಮ್ಮ ಈಶಣ್ಣ ಗುಳಗಣ್ಣವರ ಪ್ರತ್ಯೇಕವಾಗಿ ದೂರು ಸಲ್ಲಿಸಿದ್ದಾರೆ. ಚುನಾವಣೆಯಲ್ಲಿ ನನಗೆ ಮತ ಚಲಾಯಿಸದೆ ನನ್ನ ವಿರುದ್ಧ ಮತದಾನ ಮಾಡಿದ್ದಾರೆ. ಆದ ಕಾರಣ ಆ 6 ಸದಸ್ಯರ ಸದಸ್ಯತ್ವ ರದ್ದುಪಡಿಸಬೇಕೆಂದು ಗಂಗಮ್ಮ ದೂರು ನೀಡಿದ್ದಾರೆ.

ಶುರುವಾಯಿತು ಕಾನೂನು ಸಮರ:

ಜಿಪಂ ಅಧ್ಯಕ್ಷ ಸ್ಥಾನದ ಚುನಾವಣೆ ವೇಳೆ ಬಿಜೆಪಿ ಸದಸ್ಯರಿಗೆ ವಿಪ್‌ ಜಾರಿ ಮಾಡಿತ್ತು. ಆದರೂ ಸಹ ಈ 6 ಸದಸ್ಯರು ತಮ್ಮ ಅಭ್ಯರ್ಥಿಗೆ ಮತ ಚಲಾಯಿಸದೆ ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಬೆಂಬಲಿಸಿ ಮತದಾನ ಮಾಡಿದ್ದರು. ವಿಪ್‌ ಉಲ್ಲಂಘಿಸಿದ ಸದಸ್ಯರ ಮೇಲೆ ಬಿಜೆಪಿ ಏಕೆ ಕ್ರಮಕೈಗೊಳ್ಳುತ್ತಿಲ್ಲ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿತ್ತು. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ ಅವರ ಆದೇಶದ ಮೇರೆಗೆ ಪಕ್ಷಾಂತರ ಮಾಡಿದ ಸದಸ್ಯರ ವಿರುದ್ಧ ಕಾನೂನು ಸಮರಕ್ಕೆ ಪಕ್ಷದ ಮುಖಂಡರು ಮುಂದಾಗಿದ್ದಾರೆ. ಅಧಿಕಾರ ಇರುವುದು ಸಹ ಏಳು ತಿಂಗಳು ಮಾತ್ರ. ಅಷ್ಟರೊಳಗೆ ಈ ಕಾನೂನು ಸಮರ ಮುಗಿಯಲಿದೆ ಎಂದು ಕಾದು ನೋಡಬೇಕಿದೆ.
ಅಷ್ಟಕ್ಕೂ ಕಾಂಗ್ರೆಸ್ಸಿಗೆ ನಿಚ್ಚಳ ಬಹುಮತ ಇತ್ತು. ಬಿಜೆಪಿ ಸದಸ್ಯರ ಬೆಂಬಲವೇ ಬೇಕಿರಲಿಲ್ಲ. ಒಂದು ವೇಳೆ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಚಲಾಯಿಸಿದ ಬಿಜೆಪಿ ಸದಸ್ಯರ ಮೇಲೆ ಕ್ರಮವಾದರೂ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ.

ರಾಜ್ಯದ ಗಮನ‌ಸೆಳೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಜಯ

ಈ ವೇಳೆ ಕೊಪ್ಪಳ ಗ್ರಾಮೀಣ ಮಂಡಲ ಅಧ್ಯಕ್ಷ ಪ್ರದೀಪ ಹಿಟ್ನಾಳ, ಮಂಡಲ ಪ್ರಧಾನ ಕಾರ್ಯದರ್ಶಿ ಪಿ.ಬಿ. ಹಿರೇಮಠ, ಜಿಲ್ಲಾ ಮಾಧ್ಯಮ ವಕ್ತಾರ ಬಸಲಿಂಗಯ್ಯ ಜಿ. ಗದಗಿನಮಠ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.

ಯಾರ‍್ಯಾರು ಸದಸ್ಯರು?

1. ಪ್ರೇಮಾ ಈರಪ್ಪ ಕುಡಗುಂಟಿ
2. ವಿಜಯಕುರ್ಮಾ ಲಮಾಣಿ
3. ಜೈನರ ಶರಣಮ್ಮ ಸಂಗನಗೌಡ ಟೆಂಗುಂಟಿ
4. ಭಾಗ್ಯವತಿ ಮಾಣಿಕ ಬೊಲಾ
5. ಸಿ. ವಿಜಯಲಕ್ಷ್ಮಿ ಪಲ್ಲೇದ ಕಡೂರ
6. ಭಾವಿಮನಿ ನೀಲಮ್ಮ ಅಡಿವೆಪ್ಪ ಬಂಡಿ
 

click me!