Bengaluru: ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಟ್ರಾನ್ಸ್‌ಫರ್‌?: ಹುದ್ದೆಗೇರಲು ಭಾರೀ ಪೈಪೋಟಿ ಶುರು..!

Published : Apr 27, 2022, 04:40 AM IST
Bengaluru: ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಟ್ರಾನ್ಸ್‌ಫರ್‌?: ಹುದ್ದೆಗೇರಲು ಭಾರೀ ಪೈಪೋಟಿ ಶುರು..!

ಸಾರಾಂಶ

*  ಆಯುಕ್ತರಾಗಿ 20 ತಿಂಗಳು ಪೂರೈಸಿದ ಕಮಲ್‌ ಪಂತ್‌ *  ಅಲೋಕ್‌, ದಯಾನಂದ್‌ ಮುಂಚೂಣಿಯಲ್ಲಿ *  ಚಂದ್ರು ಕೇಸ್‌ನಲ್ಲಿ ಪಂತ್‌ ಹೇಳಿಕೆಯಿಂದ ಸರ್ಕಾರಕ್ಕೆ ಮುಜುಗರ  

ಬೆಂಗಳೂರು(ಏ.27):  ರಾಜ್ಯ ಸರ್ಕಾರ ಗೃಹ ಇಲಾಖೆ ಆಡಳಿತದಲ್ಲಿ ಬದಲಾವಣೆಗೆ ಮುಂದಾಗಿರುವುದರಿಂದ ಮುಂದಿನ ವಾರದ ರಂಜಾನ್‌ ಹಬ್ಬದ ಬಳಿಕ ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌(Bengaluru City Police Commissioner) ಬದಲಾಗುವುದು ಖಚಿತ ಎನ್ನಲಾಗಿದೆ.

ಯಾವುದೇ ಗುರುತರ ಆರೋಪಗಳು ಅಥವಾ ವಿವಾದಗಳು ಇಲ್ಲದೆ ಹೋದರೂ ನಗರ ಪೊಲೀಸ್‌ ಆಯುಕ್ತರಾಗಿ 20 ತಿಂಗಳ ಅವಧಿ ಮುಗಿಸಿರುವ ಕಾರಣಕ್ಕೆ ಕಮಲ್‌ ಪಂತ್‌(Kamal Pant) ಅವರನ್ನು ಬೇರೆಡೆಗೆ ವರ್ಗಾಯಿಸಿ ಮತ್ತೊಬ್ಬರಿಗೆ ಹುದ್ದೆ ಕಲ್ಪಿಸಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.

ತಮ್ಮದೇ ಸರ್ಕಾರದ ಗೃಹ ಇಲಾಖೆ ಮೇಲೆ ಬಿಜೆಪಿ ಅನುಮಾನ‌?

ಈ ನಡುವೆ ಆಯುಕ್ತ ಹುದ್ದೆ ಅಲಂಕರಿಸುವ ಮಹತ್ವಾಕಾಂಕ್ಷೆಯಲ್ಲಿರುವ ಕೆಲ ಐಪಿಎಸ್‌ ಅಧಿಕಾರಿಗಳು(IPS Officers) ತಮ್ಮದೇ ರಾಜಕೀಯ ಪ್ರಭಾವ ಬಳಸಿಕೊಂಡು ಕಮಲ್‌ ಪಂತ್‌ ಅವರನ್ನು ಬದಲಾಯಿಸಲು ಸರ್ಕಾರದ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ಆಯುಕ್ತರ ಹುದ್ದೆ ರೇಸ್‌ನಲ್ಲಿ ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್‌ ಕುಮಾರ್‌(Alok Kumar), ಗುಪ್ತದಳ ಮುಖ್ಯಸ್ಥ ಬಿ.ದಯಾನಂದ್‌, ಸಿಐಡಿ ಎಡಿಜಿಪಿ ಉಮೇಶ್‌ ಕುಮಾರ್‌, ಆಂತರಿಕ ಭದ್ರತಾ ವಿಭಾಗದ ಮುಖ್ಯಸ್ಥ ಅರುಣ್‌ ಚಕ್ರವರ್ತಿ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಪ್ರತಾಪ್‌ ರೆಡ್ಡಿ ಹೆಸರು ಮುಂಚೂಣಿಯಲ್ಲಿವೆ. ಈ ಪೈಕಿ ಅಲೋಕ್‌ ಕುಮಾರ್‌ ಮತ್ತು ಬಿ.ದಯಾನಂದ್‌ ಹೆಸರು ಹೆಚ್ಚು ಚರ್ಚೆಯಾಗುತ್ತಿದೆ. ಇಬ್ಬರೂ ಖಡಕ್‌ ಅಧಿಕಾರಿಗಳಾಗಿದ್ದು, ಉತ್ತಮ ಹೆಸರು ಪಡೆದಿದ್ದಾರೆ. ಹೀಗಾಗಿ ಆಯುಕ್ತರ ಹುದ್ದೆಗೆ ಈ ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎನ್ನಲಾಗಿದೆ.

ಇತ್ತೀಚೆಗೆ ನಡೆದ ಜೆ.ಜೆ.ನಗರ ಚಂದ್ರು ಕೊಲೆ ಪ್ರಕರಣದಲ್ಲಿ ಉರ್ದು ಮಾತನಾಡಿಲ್ಲ ಎಂಬ ಕಾರಣಕ್ಕೆ ಚಂದ್ರು ಕೊಲೆಯಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಆಯುಕ್ತ ಕಮಲ್‌ ಪಂತ್‌ ಅವರು ಬೈಕ್‌ ಡಿಕ್ಕಿಯ ಕಾರಣಕ್ಕೆ ನಡೆದ ಜಗಳದ ವೇಳೆ ಚಂದ್ರು ಕೊಲೆಯಾಗಿದೆ ಎಂದು ಹೇಳಿದ್ದರು. ಈ ವಿಚಾರದಲ್ಲಿ ಗೃಹ ಸಚಿವರಾದಿಯಾಗಿ ಸರ್ಕಾರ ತೀವ್ರ ಮುಜುಗರ ಅನುಭವಿಸಿತ್ತು. ಈ ವೇಳೆ ಬಿಜೆಪಿ(BJP)s ನಾಯಕರು ಆಯುಕ್ತ ಕಮಲ್‌ ಪಂತ್‌ ವಿರುದ್ಧ ಬಹಿರಂಗ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಕಮಲ್‌ ಪಂತ್‌ ಅವರ ವರ್ಗಾವಣೆ ವಿಚಾರ ಚರ್ಚೆಗೆ ಬಂದಿತು.
 

PREV
Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ