ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು

By Kannadaprabha News  |  First Published Jul 21, 2019, 8:06 AM IST

ಕಾಲೇಜು ವಿದ್ಯಾರ್ಥಿನಿ ಕೆ.ಎಸ್‌. ಶಿಲ್ಪಾ ಎಂಬವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರಿನ ಬಾಳೆಹೊನ್ನೂರು ಸಮೀಪದಲ್ಲಿ ನಡೆದಿದೆ. ಕಡ್ಲೇಮಕ್ಕಿಯ ಸರ್ಕಾರಿ ಸ್ವತಂತ್ರ ಪಿಯು ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿದೆ.


ಚಿಕ್ಕಮಗಳೂರು(ಜು.21): ಕಾಲೇಜು ವಿದ್ಯಾರ್ಥಿನಿ ಕೆ.ಎಸ್‌. ಶಿಲ್ಪಾ (17) ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣ ಸಮೀಪದ ಮಸೀದಿಕೆರೆಯಲ್ಲಿ ಶನಿವಾರ ನಡೆದಿದೆ.

ಕಡ್ಲೇಮಕ್ಕಿಯ ಸರ್ಕಾರಿ ಸ್ವತಂತ್ರ ಪಿಯು ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಎಂದಿನಂತೆ ಶನಿವಾರ ಶಿಲ್ಪಾ ಕಾಲೇಜಿಗೆ ತೆರಳಿದ್ದರು. ಮಧ್ಯಾಹ್ನ ಕಾಲೇಜು ಮುಗಿದ ಬಳಿಕ ಮನೆಗೆ ಬಂದು ಸೀರೆಯನ್ನು ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

Latest Videos

ಬಾಲಕಿ ಎದುರು ಎಲೆಕ್ಷನ್ ಸೋತಿದ್ದಕ್ಕೆ 13ರ ಬಾಲಕ ಆತ್ಮಹತ್ಯೆ!

ತಾಯಿ ಹೇಮಾ ಎಂದಿನಂತೆ ಕೂಲಿ ಕೆಲಸಕ್ಕೆ ಹೋಗಿ ಶನಿವಾರ ಸಂಜೆ ಮನೆಗೆ ಬಂದು ಬಾಗಿಲು ತೆಗೆದಿದ್ದಾರೆ. ಆಗ ಶಿಲ್ಪಾ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಶಿಲ್ಪಾ ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲ. ಸ್ಥಳಕ್ಕೆ ಪಿಎಸ್‌ಐ ತೇಜಸ್ವಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿನಿ ತಾಯಿ ಹೇಮಾ ದೂರು ನೀಡಿದ್ದಾರೆ.

click me!