ನಿಮ್ಮಂಥವರು ಹಿಂದೂ ಧರ್ಮಕ್ಕೆ ಕಳಂಕ; ‘ಮೋದಿ ಭಕ್ತ’ನಿಗೆ ಬಿಸಿ ಮುಟ್ಟಿಸಿದ ಮೇಯರ್

Published : Jul 20, 2019, 05:35 PM ISTUpdated : Jul 20, 2019, 05:42 PM IST
ನಿಮ್ಮಂಥವರು ಹಿಂದೂ ಧರ್ಮಕ್ಕೆ ಕಳಂಕ; ‘ಮೋದಿ ಭಕ್ತ’ನಿಗೆ ಬಿಸಿ ಮುಟ್ಟಿಸಿದ ಮೇಯರ್

ಸಾರಾಂಶ

ಗಣೇಶ ಹಬ್ಬ ಸಮೀಪಿಸುತ್ತಿದ್ದಂತೆ, ಕೆಲ ಕಿಡಿಗೇಡಿಗಳು ಕೀಳು ಮಟ್ಟದ ರಾಜಕೀಯ ಶುರು ಮಾಡಿದ್ದಾರೆ. ಅದರ ಮೊದಲ ಬಲಿಪಶು ಬೆಂಗಳೂರಿನ ಮೇಯರ್! ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರ, ಪೊಲೀಸರಿಗೆ ದೂರು

ಬೆಂಗಳೂರು (ಜು.20): ಕೆಲದಿನಗಳ ಹಿಂದೆ ಗಣೇಶ ಹಬ್ಬಕ್ಕೆ ಸಂಬಂಧಿಸಿದಂತೆ ಕೆಲವರ ವರ್ತನೆ ಬಗ್ಗೆ, ಬಿಬಿಎಂಪಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ವಿಷಾದದ ಮಾತುಗಳನ್ನಾಡಿದ್ದರು.

ಅದರ ಬೆನ್ನಲ್ಲೇ, ಅವರು ಊಹಿಸಿದಂತೆಯೇ ಕೆಲ ಬೆಳವಣಿಗೆಗಳು ನಡೆದಿವೆ. ಸೋಶಿಯಲ್ ಮೀಡಿಯಾದಲ್ಲಿ ಮೇಯರ್ ವಿರುದ್ಧ ಅಪಪ್ರಚಾರ ನಡೆದಿದೆ. ಅವರನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಕೆಲ ಕಿಡಿಗೇಡಿಗಳು ಪ್ರಯತ್ನಿಸಿದ್ದಾರೆ.  

ಈ ಹಿನ್ನೆಲೆಯಲ್ಲಿ ಸೈಬರ್ ಕಿಡಿಗೇಡಿಗಳಿಗೆ ಮೇಯರ್, ಹಿಗ್ಗಾಮುಗ್ಗಾವಾಗಿ ತರಾಟೆಗೆ ತೆಗೆದುಕೊಂಡಿದ್ದಾರಲ್ಲದೇ ಕಾನೂನಿನ ಎಚ್ಚರಿಕೆಯನ್ನೂ ನೀಡಿದ್ದರು.


ಇದಾದ ಬಳಿಕವೂ, ತಮ್ಮ ನರಿ ಬುದ್ಧಿ ಮುಂದುವರಿಸಿದ ಕಿಡಿಗೇಡಿಗಳ ವಿರುದ್ಧ ಮೇಯರ್ ಇದೀಗ ಕಾನೂನು ಕ್ರಮವನ್ನು ತೆಗೆದುಕೊಂಡಿದ್ದಾರೆ. ಬೆಂಗಳೂರು ಸಿಟಿ ಪೊಲೀಸ್ ಕಮಿಷನರ್ ಭೇಟಿಯಾಗಿ ಮಣಿಕಂಠ ಭಾರದ್ವಾಜ್ ಎಂಬ ವ್ಯಕ್ತಿ, ಮೋದಿ ಭಕ್ತ  ಫೇಸ್ಬುಕ್ ಪೇಜ್ ಅಡ್ಮಿನ್ ಮತ್ತಿತರ ವಿರುದ್ಧ  ದೂರು ನೀಡಿದ್ದಾರೆ.
 

PREV
click me!

Recommended Stories

ಯಶ್ ಹೇಳಿದ ಜೀವನಾನುಭವವನ್ನು ಪಾಠದಲ್ಲಿ ಸೇರಿಸಿ: ಸೊರಬದ ಯುವಕ ಆತ್ಮ*ಹತ್ಯೆ
ನಕಲಿ ಗೋಲ್ಡ್, ಅಸಲಿ ಎಫ್ಐಆರ್: ಕಳ್ಳರಿಗೆ ಚಳ್ಳೆಹಣ್ಣು ತಿನ್ನಿಸಿದ ಶಿವಮೊಗ್ಗದ 73ರ ಅಜ್ಜಿ