New Year 2023: ಕಾಫಿನಾಡು ಚಿಕ್ಕಮಗಳೂರು ಹೊಸ ವರ್ಷಕ್ಕೆ ಹೌಸ್‌ಫುಲ್!

By Ravi Janekal  |  First Published Dec 27, 2022, 8:48 PM IST
  • ಕಾಫಿನಾಡು ಚಿಕ್ಕಮಗಳೂರು ಹೊಸ ವರ್ಷಕ್ಕೆ ಹೌಸ್‌ಫುಲ್!
  • ರೆಸಾರ್ಟ್ ಹಾಗೂ ಹೋಂ ಸ್ಟೇ ಭರ್ತಿ
  • ಒಂದು ತಿಂಗಳ ಮುಂಚೆಯೇ ಬುಕ್ಕಿಂಗ್ ಆಗಿರುವ ಹೋಂ ಸ್ಟೇ, ರೆಸಾರ್ಟ್ 
  • ಮಾಗಿ ಚಳಿ, ಕಾಫಿ ತೋಟದ ನಡುವೆ ಹೊಸ ವರ್ಷ ಆಚರಣೆಗೆ ಪ್ಲಾನ್ 

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಡಿ.27) : ವರ್ಷದ ಕೊನೆ ದಿನ ಅಂದ್ರೆ ಏನೋ ಸಂಭ್ರಮ, ಸಡಗರ. ಹೊಸ ಮನ್ವಂತರಕ್ಕೆ ಸಾಕ್ಷಿಯಾಗುವ ಸುಸಮಯ. ಹಾಗಾಗಿ, 2022ಕ್ಕೆ ಟಾಟಾ ಹೇಳಿ 2023ಕ್ಕೆ ವೆಲ್ಕಂ ಹೇಳೋಕೆ ಈಗಾಗ್ಲೇ ಪ್ಲಾನ್ ರೆಡಿಯಾಗಿದೆ. ಜನ ತಮ್ಮ ಫೆವರಿಟ್ ಸ್ಪಾಟ್ಗಳಿಗೆ ಹೋಗಿ ಸೆಟ್ಲ್ ಆಗೋಕೆ ತುದಿಗಾಲಲ್ಲಿ ನಿಂತಿದ್ದಾರೆ. 

Tap to resize

Latest Videos

ಕಾಫಿನಾಡು ಚಿಕ್ಕಮಗಳೂರಂತೂ(Chikkamagaluru)ಹೌಸ್‌ಫುಲ್(Houseful) ಎಲ್ಲಿ ನೋಡಿದ್ರು ಪ್ರವಾಸಿಗರ(Tourist)ದಂಡು. ಇಯರ್ ಎಂಡ್(year end) ಆಗಿರೋದ್ರಿಂದ ರಾಜ್ಯದ ಎತ್ತರದ ಪ್ರದೇಶವಾಗಿರೋ ಮುಳ್ಳಯ್ಯನಗಿರಿ(Mullayanagiri Peak)ಯಲ್ಲಿ ಪ್ರತಿ ದಿನ ಜನಸಾಗರವೇ ಸೇರ್ತಿದೆ. ಹಾಗಾಗಿ ಸುತ್ತಮುತ್ತಲಿನ ಹೋಂ ಸ್ಟೇ(Homestay), ರೆಸಾರ್ಟ್(resorts) ಹೋಟೆಲ್ಗಳು(Hotels) ಫುಲ್ ಬುಕ್ ಆಗಿವೆ. ಬಹುತೇಕರು ಹೊಸವರ್ಷದ ಪಾರ್ಟಿಗಳಿಗೆ ಬುಕ್ ಮಾಡಿಸಿದ್ದಾರೆ. 

ಹೊಸವರ್ಷದಂದು ಪಾಶ್ಚಾತ್ಯ ನೃತ್ಯ ಆಚರಣೆಗೆ ಭಜರಂಗದಳ ವಿರೋಧ

ತಿಂಗಳ ಹಿಂದೆಯೇ ಬುಕ್ಕಿಂಗ್ :  

ನೂತನ ವರ್ಷವನ್ನು ಕಾಫಿನಾಡು ಪ್ರಕೃತಿ ಸೌಂದರ್ಯ ಸವಿಯಲು ಸಜ್ಜಾಗಿದ್ದಾರೆ. ಅದಕ್ಕಾಗಿ ಕೆಲವರು ತಿಂಗಳ ಹಿಂದೆಯೇ ಬುಕ್ಕಿಂಗ್ ಮಾಡಿದ್ದಾರೆ. ಕಾಫಿನಾಡಲ್ಲಿರೋ ಸುಮಾರು 800ಕ್ಕೂ ಅಧಿಕ ಹೋಂಸ್ಟೇ ಹಾಗೂ ರೆಸಾರ್ಟ್‌ಗಳು ಆಲ್ಮೋಸ್ಟ್ ಬುಕ್ ಆಗಿವೆ. ಫುಲ್ ಆಗಿವೆ. ಆದ್ರೆ, ಕಳೆದ ಎರಡು ವರ್ಷಗಳಿಂದ ಕೊರೊನಾ ಆತಂಕದಲ್ಲೇ ನ್ಯೂ ಇಯರ್ ಸೆಲಬ್ರೆಟ್ ಮಾಡಿದ್ದು. ಈ ವರ್ಷ ಮತ್ತೆ ಕೊರೋನಾ 4ನೇ ಅಲೆ ಎಂದೆಳ್ತಿರೋದು ಸರ್ಕಾರ ಯಾವಾಗ-ಯಾವ ಕಾನೂನು ತರುತ್ತೋ ಅಂತ ಆತಂಕದಲ್ಲೇ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. 

ಕೊರೋನಾ 4ನೇ ಅಲೆ ಭೀತಿ ನಡುವೆಯೂ ಭರ್ಜರಿ ತಯಾರಿ 

ಕಾಂಕ್ರೀಟ್ ಕಾಡಿನ ಮಧ್ಯೆ ವಾಯು ಹಾಗೂ ಶಬ್ಧ ಮಾಲಿನ್ಯದಿಂದ ಕಳೆದು ಹೋಗಿದ್ದ ಪ್ರವಾಸಿಗರಿಗೆ ಭೂಲೋಕದ ಸ್ವರ್ಗ ಕಾಫಿನಾಡು ವಿಶಿಷ್ಟ ಅನುಭವ ನೀಡ್ತಿದೆ. ಪರ್ವತ ಶ್ರೇಣಿಗಳಲ್ಲಿ ನಿಮಿಷಕ್ಕೊಮ್ಮೆ ಬದಲಾಗೋ ಪ್ರಕೃತಿಯ ವಿಸ್ಮಯ ಕಂಡು ಪ್ರವಾಸಿಗ್ರು ಮೈಮರೆಯುತ್ತಿದ್ದಾರೆ. ಆದ್ರೆ, ಪ್ರವಾಸಿಗರ ದಂಡನ್ನ ಕಂಡ ಕೆಲ ಹೋಂ ಸ್ಟೇ, ರೆಸಾರ್ಟ್ ಹಾಗೂ ಲಾಡ್ಜ್ ಮಾಲೀಕರು ಪ್ರವಾಸಿಗರಿಂದ ದುಬಾರಿ ಹಣ ಕೇಳ್ತಿರೋದು ಉಂಟು. ಆಯ್ತು ಕೊಡ್ತೀವಿ. ಮೊದ್ಲು ರೂಂ ಕೊಡಿ ಎಂದೇಳ್ತಿರೋ ಪ್ರವಾಸಿಗ್ರು ಇದ್ದಾರೆ. ಜಿಲ್ಲೆಯ ಬಹುತೇಕ ಹೋಂಸ್ಟೆ, ರೆಸಾರ್ಟ್, ಲಾಡ್ಜ್‌ಗಳು ಭರ್ತಿಯಾಗಿದ್ದು, ಬುಕ್ಕಿಂಗ್ ಕ್ಯಾನ್ಸಲ್ ಆದ್ರಷ್ಟೆ ರೂಂ ಸಿಗೋದು ಎಂಬಂತಾಗಿದೆ. ಇನ್ನು ಹೋಂಸ್ಟೆ, ರೆಸಾರ್ಟ್ ಮಾಲೀಕರು ಕೂಡ ಬಗೆಬಗೆಯ ಭೋಜನ, ಡಿಜೆ ಪಾರ್ಟಿ, ಫೈರ್ ಕ್ಯಾಂಪ್ ಸೇರಿದಂತೆ ಪ್ರವಾಸಿಗರ ಬೇಡಿಕೆಯನ್ನ ಈಡೇರಿಸೋದಕ್ಕೆ ಸನ್ನದ್ಧರಾಗಿದ್ದಾರೆ.

ಹೊಸ ವರ್ಷಾಚರಣೆಗೆ ಪ್ರವಾಸಿಗರ ದಂಡು, ಕೋವಿಡ್ ನಿಯಂತ್ರಣಕ್ಕೆ ಮುಂದಾಗುತ್ತಾ ಕೊಡಗು ಜಿಲ್ಲಾಡಳಿತ

ಒಟ್ಟಾರೆ, ಕಳೆದೆರಡು ವರ್ಷಗಳಿಂದ ಕೊರೋನಾ(Corona), ಲಾಕ್ ಡೌನ್(*Lockdown) ಅಂತ ವ್ಯವಹಾರವಿಲ್ಲದೆ ಕಂಗೆಟ್ಟಿದ್ದ ಹೋಂ ಸ್ಟೇ, ರೆಸಾರ್ಟ್, ಹೋಟೆಲ್ ಮಾಲೀಕರಿಗೆ ಒಳ್ಳೆ ಸಮಯದಲ್ಲೇ ಕೊರೋನಾ 4ನೇ ಅಲೆ ನಾಲಿಗೆ ಮೇಲಿನ ಬಿಸಿ ತುಪ್ಪದಂತಾಗಿದೆ. ಆದ್ರೂ, ಸರ್ಕಾರದ ಆದೇಶವನ್ನ ಪಾಲಿಸಲೇಬೇಕು.  ಸರ್ಕಾರ ಹೊಸ ವರ್ಷ ಮುಗಿಯುವವರೆಗಾದರೂ ಯಾವುದೇ ಕಠಿಣ ಕ್ರಮಗಳನ್ನ ಕೈಗೊಳ್ಳಬಾರದು. ನಾವು ಎಲ್ಲಾ ರೀತಿಯಲ್ಲೂ ಮುಂಜಾಗೃತೆ ವಹಿಸುತ್ತೇವೆಂದು ಹೋಂಸ್ಟೇ ಮಾಲೀಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೆ, ಜನ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಏನ್ ಕ್ರಮಕೈಗೊಳ್ಳೂತ್ತೋ ಕಾದು ನೋಡ್ಬೇಕು.

click me!