Cobra Hidden Inside Kitchen : ಶಿವಮೊಗ್ಗ, ಸಂಕ್ರಾಂತಿಗೆ ಬಂದ ನಾಗರ ಮಿಕ್ಸಿಯಲ್ಲಿ ಕುಳಿತಿದ್ದ!

Published : Jan 17, 2022, 12:24 AM IST
Cobra Hidden Inside Kitchen : ಶಿವಮೊಗ್ಗ, ಸಂಕ್ರಾಂತಿಗೆ ಬಂದ ನಾಗರ ಮಿಕ್ಸಿಯಲ್ಲಿ ಕುಳಿತಿದ್ದ!

ಸಾರಾಂಶ

* ಹಬ್ಬಕ್ಕೆ ಆಡುಗೆ ಮನೆಗೆ ಬಂದಿದ್ದ  ನಾಗರ....! * ಮನೆಯವರ ಸದ್ದು ಕೇಳಿಸುತ್ತಿದ್ದಂತೆ  ಮಿಕ್ಸಿಯೊಳಗೆ ಅಡಗಿ ಕುಳಿತ....! ಅಡುಗೆ ತಯಾರಿಸಲು ಮಿಕ್ಸಿ ಮುಟ್ಟಲು ಹೋದಾಕೆಗೆ ಶಾಕ್ ....! * ಮಿಕ್ಸಿಯೊಳಗೆ ಅಡಗಿದ್ದ  ಹಾವು ಕಂಡು ಬೆಚ್ಚಿ ಬಿದ್ದಿದ್ದರು

ಶಿವಮೊಗ್ಗ(ಜ. 17)   ಶಿವಮೊಗ್ಗ (Shivamogga) ತಾಲೂಕಿನ ಹೊಳೆಬೆನವಳ್ಳಿ ಗ್ರಾಮದ ಹಕ್ಕಿಪಿಕ್ಕಿ ಕ್ಯಾಂಪ್ ಮನೆಯೊಂದರ ಅಡುಗೆ ಮನೆಯನ್ನು ನಾಗರಾಜ(Cobra) ಹೊಕ್ಕಿದ್ದ..  ಅಡುಗೆ ಮನೆಯಲ್ಲಿಟ್ಟಿದ್ದ(Kitchen)  ಮಿಕ್ಸಿಯಲ್ಲಿ ಅಡಗಿ ಕುಳಿತುಕೊಂಡಿದ್ದ.

ಮನೆ ಹಿಂಬಾಗಿಲಿನ ಮೂಲಕ ಅಡುಗೆ ಮನೆಗೆ ಹಾವು ಪ್ರವೇಶಿಸಿತ್ತು.  ನಂತರ ಹಾವು ಮಿಕ್ಸಿಯೊಳಗೆ ಸೇರಿಕೊಂಡಿತ್ತು.ಇದನ್ನು ಗಮನಿಸಿದ ಮನೆಯವರು ಉರಗ ತಜ್ಞ ಸ್ನೇಕ್ ಕಿರಣ್ ಗೆ ಕರೆ ಮಾಡಿದ್ದರು. ಸ್ನೇಕ್ ಕಿರಣ್ ಸೂಚನೆಯಂತೆ ಮಿಕ್ಸಿಯನ್ನು ಚೀಲವೊಂದರಲ್ಲಿ ಹಾಕಿ ಕಟ್ಟಿದ್ದಾರೆ . ಮಿಕ್ಸಿ ಹಾಕಿದ್ದ ಚೀಲವನ್ನು ಹಿಡಿದುಕೊಂಡು ಬೈಕ್ ನಲ್ಲಿ ಶಿವಮೊಗ್ಗಕ್ಕೆ ಬಂದ ಕಿರಣ್ ಶಿವಮೊಗ್ಗ ನಗರದ ಹೊಳೆ ಬಸ್ ನಿಲ್ದಾಣದ ಬಳಿ ಅದನ್ನು ತಂದಿದ್ದಾರೆ.

ಅಲ್ಲಿಯೇ ಸ್ನೇಕ್ ಕಿರಣ್ ಮಿಕ್ಸಿಯಿಂದ ಹಾವನ್ನು ಹೊರ ತೆಗೆದು ರಕ್ಷಿಸಿದ್ದಾರೆ. ಕೊನೆಗೂ ಹಬ್ಬದ ಅಡುಗೆಯ ರುಚಿ ನೋಡಲು ಹೋಗಿದ್ದ ನಾಗರ ಮಿಕ್ಸಿಯಿಂದ ಹೊರ ಬಂದಿದ್ದಾನೆ. ಹಾವನ್ನು ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟು ಬರಲಾಗಿದೆ.

ತನಗೆ ಕಚ್ಚಿದ ಹಾವನ್ನೇ ಕಚ್ಚಿದ:    ಹಾವಿನ ದ್ವೇಷ ಹನ್ನೆರಡು ವರುಷ ಎನ್ನುವುದು ಹಳೆಯ ಮಾತು.  ಇಲ್ಲೊಬ್ಬ ತನಗೆ ಕಚ್ಚಿದ ಹಾವಿನ ಮೇಲೆ ದ್ವೇಷ ತೀರಿಸಿಕೊಂಡಿದ್ದಾನೆ.  ಬುಡಕಟ್ಟು ಜನಾಂಗಕ್ಕೆ ಸೇರಿದ  45 ವರ್ಷದ  ವ್ಯಕ್ತಿ ತನಗೆ ಕಚ್ಚಿದ ಹಾವಿಗೆ ವಾಪಸ್ ಕಚ್ಚಿದ್ದ ಪ್ರಕರಣ ವರದಿಯಾಗಿತ್ತು. 

ಒಡಿಶಾದ ಜಜ್‌ಪುರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಘಟನೆ  ನಡೆದಿದೆ.  ದನಗಡಿ ಬ್ಲಾಕ್ ವ್ಯಾಪ್ತಿಯ ಸಾಲಿಜಂಗಾ ಪಂಚಾಯತ್ ವ್ಯಾಪ್ತಿಯ ಗಾಂಭರಿಪತಿಯಾ ಗ್ರಾಮದ ಕಿಶೋರ್ ಬದ್ರಾ ಬುಧವಾರ ರಾತ್ರಿ ತನ್ನ ಗದ್ದೆಯಲ್ಲಿ ಕೆಲಸ ಮಾಡಿ ಮನೆಗೆ ಮರಳುತ್ತಿದ್ದ. ಈ ವೇಳೆ ಆತನ ಕಾಲಿಗೆ ಹಾವು ಕಚ್ಚಿದೆ. 

ಸೇಡು ತೀರಿಸಿಕೊಳ್ಳಲು  ಮುಂದಾದ ಕಿಶೋರ್  ಹಾವನ್ನೇ ಹಿಡಿದು ಕಚ್ಚಿದ್ದಾನೆ. ಮನೆಗೆ ಬರುತ್ತಿದ್ದಾಗ ಏನೋ ಒಂದು  ಪ್ರಾಣಿ ಕಾಲಿಗೆ ಕಚ್ಚಿದ ಹಾಗೆ ಆಯಿತು. ತಕ್ಷಣ ಕೈಯಲ್ಲಿದ್ದ ಟಾರ್ಚ್ ನಿಂದ ಬೆಳಕು ಬಿಟ್ಟಾಗ ಹಾವು ಎನ್ನುವುದು ಗೊತ್ತಾಯಿತು. ವಿಷಕಾರಿ ಹಾವು ಎಂದು ಕಂಡುಕೊಂಡೆ.  ಸಿಟ್ಟಿನಿಂದ ಅದನ್ನು ಕಚ್ಚಿ ಕಚ್ಚಿ ಸಾಯಿಸಿದೆ ಎಂದು  ಕಿಶೋರ್ ಹೇಳಿದ್ದ.

ಅಡಿಕೆ ಮರ ಏರಿದ ಹೆಬ್ಬಾವು. ವಿಡಿಯೋ ನೋಡಿ

ಸತ್ತ ಹಾವಿನೊಂದಿಗೆ ಊರಿಗೆ ಬಂದು ಪತ್ನಿಗೆ ವಿಚಾರ ತಿಳಿಸಿದೆ.  ಕೆಲವರು ಆತನಿಗೆ ಆಸ್ಪತ್ರೆಗೆ ತೆರಳಲು ಸಲಹೆ ನೀಡಿದರೂ ಕಿಶೋರ್ ಮಾತ್ರ ಸಾಂಪ್ರದಾಯಿಕ ಚಿಕಿತ್ಸೆಯನ್ನೇ ಪಡೆದುಕೊಂಡ. ಇಲ್ಲಿಯವರೆಗೆ ಯಾವುದೇ ಆರೋಗ್ಯ ಸಮಸ್ಯೆ ಆದ ದೂರು ದಾಖಲಾಗಿಲ್ಲ. ಕಿಶೋರ್ ಎಂದಿನಂತೆ ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದ. 

ವೈರಲ್ ಆದ  ವಿಡಿಯೋ:   ಬೈಕ್ ಹ್ಯಾಂಡಲ್ ನಲ್ಲಿ ಹಾವು:  ಇಲ್ಲೊಂದು ಕಡೆ ಮಹಿಳೆಯೊಬ್ಬಳು ಬೈಕ್ ಓಡಿಸುತ್ತಿದ್ದಳು. ಈ ವೇಳೆ ಬೈಕ್ ಹ್ಯಾಂಡಲ್‌ನಿಂದ ಹಾವು ಹೆಡೆ ಎತ್ತಿ ನಿಂತಿದೆ. ಮಹಿಳೆ ಇದನ್ನು ಕಂಡು ಬೆಚ್ಚಿ ಬಿದ್ದಿದ್ದಾಳೆ.  ಹೌದು ರಾತ್ರಿ ಹೊತ್ತು ಮಹಿಳೆ ಅದೆಲ್ಲಿಗೋ ಹೊರಟಿದ್ದಾರೆ. ಈ ವೇಳೆ ಇದ್ದಕ್ಕಿದ್ದಂತೆಯೇ ಬೈಕ್ ಹ್ಯಾಂಡಲ್‌ಗೆ ಹಾವು ಸುತ್ತಿರುವುದು ಕಂಡು ಜೋರಾಗಿ ಕಿರುಚಾಡಿ ಗಾಡಿ ನಿಲ್ಲಿಸಿದ್ದ ವಿಡಿಯೋ ವೈರಲ್ ಆಗಿತ್ತು.

 

 

PREV
Read more Articles on
click me!

Recommended Stories

ಸರ್ಕಾರಕ್ಕೆ ಲಕ್ಕುಂಡಿ ನಿಧಿ ಬೇಕು, ಇತಿಹಾಸ ಉತ್ಖನನ ಮಾಡೋದಕ್ಕೆ ಟೂಲ್ ಕಿಟ್ ಕೊಡಿಸುವ ಯೋಗ್ಯತೆ ಇಲ್ವಾ?
ಬೆಂಗಳೂರು ಇಸ್ಕಾನ್ ಟೆಂಪಲ್ 'ಸ್ಕೈವಾಕ್' ಬಳಿ ಅಗ್ನಿ ಅವಘಡ; ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ!