Mahamrityunjaya Pooja ಮೋದಿಗಾಗಿ ಯಾಗ, ಧರ್ಮಸ್ಥಳದಲ್ಲಿ ಸಿದ್ಧವಾಗಿದೆ ದೊಡ್ಡ ಜಾಗ

By Suvarna NewsFirst Published Jan 16, 2022, 10:53 PM IST
Highlights

* ಮೋದಿ ಹೆಸರಲ್ಲಿ ಮಹಾಮೃತ್ಯುಂಜಯ ಯಾಗ
* ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಧರ್ಮಸ್ಥಳದಲ್ಲಿ ನಡೆಯಲಿರುವ ಯಾಗ
* ಕರಾವಳಿ ವಿವಿಧೆಡೆಯ 200ಕ್ಕೂ ಅರ್ಚಕರು ಯಾಗದಲ್ಲಿ ಭಾಗಿ

ಬೆಳ್ತಂಗಡಿ, (ಜ.16): ಪ್ರಧಾನಿ ನರೇಂದ್ರ ಮೋದಿ(Narendra Modi) ಆರೋಗ್ಯ, ಆಯುಷ್ಯ ವೃದ್ದಿಗಾಗಿ ಧರ್ಮಸ್ಥಳದಲ್ಲಿ(Dharmasthala) ಮಹಾಮೃತ್ಯುಂಜಯ ಯಾಗ ನಡೆಯಲಿದೆ.

ನಾಳೆ(ಸೋಮವಾರ) ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಧರ್ಮಸ್ಥಳ ದೇಗುಲದ ಆವರಣದಲ್ಲಿ ಮಹಾಮೃತ್ಯುಂಜಯ ಯಾಗ (Mahamrityunjaya Homa) ನಡೆಯಲಿದೆ.

PM Modi Security Breach ಪ್ರಧಾನಿ ಮೋದಿಗಾಗಿ ಹುಬ್ಬಳ್ಳಿಯಲ್ಲಿ ಮೃತ್ಯುಂಜಯ ಹೋಮ

ಇತ್ತೀಚೆಗೆ ಪಂಜಾಬ್ ನಲ್ಲಿ ಪ್ರಧಾನಿ ಮೋದಿ ಪ್ರಯಾಣದ ವೇಳೆ ಭದ್ರತಾಲೋಪ ಎಸಗಲಾಗಿತ್ತು. ಹೀಗಾಗಿ ಪ್ರಧಾನಿ ಮೋದಿ‌ ಜೀವಕ್ಕೆ ಅಪಾಯ ಎದುರಾದ ಹಿನ್ನೆಲೆ ಧರ್ಮಸ್ಥಳದಲ್ಲಿ ಮಹಾಮೃತ್ಯುಂಜಯ ಯಾಗ ಮಾಡಲಿದ್ದಾರೆ.

ಕರಾವಳಿ ವಿವಿಧೆಡೆಯ 200ಕ್ಕೂ ಅರ್ಚಕರು ಯಾಗದಲ್ಲಿ ಭಾಗಿಯಾಗಲಿದ್ದು, ನಾಳೆ(ಸೋಮವಾರ) ಬೆ.11 ಗಂಟೆಯ ಹೊತ್ತಿಗೆ ಮಹಾಮೃತ್ಯುಂಜಯ ಯಾಗ ಪೂರ್ಣಾಹುತಿಯಾಗಲಿದೆ.

ಈಗಾಗಲೇ ಹರೀಶ್ ಪೂಂಜಾ ನೇತೃತ್ವದಲ್ಲಿ ಬೆಳ್ತಂಗಡಿಯ 25 ಕ್ಷೇತ್ರಗಳಲ್ಲಿ ಯಾಗ ಮಾಡಲಾಗಿದೆ. ಈ ಎಲ್ಲಾ ಯಾಗಗಳ ಪೂರ್ಣಾಹುತಿ ನೆಲೆಯಲ್ಲಿ  ಧರ್ಮಸ್ಥಳದಲ್ಲಿ ಮಹಾಮೃತ್ಯುಂಜಯ ಯಾಗ ನಡೆಯಲಿದೆ.

ಮೋದಿ ಹೆಸರಲ್ಲಿ ನಡೆಯುವ ಯಾಗಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯೂ ಬೆಂಬಲ ಸೂಚಿಸಿದ್ದು, ಈಶ್ವರಪ್ಪ, ಸಿ.ಸಿ.ಪಾಟೀಲ್ ಸೇರಿ ಹಲವು ಸಚಿವರು, ಶಾಸಕರು ಈ ಯಾಗದಲ್ಲಿ ಭಾಗಿಯಾಗಲಿದ್ದಾರೆ.

ಹುಬ್ಬಳ್ಳಿಯಲ್ಲೂ ನಡೆದಿತ್ತು ಯಾಗ
ಪಂಜಾಬ್ ಭದ್ರತಾ ಲೋಪ (Security Breach) ಘಟನೆ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ (narendra Modi) ಅವರಿಗೆ ದೀರ್ಘಾಯುಷ್ಯ ಕೋರಿ ಬಿಜೆಪಿ ಕಾರ್ಯಕರ್ತರು ಪ್ರಾರ್ಥನೆ ಸಲ್ಲಿಸಿದ್ದರು.

ಹುಬ್ಬಳ್ಳಿ-ಧಾರವಾಡ(Hubballi-Dharwad) ಕೇಂದ್ರ ಮಹಿಳಾ ಮೋರ್ಚಾ ಕಾರ್ಯಕರ್ತರು(BJP Workers) ಜಯನಗರದ ಈಶ್ವರ ದೇವಸ್ಥಾನದಲ್ಲಿ ಮಹಾ ಮೃತ್ಯುಂಜಯ ಹೋಮ ಮಾಡಿಸಿದ್ದರು.

ಹೋಮ-ಹವನದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಸದಸ್ಯರು ಭಾಗಿಯಾಗಿದ್ದು, ಪ್ರಧಾನಿ ಮೋದಿ ಅವರಿಗೆ ಯಾವುದೇ ತೊಂದರೆಗಳು ಆಗದಿರಲಿ ಎಂದು ಸಾಮೂಹಿಕ ಜಪ ಮಾಡಿ ಮೋದಿ ದೀರ್ಘಾಯುಷಿಯಾಗಿ ಬಾಳಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದರು.

ಮೋದಿ ಭದ್ರತಾ ಲೋಪ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ
 ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂಕೋರ್ಟ್​ನಲ್ಲಿ ಮಹತ್ವದ ವಿಚಾರಣೆ ನಡೆಯಿತು. ವಿಚಾರಣೆ ನಡೆಸಿದ ಕೋರ್ಟ್​ ಸೋಮವಾರ ಸಂಪೂರ್ಣ ಮಾಹಿತಿ ಆಧರಿಸಿ ಆದೇಶ ನೀಡುವುದಾಗಿ ತಿಳಿಸಿ ತೀರ್ಪನ್ನ ಕಾಯ್ದಿರಿಸಿದೆ.

ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ಹೈಕೋರ್ಟ್ ​ರಿಜಿಸ್ಟರ್ ಜನರಲ್ ನೇಮಿಸಿ ಆದೇಶ ಹೊರಡಿಸಿದೆ. ಸದ್ಯಕ್ಕೆ ಯಾವುದೇ ಕ್ರಮ ಬೇಡ ​ರಿಜಿಸ್ಟರ್ ಜನರಲ್​ ಆಫ್​ ಪಂಜಾಬ್​ ಮತ್ತು ಹರಿಯಾಣ ಹೈಕೋರ್ಟ್​ ನೇಮಕ ಮಾಡಿ ಆದೇಶ ಹೊರಡಿಸಿದೆ.

ಇವರಿಗೆ ಮಾಹಿತಿ ನೀಡಲು ಇಬ್ಬರು ನೋಡಲ್ ಅಧಿಕಾರಿಗಳ ನೇಮಕ ಮಾಡಿದೆ. ಚಂಡೀಗಢ ಪೊಲೀಸ್ ಡಿಜಿ, ಎನ್​​ಐಎ ಅಧಿಕಾರಿಗಳ ನೇಮಕ ಮಾಡಿದೆ. ಮಾತ್ರವಲ್ಲ ಸದ್ಯಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಪಂಜಾಬ್ ಸರ್ಕಾರ, ಕೇಂದ್ರ ಇಲಾಖೆಗಳಿಗೆ ಸುಪ್ರೀಂ ಸೂಚನೆ ನೀಡಿದೆ. ಸೋಮವಾರ ಸಂಪೂರ್ಣ ಮಾಹಿತಿ ಆಧರಿಸಿ ಮುಂದಿನ ಆದೇಶ ನೀಡೋದಾಗಿ ಕೋರ್ಟ್​ ಹೇಳಿದೆ.

ಟ್ರಾವೆಲ್ ಮಾಹಿತಿ ದಾಖಲಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋದಿ ಟ್ರಾವೆಲ್​​ನ ಎಲ್ಲಾ ದಾಖಲೆಗಳನ್ನ ಸಂಗ್ರಹಿಸಿ ಸುರಕ್ಷಿತವಾಗಿಡಿ. ಅದಕ್ಕೆ ಬೇಕಾಗುವ ಸಹಕಾರ ಹಾಗೂ ಹೆಚ್ಚಿನ ಮಾಹಿತಿಗಳನ್ನ ಪಂಜಾಬ್ ಪೊಲೀಸರು ಮತ್ತು ಎಸ್​ಪಿಜಿ ಘಟಕಗಳಿಂದ ಪಡೆದುಕೊಳ್ಳಿ ಎಂದು ಸುಪ್ರೀಂಕೋರ್ಟ್ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್​ ರಿಜಿಸ್ಟ್ರಾರ್ ಜನರಲ್​ಗೆ ತಿಳಿಸಿದೆ.

click me!