ಸಹಕಾರ ಸಂಘಗಳು ರೈತರಿಗೆ, ವ್ಯಾಪಾರಸ್ಥರಿಗೆ ಸಾಕಷ್ಟು ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸುತ್ತಿವೆ ಎಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿ ತಿಳಿಸಿದರು.
ಗುಬ್ಬಿ : ಸಹಕಾರ ಸಂಘಗಳು ರೈತರಿಗೆ, ವ್ಯಾಪಾರಸ್ಥರಿಗೆ ಸಾಕಷ್ಟು ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸುತ್ತಿವೆ ಎಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿ ತಿಳಿಸಿದರು.
ಪಟ್ಟಣದ ಬಿಎಚ್ ರೋಡ್‌ನಲ್ಲಿ ನೂತನವಾಗಿ ಆರಂಭವಾದ ಬೀರೇಶ್ವರ ಕೋ ಆಪರೇಟ್ ಸೊಸೈಟಿಯ 201 ನೇ ಶಾಖೆಯನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು,ಅಂತಹ ಪಟ್ಟಣ ಪ್ರದೇಶಗಳಲ್ಲಿ ಇಂತಹ ಸಹಕಾರ ಗಳು ಹೆಚ್ಚು ಹೆಚ್ಚು ಬಂದಾಗ ಗ್ರಾಹಕರ ಸಂಖ್ಯೆ ಮತ್ತು ಅದನ್ನು ಬಳಸಿಕೊಂಡು ಅಭಿವೃದ್ಧಿಯಾಗುವವರ ಸಂಖ್ಯೆಯು ಹೆಚ್ಚುತ್ತದೆ. ರೈತರಿಗೆ ವ್ಯಾಪಾರಸ್ಥರಿಗೆ ಹಾಗೂ ಸಾಮಾನ್ಯ ಜನರಿಗೂ ಕೂಡ ಈ ಬ್ಯಾಂಕಿನ ಮೂಲಕ ಹೆಚ್ಚಿನ ಸಹಕಾರ ಸಿಗಲಿ ಎಂದು ತಿಳಿಸಿದರು.
undefined
ಪಟ್ಟಣ ಪಂಚಾಯತಿ ಸದಸ್ಯ ಶಿವಕುಮಾರ್ ಮಾತನಾಡಿ, ಕರ್ನಾಟಕ, ಮಹಾರಾಷ್ಟ್ರ, ಗೋವಾದಂತಹ ಹಲವು ಭಾಗಗಳಲ್ಲಿ ಇನ್ನೂರಕ್ಕೂ ಹೆಚ್ಚು ಸೊಸೈಟಿಗಳನ್ನು ಮಾಡಿ ಅಭಿವೃದ್ಧಿಯಾಗಿರುವ ಬೀರಲಿಂಗೇಶ್ವರ ಕೋಆಪರೇಟ್ ಸೊಸೈಟಿಯು ನಮ್ಮ ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಸಹಕಾರ ನೀಡುವಂತಾಗಲಿ ಎಂದು ತಿಳಿಸಿದರು.
ಮುಖ್ಯ ಕಚೇರಿಯ ವ್ಯವಸ್ಥಾಪಕ ಸತೀಶ್ ಲಟ್ಟಿ ಮಾತನಾಡಿ, ಚಿಕ್ಕೋಡಿ ತಾಲೂಕಿನ ಎಕ್ಸಾಂಬ ಗ್ರಾಮದಲ್ಲಿ ಬೀರೇಶ್ವರ ಎಂಬ ಸಂಸ್ಥೆಯ ಅಡಿಯಲ್ಲಿ ಚಿಕ್ಕೋಡಿ ಸಂಸದ ಅಣ್ಣ ಸಾಹೇಬ ಶಂಕರ ಜೊಲ್ಲೆ, ಶಾಸಕಿ ಶಶಿಕಲಾ ಅಣ್ಣ ಸಾಹೇಬ ಜೊಲ್ಲೆ ಅವರ ಮಾರ್ಗದರ್ಶನದಲ್ಲಿ ರೈತರಿಗೆ, ವ್ಯಾಪಾರಸ್ಥರಿಗೆ ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗಬೇಕು ಎಂಬ ನಿಟ್ಟಿನಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವ ಸಂಸ್ಥೆಯು ಗುಬ್ಬಿ ಪಟ್ಟಣದಲ್ಲಿಯೂ ಸಹ 201 ನೇ ಕೋಪರೇಟಿವ್ ಸೊಸೈಟಿ ಮಾಡುತ್ತಿದ್ದು ಇದರ ಮೂಲಕ ಇಲ್ಲಿನ ಜನರಿಗೆ ಅನುಕೂಲವನ್ನು ಕಲ್ಪಿಸಲು ಮುಂದಾಗಿದೆ ಎಂದು ತಿಳಿಸಿದರು.
ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ಶೀತಲ್ ಕುಮಾರ್ ವೈಗುಡೆ, ಶಾಖಾ ವ್ಯವಸ್ಥಾಪಕರು, ಸಿಬ್ಬಂದಿ ವರ್ಗದವರು ಇನ್ನಿತರರು ಹಾಜರಿದ್ದರು.