CNG ಬೆಲೆ ದುಪ್ಪಟ್ಟು ಹೆಚ್ಚಳ; ಅಭಾವದ ವಿರುದ್ಧ ಪ್ರತಿಭಟನೆ

By Kannadaprabha NewsFirst Published Aug 13, 2022, 12:01 PM IST
Highlights
  • CNG ಬೆಲೆ ದುಪ್ಪಟ್ಟು ಹೆಚ್ಚಳ; ಅಭಾವದ ವಿರುದ್ಧ ಪ್ರತಿಭಟನೆ

  • ಸಮರ್ಪಕವಾಗಿ ಸಿಎನ್‌ಜಿ ಪೂರೈಸದ, ಹೆಚ್ಚು ಬೆಲೆ ವಿಧಿಸಿದ ಕಂಪನಿಗಳ ವಿರುದ್ಧ ಕ್ರಮಕ್ಕೆ ರೈತರ  ಒತ್ತಾಯ

ದಾವಣಗೆರೆ (ಆ.13) : ಸಿಎನ್‌ಜಿ ಗ್ಯಾಸ್‌ ಬೆಲೆ ಒಂದೇ ವರ್ಷದಲ್ಲಿ ದುಪ್ಪಟ್ಟು ಮಾಡಿರುವುದು ಖಂಡಿಸಿ ಸಿಎನ್‌ಜಿ ಚಾಲಿತ ಆಟೋ ಮತ್ತು ಟ್ಯಾಕ್ಸಿ ಚಾಲಕರು ಕರ್ನಾಟಕ ಸಿಎನ್‌ಜಿ ಬಳಕೆದಾದರರ ಸಂಘದ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ದಿಢೀರ್‌ ಪ್ರತಿಭಟನೆ(Protest) ನಡೆಸಿದರು.ನಗರದ ಪಿಬಿ ರಸ್ತೆಯ ಅಗ್ನಿಶಾಮಕ ದಳದ ಕಚೇರಿ ಬಳಿಯಿಂದ ಪ್ರತಿಭಟನೆ ಆರಂಭಿಸಿಸಿ ಸಿಎನ್‌ಜಿ ವಿತರಣೆ ಹೊತ್ತ ಇಲ್ಲಿನ ಗ್ಯಾಸ್‌ ಕಂಪನಿಗೆ ಮುತ್ತಿಗೆ ಹಾಕಿ ಕಂಪನಿ ವಿರುದ್ಧ ಚಾಲಕರು ಘೋಷಣೆಗಳ ಕೂಗಿ ಆಕ್ರೋಶ ಹೊರ ಹಾಕಿದರು. ಇದೇ ವೇಳೆ ಮಾತನಾಡಿದ ಚಾಲಕರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ವಿತರಣೆ ಜವಾಬ್ದಾರಿ ಹೊತ್ತಿರುವ ಗ್ಯಾಸ್‌ ಕಂಪನಿಯವರಿಗೆ, ಇಲ್ಲಿನ ಪೆಟ್ರೋಲ್‌ ಬಂಕ್‌ನವರಿಗೆ ಸಾಕಷ್ಟುಸಲ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದು, ಅವುಗಳ ಪರಿಹರಿಸುವಂತೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.

Gobar-Dhan: ಇಂದೋರ್‌ನಲ್ಲಿ ಏಷ್ಯಾದ ಅತಿದೊಡ್ಡ ಜೈವಿಕ- ಸಿಎನ್‌ಜಿ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ!

ಒಂದೇ ವರ್ಷದ ಅವಧಿಯಲ್ಲಿ ಸಿಎನ್‌ಜಿ(CNG) ಬೆಲೆಯನ್ನು ದುಪ್ಪಟ್ಟು ಮಾಡಲಾಗಿದೆ. ಸಿಎನ್‌ಜಿ ಸರಬರಾದು ಗುತ್ತಿಗೆ ಪಡೆದ ಕಂಪನಿಗಳು ಸರಿಯಾಗಿ ಸಿಎನ್‌ಜಿ ಗ್ಯಾಸ್‌ ಸಮರ್ಪಕವಾಗಿ ಪೂರೈಸುತ್ತಿಲ್ಲ. ಸಿಎನ್‌ಜಿ ಕಿಟ್‌ ಬೆಲೆಯನ್ನು ಖಾಸಗಿ ಕಂಪನಿಗಳು ಹೆಚ್ಚಿನ ಬೆಲೆಗೆ ಮಾರುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೊಸ ಸಿಎನ್‌ಜಿ ವಾಹನಗಳ ಬೆಲೆ ಪೆಟ್ರೋಲ್‌ ವಾಹನಕ್ಕಿಂತ 2 ಲಕ್ಷ ಹೆಚ್ಚು ವಿಧಿಸಲಾಗುತ್ತಿದೆ. ಇಂತಹ ಅನೇಕ ಸಮಸ್ಯೆಗಳನ್ನು ನಾವು ಎದುರಿಸುತ್ತಿದ್ದರೂ ಸರ್ಕಾರವಾಗಲೀ, ಕಂಪನಿಯಾಗಲೀ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಅವರು ದೂರಿದರು.

ರಾಜ್ಯದ ಮೊದಲ ಸಿಎನ್‌ಜಿ ಖಾಸಗಿ ಬಸ್ಸು ಸಂಚಾರ : ಎಲ್ಲಿಂದ - ಎಲ್ಲಿಗೆ..?

ರಿಜಿಸ್ಪ್ರೇಷನ್‌ ವಿಧಾನ ಸರಳಪಡಿಸಿ:

ನಗರ, ತಾಲೂಕು, ಸುತ್ತಮುತ್ತಲಿನ ಊರುಗಳ ಸಿಎನ್‌ಜಿ ಚಾಲಿತ ಆಟೋ, ಟ್ಯಾಕ್ಸಿ ಚಾಲಕರಿಗೆ ಪ್ರತಿ ಸಲ ಸಮಸ್ಯೆಯಾಗುತ್ತಿದೆ. ಒಂದೇ ವರ್ಷದಲ್ಲಿ ಸಿಎನ್‌ಜಿ ಬೆಲೆ ಎರಡರಷ್ಟಾಗಿದೆ. ಸಿಎನ್‌ಜಿ ಗ್ಯಾಸ್‌ ಪೂರೈಸುವ ಗುತ್ತಿಗೆಪಡೆದ ಖಾಸಗಿ ಕಂಪನಿಗಳು ಸರಿಯಾಗಿ ಸಿಎನ್‌ಜಿ ಗ್ಯಾಸ್‌ ಪೂರೈಸದಿರುವುದು ದುಂಡಾವರ್ತನೆಯಾಗಿದೆ ಎಂದು ಆಕ್ರೋಶ ಹೊರ ಹಾಕಿದರು. ಬಾಣಲೆಯಿಂದ ಬೆಂಕಿ ಬಿದ್ದಂತೆ ನಮ್ಮ ಬಾಳು ಆಗಿದೆ. ಇನ್ನಾದರೂ ಸರ್ಕಾರಗಳು ಹೊಸ ಸಿಎನ್‌ಜಿ ವಾಹನಕ್ಕೆ, ಸಿಎನ್‌ಜಿ ಗ್ಯಾಸ್‌ ಬೆಲೆ ಮೇಲೆ, ಸಿಎನ್‌ಜಿ ಕಿಟ್‌ ಮೇಲೆ ಸಬ್ಸಿಡಿ ನೀಡಬೇಕು. ರೋಡ್‌ ಟ್ಯಾಕ್ಸ್‌ ಕಡಿಮೆ ಮಾಡಬೇಕು. ಸಿಎನ್‌ಜಿ ಕಿಟ್‌ ರಿಜಿಸ್ಪ್ರೇಷನ್‌ ವಿಧಾನ ಸರಳಪಡಿಸಬೇಕು. ಸಮರ್ಪಕವಾಗಿ ಸಿಎನ್‌ಜಿ ಪೂರೈಕೆಯಾಗುವಂತೆ ನೋಡಿ ಕೊಳ್ಳಬೇಕು. ಸಮರ್ಪಕವಾಗಿ ಸಿಎನ್‌ಜಿ ಪೂರೈಸದ ಕಂಪನಿಗಳ ವಜಾ ಮಾಡಬೇಕು. ಈ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಆಟೋ ಚಾಲಕರ ಸಂಘದ ಅಧ್ಯಕ್ಷ ಮಲ್ಲೇಶ್‌, ಉಪಾಧ್ಯಕ್ಷ ನಾಗೇಶ, ಮನೋಹರ, ತಿಪ್ಪೇಸ್ವಾಮಿ, ಶಿವಮೂರ್ತೆಯ್ಯ, ಶಫೀ, ರಾಜೇಶ ಇತರರು ಪ್ರತಿಭಟನೆಯಲ್ಲಿದ್ದರು.

click me!