ಮಡಿಕೇರಿ (ಅ.30) : ಸಂವಿಧಾನದ ವಿಧಿಯಡಿ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆಗಾಗಿ 2ನೇ ರಾಜ್ಯ ಮರುಸಂಘಟನೆ ಆಯೋಗ ರಚನೆ ಮಾಡಬೇಕು ಅಥವಾ ಕೂಗ್‌ರ್‍ನ 1956ರ ಹಿಂದಿನ ಸ್ಥಿತಿಯನ್ನು ಮರುಸ್ಥಾಪಿಸಿ ‘ಸಿ’ ರಾಜ್ಯದಿಂದ ಸಾಂವಿಧಾನಿಕವಾಗಿ ರೂಪಾಂತರಗೊಂಡ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಒತ್ತಾಯಿಸಿದೆ.
ಕೊಡಗು: ಭೂಗರ್ಭದಲ್ಲಿ ಹುದುಗಿದ್ದ ಶಿವ ದೇವಸ್ಥಾನ ಪತ್ತೆ
undefined
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರ ನೇತೃತ್ವದಲ್ಲಿ ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸಿದ ಪ್ರಮುಖರು, ಈ ಎರಡು ಪ್ರಮುಖ ಬೇಡಿಕೆಗಳೊಂದಿಗೆ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಿದರು. 2ನೇ ರಾಜ್ಯ ಮರುಸಂಘಟನೆ ಆಯೋಗ ರಚನೆ ಅಥವಾ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಲು ಒತ್ತಾಯಿಸಿ ನ.1 ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಎನ್‌ಸಿ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಿ ಸರ್ಕಾರದ ಗಮನ ಸೆಳೆಯಲಾಗುವುದೆಂದು ನಾಚಪ್ಪ ತಿಳಿಸಿದರು.
‘ಸಿ’ ಸ್ಟೇಟ್ಸ್ ಆಕ್ಟ್ 1952ರ ಪ್ರಕಾರ ಕೊಡವ ತಾಯ್ನಾಡು ಕೂಗ್‌ರ್ ಭಾರತೀಯ ಒಕ್ಕೂಟದ ಭಾಗವಾಗಿ ಸ್ವಾವಲಂಬಿ ‘ಸಿ’ ರಾಜ್ಯವಾಯಿತು. ಭಾರತದ ಉಕ್ಕಿನ ಮನುಷ್ಯ, ಆಗಿನ ಉಪಪ್ರಧಾನಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಸಂಸತ್ತಿನಲ್ಲಿ ‘ಕೂಗ್‌ರ್’ ನ್ನು ಭಾರತದ ಏಕೈಕ ರಾಮರಾಜ್ಯ ಎಂದು ಹೆಮ್ಮೆಯಿಂದ ಹೇಳಿದ್ದರು. ಅಪರಾಧವಿಲ್ಲದ ಭ್ರಷ್ಟಾಚಾರ ಮುಕ್ತ, ಶಾಂತಿಯುತ, ಸಂತೃಪ್ತ ರಾಜ್ಯ ಕೂಗ್‌ರ್ ಆಗಿತ್ತು. 1952 ರಿಂದ 1956ರ ವರೆಗೆ ಒಂದು ಸುವರ್ಣ ಯುಗದ ರಾಜ್ಯವಾಗಿ ಅಭಿವೃದ್ಧಿ ಹೊಂದುವ ಹಾದಿಯಲ್ಲಿತ್ತು. ಆದರೆ ಅನ್ಯಾಯದ ರಾಜ್ಯ ಮರು ಸಂಘಟನೆ ಕಾಯಿದೆ 1956ರ ಅಡಿಯಲ್ಲಿ ವಿಶಾಲ ಮೈಸೂರಿನೊಂದಿಗೆ ಕೂಗ್‌ರ್ ವಿಲೀನಕ್ಕೆ ಕಾರಣವಾಯಿತು. ನಂತರ ನಮ್ಮೆಲ್ಲ ಭರವಸೆಗಳು ಹಾಗೂ ಆಕಾಂಕ್ಷೆಗಳನ್ನು ಛಿದ್ರಗೊಳಿಸಲಾಯಿತು ಎಂದು ನಾಚಪ್ಪ ಆರೋಪಿಸಿದರು. ಮತ್ತೆ ಗತವೈಭವವನ್ನು ಹೊಂದಲು ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆಯ ಅಗತ್ಯವಿದ್ದು, ಆ ನಿಟ್ಟಿನಲ್ಲಿ ಶಾಂತಿಯುತ ಹೋರಾಟ ನಡೆಯಲಿದೆ ಎಂದರು.
ಸಾವಿನಲ್ಲೂ ಸಾರ್ಥಕತೆ ಮೆರೆದ ಕೊಡಗಿನ ಶಿಕ್ಷಕಿ, 8 ಜನರ ಜೀವ ಉಳಿಸಿದ ಮಹಾತಾಯಿ
ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು. ಸಿಎನ್‌ಸಿ ಪ್ರಮುಖರಾದ ಕಲಿಯಂಡ ಮೀನಾಕ್ಷಿ ಕಾರ್ಯಪ್ಪ, ಪುಲ್ಲೇರ ಕಾಳಪ್ಪ, ಪುಲ್ಲೇರ ಸ್ವಾತಿ ಕಾಳಪ್ಪ, ಪಟ್ಟಮಾಡ ಲಲಿತಾ ಗಣಪತಿ, ಕೂಪದೀರ ಪುಷ್ಪಾ ಮುತ್ತಪ್ಪ, ಚೋಳಪಂಡ ಜ್ಯೋತಿ ನಾಣಯ್ಯ, ಅಜ್ಜಿನಿಕಂಡ ಇನಿತಾ ಮಾಚಯ್ಯ, ಕಲಿಯಂಡ ಪ್ರಕಾಶ್, ಅಜ್ಜಿಕುಟ್ಟೀರ ಲೋಕೇಶ್, ಅರೆಯಡ ಗಿರೀಶ್, ಅಲ್ಮಂಡ ಜೈ, ಬೇಪಡಿಯಂಡ ದಿನು, ಪಟ್ಟಮಾಡ ಕುಶ, ಕಿರಿಯಮಾಡ ಶೆರಿನ್, ಮಂದÜಪಂಡ ಮನೋಜ್, ಕಾಟುಮಣಿಯಂಡ ಉಮೇಶ್, ಅಪ್ಪಚ್ಚಿರ ರಮ್ಮಿ ನಾಣಯ್ಯ, ನಂದಿನೆರವಂಡ ವಿಜು, ಕೂಪದೀರ ಸಾಬು, ನಂದಿನೆರವಂಡ ಅಪ್ಪಯ್ಯ, ನಂದಿನೆರವಂಡ ಅಯ್ಯಣ್ಣ, ಮಣವಟ್ಟಿರ ಚಿಣ್ಣಪ್ಪ, ಪುಟ್ಟಿಚಂಡ ದೇವಯ್ಯ, ಅಜ್ಜಿನಿಕಂಡ ಸನ್ನಿ ಮಾಚಯ್ಯ, ಐಲಪಂಡ ಮಿಟ್ಟು, ಚೋಳಪಂಡ ಜ್ಯೋತಿ ನಾಣಯ್ಯ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.