ಸರ್ಕಾರ ಬರಗಾಲವನ್ನು ಸಮರ್ಥವಾಗಿ ಎದುರಿಸಲಿದೆ: ಸಿಎಂ ಸಿದ್ದರಾಮಯ್ಯ

By Girish Goudar  |  First Published Oct 6, 2023, 8:10 PM IST

ರಾಜ್ಯ ಸರ್ಕಾರ, ಕೇಂದ್ರ ವಿಪತ್ತು ನಿರ್ವಹಣಾ ನಿಧಿ (ಎನ್.ಡಿ.ಆರ್.ಎಫ್)ಅಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ರೂ.4860 ಕೋಟಿ ಪರಿಹಾರ ಕೇಳಿದ್ದೇವೆ. ಸದ್ಯ ಕೇಂದ್ರ ಬರ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಿದ್ದು. 11 ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಿ, ಅವಲೋಕಿಸಿ ವರದಿ ನೀಡಲಿದೆ. ಸರ್ಕಾರ ಬರಗಾಲವನ್ನು ಸಮರ್ಥವಾಗಿ ಎದುರಿಸಲಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ


ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಅ.06): ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯಗಳಲ್ಲಿ ಪದವಿ ವಿದ್ಯಾರ್ಥಿಗಳನ್ನು ತಯಾರು ಮಾಡುವುದರ ಜೊತೆಗೆ, ಸಂಶೋಧನೆ ಹೆಚ್ಚಿನ ಒತ್ತು ನೀಡಬೇಕು. ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಳ್ಳುವ, ಬರ ಸಹಿಷ್ಣುತೆ ಹಾಗೂ ರೋಗ ನಿರೋಧಕ ಶಕ್ತಿವುಳ್ಳ ತಳಿಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

Tap to resize

Latest Videos

undefined

ಇಂದು(ಶುಕ್ರವಾರ) ಜಿಲ್ಲೆಯ ಹಿರಿಯೂರು ತಾಲ್ಲೂಕು ಬಬ್ಬೂರು ಫಾರಂ ಆವರಣದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇವರ ವತಿಯಿಂದ ಆಯೋಜಿಸಲಾದ ಬಬ್ಬರೂ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾರಂಭ ಹಾಗೂ ಸಿರಿಧಾನ್ಯ ಮೇಳ ಮತ್ತು ತೋಟಗಾರಿಕೆ ಬೆಳೆಗಳ ವಿಚಾರ ಸಂಕಿರಣ ಉದ್ಘಾಟಸಿ ಅವರು ಮಾತನಾಡಿದರು. 

ಬಿಜೆಪಿ-ಜೆಡಿಎಸ್ ಪಕ್ಷಗಳದ್ದು ಅಪವಿತ್ರ ಮೈತ್ರಿ: ಸಿಎಂ ಸಿದ್ದರಾಮಯ್ಯ ಲೇವಡಿ

2016 ರಲ್ಲಿ ಕೃಷಿ ಸಂಶೋಧನಾ ಕೇಂದ್ರ ಶತಮಾನೋತ್ಸವ ಆಚರಸಬೇಕಿತ್ತು. ಈಗ ಸಂಶೋಧನಾ ಕೇಂದ್ರಕ್ಕೆ 107 ವರ್ಷ ತುಂಬಿದೆ. ಕಾರಣಾಂತರಗಳಿಂದ ಈಗ ಆಚರಿಸಲಾಗುತ್ತದೆ. ರೈತರ ಪರವಾಗಿ ಸಂಶೋಧನಾ ಕೇಂದ್ರ  ಹೆಚ್ಚು ಬೆಳೆಯಲಿ. ದೇಶದ ಅಭಿವೃದ್ಧಿ ಅವಲೋಕಿಸಲು ಆ ದೇಶದಲ್ಲಿನ ವಿಶ್ವ ವಿದ್ಯಾಲಯ ಹಾಗೂ ಸಂಶೋಧನ ಕೇಂದ್ರಗಳು ಅಳೆತೆಗೋಲುಗಳಾಗಿವೆ. ಇಲ್ಲಿ ಸಂಶೋಧನೆಗಳು ಫಲಪ್ರದವಾದರೆ ದೇಶ ಅಭಿವೃದ್ಧಿ ಆಗುತ್ತದೆ ಎಂದರು. ಬರಗಾಲ, ಅತಿವೃಷ್ಠಿ, ಬೆಳೆಗೆ ತಕ್ಕ ಬೆಲೆ ದೊರಕದೆ, ಹವಾಮಾನ ಬದಲಾವಣೆಗೆ ಹೊಸ ತಳಿ ಸಿಗದೆ, ಬೆಳೆಗಳನ್ನು ದಾಸ್ತಾನು ಮಾಡಲು ಗೋದಾಮುಗಳು ಇಲ್ಲದೆ, ಬೆಳೆಗಳನ್ನು ಸಂಸ್ಕರಣೆ ಮಾಡದೇ, ಮೌಲ್ಯವರ್ಧಿತ ಉತ್ಪನ್ನ ತಯಾರಿಸದೇ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಇವುಗಳಿಗೆ ಉತ್ತರವನ್ನು ಕೃಷಿ ಹಾಗೂ ತೋಟಗಾರಿಕೆ ಸಂಶೋಧನಾ ಕೇಂದ್ರಗಳು ಹುಡುಕಬೇಕು. ಇಲ್ಲಿನ ಸಂಶೋಧನೆಗಳು ರೈತರ ಭೂಮಿಯಲ್ಲಿ ಫಲಕಾಣಬೇಕು. ವಿಸ್ತರಣಾ ಚಟುವಟಿಕೆಗಳು ಹೆಚ್ಚಾಗಬೇಕು ಎಂದು ಸಲಹೆ ನೀಡಿದರು.

ಚಿತ್ರದುರ್ಗ ಮೊದಲೇ ಬರ ಪೀಡಿತ ಜಿಲ್ಲೆ, ಬರಗಾಲ ಬಂದರೆ ಜಿಲ್ಲೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಬಬ್ಬೂರು ಕೇಂದ್ರದಲ್ಲಿ ಸಂಶೋಧನೆಗಳು ಹೆಚ್ಚು ಆಗಬೇಕು. ಹೊಸ ತಳಿಗಳನ್ನು ಅಭಿವೃದ್ಧಿ ಪಡಿಸಬೇಕು. ಜಗತ್ತೇ ಹವಾಮಾನ ಬದಲಾವಣೆಗೆ ತುತ್ತಾಗಿದೆ. ಇಂತಹ ಸಂದರ್ಭದಲ್ಲಿ ಹೆಚ್ಚು ನಿರೋಧಕ ಹಾಗೂ ಬರ ಸಹಿಷ್ಣುತೆ  ಶಕ್ತಿ ಇರುವ ಹಾಗೂ ಕಡಿಮೆ ನೀರಿನಲ್ಲಿ ಬೆಳೆಯುವ ತಳಿಗಳನ್ನು ಅಭಿವೃದ್ಧಿ ಪಡಿಸಬೇಕು‌. ರೈತರ ಸಂಕಷ್ಟ ಸ್ಪಂದನೆ ಮಾಡಬೇಕು. ಸಂಶೋಧನೆಗೆ ಸರ್ಕಾರ ಎಲ್ಲಾ ರೀತಿಯ ಅನುದಾನ ಹಾಗೂ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ವಿವಿ ಸಾಗರಕ್ಕೆ 6 ಟಿಎಂಸಿ ನೀರು

ಮೈಸೂರು ಅರಸರು ಹಾಗೂ ಸರ್.ಎಂ.ವಿಶ್ವೇಶ್ವರಯ್ಯನವರ ದೂರ ದೃಷ್ಟಿಯ ಫಲವಾಗಿ ವಾಣಿ ವಿಲಾಸ ಸಾಗರ ಅಣೆಕಟ್ಟು ನಿರ್ಮಿಸಲಾಯಿತು. 12 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿತ್ತು. ಸದ್ಯ ನೀರಾವರಿ ಅವಲಂಬಿತ ಪ್ರದೇಶ 40 ಸಾವಿರ ಎಕರೆಗೆ ವಿಸ್ತರಿಸಿದೆ. ಭದ್ರಾ ಮೇಲ್ದಂಡೆ ಹಾಗೂ ಎತ್ತಿನಹೊಳೆ ಯೋಜನೆಯಿಂದ 6 ಟಿ.ಎಂ.ಸಿ ನೀರನ್ನು ವಾಣಿ ವಿಲಾಸ ಸಾಗರಕ್ಕೆ ನೀಡಲು ರೈತರು ಮನವಿ ಸಲ್ಲಿಸಿದ್ದಾರೆ. ಈ ಕುರಿತು ಗಂಭೀರ ಚಿಂತನೆ ಮಾಡಿ, ಈ ಬಗ್ಗೆ ಯೋಜನೆ ರೂಪಿಸಲು ನೀರಾವರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಹಿರಿಯೂರು ಸಕ್ಕರೆ ಕಾರ್ಖಾನೆ ನಿರ್ವಹಣೆ ಖಾಸಗಿ ಅವರಿಗೆ ವಹಿಸಲು ಚಿಂತನೆ ಮಾಡಲಾಗುವುದು. ಬಬ್ಬೂರು ಸಂಶೋಧನಾ ಕೇಂದ್ರವಾಗಿ ಮುಂದುವರಿಯಲಿ ಎಂದು ಮುಖ್ಯಮಂತ್ರಿಗಳು ಹೇಳಿದರು.

ಶಾಮನೂರು ಹೇಳಿಕೆಯಿಂದ ಸರ್ಕಾರಕ್ಕೆ ಡ್ಯಾಮೇಜ್ ಇಲ್ಲ: ಸಚಿವ ಡಿ.ಸುಧಾಕರ್

ಬರ ಸಮರ್ಥ ನಿರ್ವಹಣೆ

ರಾಜ್ಯ ಭೀಕರ ಬರಗಾಲ ತುತ್ತಾಗಿದೆ. ರಾಜ್ಯದ 236 ತಾಲ್ಲೂಕುಗಳ ಪೈಕಿ 195 ತಾಲ್ಲೂಕು ಬರಕ್ಕೆ ತುತ್ತಾಗುವೆ. ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರ ಎಂದು ಘೋಷಿಸಲಾಗಿದೆ. ಸೋಮವಾರ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಬರ ತಾಲ್ಲೂಕಿನ ಸಂಖ್ಯೆ 210 ರಿಂದ 215ಕ್ಕೆ ಏರಬಹುದು.ಆಗಸ್ಟ್  ತಿಂಗಳಲ್ಲಿ ಮಳೆ ಬಾರದೆ ಇರುವುದರಿಂದ ಬರಕ್ಕೆ ಕಾರಣವಾಗಿದೆ. ರೈತರ ಬೆಳೆ ಕೈಗೆ ಬಾರದೆ ನಷ್ಟ ಉಂಟಾಗಿದೆ. ಈ ಬಾರಿಯ ಮುಂಗಾರಿನಲ್ಲಿ 80 ಲಕ್ಷ ಹೆಕ್ಟೇರ್  ಪ್ರದೇಶದಲ್ಲಿ ಬಿತ್ತನೆ ಆಗಿತ್ತು. 42 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ನಾಶವಾಗಿದೆ.  ಶೇ.52 ಬೆಳೆ ನಾಶದಿಂದ ರೂ. 30 ಸಾವಿರ ಕೋಟಿ ಕೃಷಿ ಕ್ಷೇತ್ರದ ನಷ್ಟವಾಗಿದೆ. ಇದಷ್ಟನ್ನು ಕೇಂದ್ರ ರಾಜ್ಯ ಸರ್ಕಾರ ಭರಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. 

ರಾಜ್ಯ ಸರ್ಕಾರ, ಕೇಂದ್ರ ವಿಪತ್ತು ನಿರ್ವಹಣಾ ನಿಧಿ (ಎನ್.ಡಿ.ಆರ್.ಎಫ್)ಅಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ರೂ.4860 ಕೋಟಿ ಪರಿಹಾರ ಕೇಳಿದ್ದೇವೆ. ಸದ್ಯ ಕೇಂದ್ರ ಬರ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಿದ್ದು. 11 ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಿ, ಅವಲೋಕಿಸಿ ವರದಿ ನೀಡಲಿದೆ. ಸರ್ಕಾರ ಬರಗಾಲವನ್ನು ಸಮರ್ಥವಾಗಿ ಎದುರಿಸಲಿದೆ. ಜನರು ಹಾಗೂ ಜಾನುವಾರು ರಕ್ಷಣೆ ಮಾಡಲಾಗುವುದು. ಬರಗಾಲದಲ್ಲಿ ಕುಡಿಯುವ ನೀರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಹೆಚ್ಚಿನ ಅನುದಾನ ನೀಡಲಾಗುವುದು. ಮೇವು ಸಂಗ್ರಹಣೆಗೂ ಸೂಚನೆ ನೀಡಲಾಗಿದೆ.  ಬರ ಸ್ಥಿತಿ ಎದುರಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಇದರಲ್ಲಿ ವಿಪಲವಾದರೆ ಸಂಬಂಧಿಸಿದ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದು ವೇದಿಕೆಯಲ್ಲಿಯೇ ಸೂಚನೆ ನೀಡಿದರು.

click me!