ಕುಡಿದ ಮತ್ತಿನಲ್ಲಿ ಟ್ಯಾಂಕ್‌ ಏರಿದ ಕುಡುಕ ಮಹಾಶಯ: ಕೆಳಗಿಳಿಯಲಾಗದೆ ಪರದಾಟ, ಮುಂದೇನಾಯ್ತು?

By Govindaraj S  |  First Published Oct 6, 2023, 1:27 PM IST

ಮದ್ಯದ ನಶೆಯಲ್ಲಿ ವ್ಯಕ್ತಿಯೊಬ್ಬ ಕುಡಿಯುವ ನೀರಿನ ಟ್ಯಾಂಕ್‌ ಹತ್ತಿ ಆತಂಕ ಸೃಷ್ಟಿಸಿದ್ದ. ಕೆಳಗಿಳಿಯಲು ಸಾಧ್ಯವಾಗದೆ ಪರದಾಡುತ್ತಿದ್ದವನನ್ನು ಅಗ್ನಿಶಾಮಕ ಸಿಬ್ಬಂದಿ ಪೊಲೀಸರ ನೆರವಿನೊಂದಿಗೆ ರಕ್ಷಣೆ ಮಾಡಿದ್ದಾರೆ. ಶಿವಮೊಗ್ಗದ ಕಾಶಿಪುರ ಬಡಾವಣೆಯ ಶಿವಪ್ಪನಾಯಕ ಲೇಔಟ್‌ನ 2ನೇ ಅಡ್ಡರಸ್ತೆಯಲ್ಲಿ ಗುರುವಾರ ರಾತ್ರಿ ಘಟನೆ ಸಂಭವಿಸಿದೆ. 


ಶಿವಮೊಗ್ಗ (ಅ.06): ಮದ್ಯದ ನಶೆಯಲ್ಲಿ ವ್ಯಕ್ತಿಯೊಬ್ಬ ಕುಡಿಯುವ ನೀರಿನ ಟ್ಯಾಂಕ್‌ ಹತ್ತಿ ಆತಂಕ ಸೃಷ್ಟಿಸಿದ್ದ. ಕೆಳಗಿಳಿಯಲು ಸಾಧ್ಯವಾಗದೆ ಪರದಾಡುತ್ತಿದ್ದವನನ್ನು ಅಗ್ನಿಶಾಮಕ ಸಿಬ್ಬಂದಿ ಪೊಲೀಸರ ನೆರವಿನೊಂದಿಗೆ ರಕ್ಷಣೆ ಮಾಡಿದ್ದಾರೆ. ಶಿವಮೊಗ್ಗದ ಕಾಶಿಪುರ ಬಡಾವಣೆಯ ಶಿವಪ್ಪನಾಯಕ ಲೇಔಟ್‌ನ 2ನೇ ಅಡ್ಡರಸ್ತೆಯಲ್ಲಿ ಗುರುವಾರ ರಾತ್ರಿ ಘಟನೆ ಸಂಭವಿಸಿದೆ. 

ಸ್ನೇಹಿತರೊಂದಿಗೆ ಬಂದಿದ್ದ ನಟರಾಜ ಎಂಬಾತ ಮದ್ಯ ಸೇವಿಸಿದ್ದಾನೆ. ಕುಡಿಯುವ ನೀರಿನ ಟ್ಯಾಂಕ್‌ ಏರಿದ್ದು ಕೆಳಗಿಳಿಯಲಾಗದೆ ಪರಿದಾಡಿದ್ದಾನೆ ಎಂದು ಹೇಳಲಾಗುತ್ತಿದೆ. ವಿಷಯ ತಿಳಿದ ಸ್ಥಳೀಯರು ಘಟನೆ ಕುರಿತು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಟ್ಯಾಂಕ್‌ ಮೇಲೆ ಹತ್ತಿದ ಅಗ್ನಿಶಾಮಕ ಸಿಬ್ಬಂದಿ ಹಗ್ಗ ಕಟ್ಟಿ ಆತನನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. 

Tap to resize

Latest Videos

ವಿಜಯಪುರದಲ್ಲಿ ಹೆಮ್ಮಾರಿಯರ ಆರ್ಭಟ: ಡೆಂಗ್ಯೂ, ಚಿಕನ್‌ ಗುನ್ಯಾ ಹೊಡೆತಕ್ಕೆ ಜನರ ನರಳಾಟ!

ಟ್ಯಾಂಕ್‌ಗೆ ಮೆಟ್ಟಿಲುಗಳಿವೆ. ಆದರೆ ಅವು ಸರಿ ಇಲ್ಲದಿದ್ದರಿಂದ ನಟರಾಜನಿಗೆ ಕೆಳಗಿಳಿಯಲು ಭೀತಿ ಉಂಟಾಗಿತ್ತು ಎಂದು ಹೇಳಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆ ವೀಕ್ಷಿಸಲು ನೆರೆಹೊರೆಯ ರಸ್ತೆಯ ನಿವಾಸಿಗಳು ಜಮಾಯಿಸಿದ್ದರು. ಟ್ಯಾಂಕ್‌ನಿಂದ ಕೆಳಗಿಳಿಸಿದ ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದರು. ವಿನೋಬನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

click me!