ಸಿದ್ದರಾಮಯ್ಯ ನಿವಾಸ ಮುಂದೆ ಜನವೋ ಜನ, ಜನತಾದರ್ಶನ

Published : Jun 12, 2023, 02:00 AM IST
ಸಿದ್ದರಾಮಯ್ಯ ನಿವಾಸ ಮುಂದೆ ಜನವೋ ಜನ, ಜನತಾದರ್ಶನ

ಸಾರಾಂಶ

ಭಾನುವಾರ ಬೆಳಗ್ಗೆ ಸಿದ್ದರಾಮಯ್ಯ ನಿವಾಸದ ಸುತ್ತಮುತ್ತ ಜನವೋ ಜನ. ಮುಖಂಡರು, ಕಾರ್ಯಕರ್ತರು, ಅಧಿಕಾರಿಗಳು ಹಾಗೂ ಪೊಲೀಸರಿಂದ ಸಿದ್ದರಾಮಯ್ಯ ಅವರ ನಿವಾಸ ಗಿಜಿಗಿಜಿಡುತ್ತಿತ್ತು. 

ಮೈಸೂರು(ಜೂ.12):  ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಮೇಲೆ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರನ್ನು ನೋಡಲು ಅವರ ನಿವಾಸದ ಎದುರು ಸಾವಿರಾರು ಜನ ನೆರೆದಿದ್ದರು. 

ಈ ವೇಳೆ ಸಿದ್ದರಾಮಯ್ಯ ಅವರು ಕೆಲಕಾಲ ಜನತಾದರ್ಶನ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ವರುಣ ಕ್ಷೇತ್ರದ ಮತದಾರರಿಗೆ ಶನಿವಾರ ಕೃತಜ್ಞತಾ ಸಮಾವೇಶದ ಸಿದ್ದರಾಮಯ್ಯ ಅವರು, ಟಿ.ಕೆ.ಬಡಾವಣೆಯಲ್ಲಿ ತಮ್ಮ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು. ಇನ್ನು ಭಾನುವಾರ ಬೆಳಗ್ಗೆ ಸಿದ್ದರಾಮಯ್ಯ ನಿವಾಸದ ಸುತ್ತಮುತ್ತ ಜನವೋ ಜನ. ಮುಖಂಡರು, ಕಾರ್ಯಕರ್ತರು, ಅಧಿಕಾರಿಗಳು ಹಾಗೂ ಪೊಲೀಸರಿಂದ ಸಿದ್ದರಾಮಯ್ಯ ಅವರ ನಿವಾಸ ಗಿಜಿಗಿಜಿಡುತ್ತಿತ್ತು. 

ಕಾಂಗ್ರೆಸ್‌ ಗ್ಯಾರಂಟಿಗೆ ಚಾಲನೆ ಕೊಟ್ಟ ಬಿಜೆಪಿ ಶಾಸಕ: ಉಚಿತ ಬಸ್‌ ಟಿಕೆಟ್ ವಿತರಣೆ

ಬೆಂಗಳೂರಿಗೆ ತೆರಳಲು ಸಿದ್ದರಾಮಯ್ಯ ಅವರು ಮನೆಯಿಂದ ಹೊರಗೆ ಬಂದು ಸಾರ್ವಜನಿಕರಿಂದ ಕೆಲ ನಿಮಿಷ ಮನವಿ ಪತ್ರಗಳನ್ನು ಸ್ವೀಕರಿಸಿದರು. ಅಹವಾಲುಗಳ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರಿಗೆ ಸೂಚಿಸಿದರು. ನಂತರ ಮೈಸೂರು ವಿಮಾನ ನಿಲ್ದಾಣಕ್ಕೆ ತೆರಳಿ ಹೆಲಿಕಾಪ್ಟರ್‌ ಮೂಲಕ ಬೆಂಗಳೂರಿಗೆ ತೆರಳಿದರು.

PREV
Read more Articles on
click me!

Recommended Stories

ಕಿತ್ತೂರು ಕರ್ನಾಟಕಕ್ಕೆ 5 ಸಾವಿರ ಕೋಟಿ ನೀಡಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ: ಶಾಸಕ ರಾಜು ಕಾಗೆ
ಉಬರ್ ಆ್ಯಪ್‌ನಲ್ಲೂ ಬೆಂಗಳೂರು ಮೆಟ್ರೋ ಟಿಕೆಟ್ ಖರೀದಿ ಸೌಲಭ್ಯ, ಬುಕಿಂಗ್ ಮಾಡುವುದು ಹೇಗೆ?