ವರ್ಷದ ಹಿಂದೆ ನಡೆದಿದ್ದ ಅಜ್ಜ ಮತ್ತು ಮೊಮ್ಮಗನನ್ನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳಿಗೆ ಮಡಿಕೇರಿ ಹೆಚ್ಚುವರಿ ನ್ಯಾಯಾಲಯ ಗಲ್ಲು ಶಿಕ್ಷೆಯನ್ನ ವಿಧಿಸಿದೆ. ಇದು ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಕೊಲೆ ಆರೋಪಿಗಳಿಗೆ ಗಲ್ಲು ಶಿಕ್ಷೆ ಜಾರಿ ಮಾಡಿದ ಅಪರೂಪದ ಪ್ರಕರಣವಾಗಿದೆ.
ಮಡಿಕೇರಿ : ವರ್ಷದ ಹಿಂದೆ ನಡೆದಿದ್ದ ಅಜ್ಜ ಮತ್ತು ಮೊಮ್ಮಗನನ್ನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳಿಗೆ ಮಡಿಕೇರಿ ಹೆಚ್ಚುವರಿ ನ್ಯಾಯಾಲಯ ಗಲ್ಲು ಶಿಕ್ಷೆಯನ್ನ ವಿಧಿಸಿದೆ. ಇದು ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಕೊಲೆ ಆರೋಪಿಗಳಿಗೆ ಗಲ್ಲು ಶಿಕ್ಷೆ ಜಾರಿ ಮಾಡಿದ ಅಪರೂಪದ ಪ್ರಕರಣವಾಗಿದೆ.
2016 ರ ಫೆಬ್ರವರಿ 11ರಂದು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ನಡೆದಿದ್ದ ಅಜ್ಜ ಮೊಮ್ಮೊಗನ ಕೊಲೆ ಪ್ರಕರಣದ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ, ಮೂವರು ಆರೋಪಿಗಳಾದ ಶಿವಕುಮಾರ್ (21), ಜುಟ್ಟು ಶಿವು(22), ಕುಮಾರ (21) ಗೆ ಗಲ್ಲು ಶಿಕ್ಷೆ ಜಾರಿ ಮಾಡಿದೆ.
ಅಡಿಕೆ ಮಾರಿದ ಹಣ ಇದೆ ಎಂಬ ಆಸೆಯಿಂದ ಅಜ್ಜ ಮೊಮ್ಮೊಗನನ್ನು ಮೂವರು ಯುವಕರು ಕೊಲೆ ಮಾಡಿದ್ದರು. ಕುಶಾಲನಗರ ಸಮೀಪದ ಮಲ್ಲೇನಹಳ್ಳಿಯಲ್ಲಿ ಅಜ್ಜ ಕೊಚ್ಚುನ್ನಿ ಹಾಗೂ ಮೊಮ್ಮೊಗ ಅಮೃತಾನಂದ್ ಅವರನ್ನು ಕೊಲೆ ಮಾಡಲಾಗಿತ್ತು.
ಈ ಸಂಬಂಧ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕುಶಾಲನಗರ ಠಾಣೆಯ ತನಿಖಾಧಿಕಾರಿ ಸಂದೇಶ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆದು, ಆರೋಪಿಗಳ ಮೇಲೆ 120ಬಿ, 302, 394, 397, 201 ಸೆಕ್ಷನ್ ಅಡಿ ಕೇಸು ದಾಖಲಾಗಿತ್ತು.
ಅಜ್ಜ , ಮೊಮ್ಮೊಗನ ಕತ್ತು ಕೊಯ್ದು ಟವೆಲ್ ಬಿಗಿದು ಹತ್ಯೆ ಮಾಡಲಾಗಿದ್ದು, ಈ ಸಂಬಂಧ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯದಿಂದ ಮಹತ್ವದ ತೀರ್ಪು ಪ್ರಕಟಿಸಿದೆ. ಕೊಡಗಿನ ಇತಿಹಾಸದಲ್ಲೇ ಯಾರಿಗೂ ಪ್ರಕಟವಾಗದಂತಹ ಗಲ್ಲು ಶಿಕ್ಷೆ ವಿಧಿಸಲಾಗಿದೆ.