* ತುಮಕೂರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ
* ಕೊರೋನಾ ಹೆಚ್ಚಳವಾಗಿದ್ದರಿಂದ ಜಿಲ್ಲೆಗೆ ಭೇಟಿ ಕೊಟ್ಟ ಬಿಎಸ್‌ವೈ
* ತುಮಕೂರಿಗೆ ಭೇಟಿ ನೀಡಿ ಪರಿಶೀಲನಾ ಸಭೆ ನಡೆಸಿದ ಸಿಎಂ
ತುಮಕೂರು, (ಮೇ.28): ಜಿಲ್ಲೆಯಲ್ಲಿ ಕೊರೋನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಖುದ್ದು ಭೇಟಿ ನೀಡಿದರು.
ಕೊರೋನಾ ಹೆಚ್ಚಳದ ಸಚಿವ ಮಾಧುಸ್ವಾಮಿ ಮಾಹಿತಿ ಮೇರೆಗೆ ಸಿಎಂ ಬಿಎಸ್‌ವೈ ಇಂದು (ಶುಕ್ರವಾರ) ತುಮಕೂರಿಗೆ ಭೇಟಿ ನೀಡಿ ಪರಿಶೀಲನಾ ಸಭೆ ನಡೆಸಿದರು.
undefined
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್.ಯಡಿಯೂರಪ್ಪ, ಇಡೀ ರಾಜ್ಯದಲ್ಲಿ ಹೆಚ್ಚು ಕೋವಿಡ್ ಕೇಸ್ ಇದ್ದ ತುಮಕೂರಿಗೆ ಬಂದು ಸಮಾಲೋಚನೆ ಮಾಡಿದ್ದೇನೆ. ಕೋವಿಡ್ ತಡೆಯೋದ್ರಲ್ಲಿ ಇಲ್ಲಿ ವಿಶೇಷ ಪ್ರಯತ್ನ ಮಾಡಿದ್ದಾರೆ ಎಂದರು.
ತುಮಕೂರು : ರೆಡ್‌ಝೋನ್, ಹಾಟ್‌ಸ್ಪಾಟ್‌ಗಳಿಗೆ ಭೇಟಿ ನೀಡಿ ಧೈರ್ಯ ತುಂಬುತ್ತಿರುವ DC,SP
ತುಮಕೂರು ಜಿಲ್ಲೆಯಲ್ಲಿ ಎರಡನೇ ಅಲೆಯಲ್ಲಿ 0.66% ಮರಣ ಪ್ರಮಾಣ ಇದೆ. ಪಾಸಿಟೀವ್ ರೇಟನ್ನ ಏನಾದ್ರೂ ಮಾಡಿ 10% ಒಳಗೆ ಇಳಿಸಬೇಕಿದೆ. ಜಿಲ್ಲೆಗೆ 23 kl ಆಕ್ಸಿಜನ್ ಪೂರೈಸಲಾಗಿದೆ. ವಾರ್ ರೂಂ, ನೋಡಲ್ ಅಧಿಕಾರಿಗಳನ್ನ ನೇಮಿಸಲಾಗಿದೆ. ಯಾವುದೇ ಕಾರಣಕ್ಕೂ ಅಕ್ಸಿಜನ್ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದೆ ಎಂದು ಹೇಳಿದರು.
ಏಪ್ರಿಲ್-ಮೇ ತಿಂಗಳಲ್ಲಿ ಒಟ್ಟು 445 ಸಾವು ಆಗಿದೆ. ಸಾವಿನ ಪ್ರಮಾಣ 0.66% ಇದೆ. ಏಪ್ರಿಲ್ ನಲ್ಲಿ 131 ಸಾವಾಗಿದೆ. ಮೇ ನಲ್ಲಿ 314 ಸೋಂಕಿತರು ಸಾವನ್ನಪ್ಪಿದ್ದಾರೆ. ಆಕ್ಸಿಜನ್ ಸಮಸ್ಯೆ, ರೋಗಿಗಳು ತಡವಾಗಿ ಬಂದು ಆಸ್ಪತ್ರೆಗೆ ದಾಖಲಾಗಿದ್ದು ಸಾವಿನ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ಸಿಬ್ಬಂದಿಗಳ ಕೊರತೆ ಇದೆ. ಕೇವಲ ಒಬ್ಬೇ ಒಬ್ಬ ವೈದ್ಯ ಚಿಕ್ಕನಾಯಕನಹಳ್ಳಿ, ಹುಳಿಯಾರು ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದಾರೆ . 300-400 ಜನ ರೋಗಿಗಳನ್ನು ವೈದ್ಯರು ನೋಡ್ತಿದ್ದಾರೆ. ಇದು ನಮಗೆ ಸಮಸ್ಯೆ ಆಗಿದೆ. ಇದನ್ನ ಸರಿ ಪಡಿಸಬೇಕು ಎಂದು ಮಾಧುಸ್ವಾಮಿ ಸಿಎಂಗೆ ಮನವಿ ಮಾಡಿದ್ದರು.