Asianet Suvarna News Asianet Suvarna News

ತುಮಕೂರು : ರೆಡ್‌ಝೋನ್, ಹಾಟ್‌ಸ್ಪಾಟ್‌ಗಳಿಗೆ ಭೇಟಿ ನೀಡಿ ಧೈರ್ಯ ತುಂಬುತ್ತಿರುವ DC,SP

  • ತುಮಕೂರು ಜಿಲ್ಲೆಯಲ್ಲಿ ಕೊಂಚ ಇಳಿಕೆಯಾದ ಕೊರೋನಾ ಪ್ರಕರಣ
  • ಹಾಟ್‌ಸ್ಪಾಟ್‌ಗಳಿಗೆ ಭೇಟಿ ನೀಡಿ ಧೈರ್ಯ ತುಂಬುತ್ತಿರುವ ಜಿಲ್ಲಾಧಿಕಾರಿ, ಎಸ್‌ಪಿ
  • ರೆಡ್‌ ಝೋನ್‌ನಿಂದ ಆರೆಂಜ್‌ ಝೋನ್‌ಗಿಳಿದ ತುಮಕೂರು ಜಿಲ್ಲೆ 
Tumkur dc Sp Visits Corona hotspots And Red zone snr
Author
Bengaluru, First Published May 26, 2021, 11:27 AM IST

ಕೊರಟಗೆರೆ (ಮೇ.26): ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ತಮ್ಮ ತಂಡದೊಂದಿಗೆ ರೆಡ್ ಝೋನ್ , ಹಾಟ್ ಸ್ಪಾಟ್  ಪ್ರದೇಶಗಳಿಗೆ ಭೇಟಿ ನೀಡಿ ಕೊರೋನಾ ಸೋಂಕಿತರಿಗೆ ಆತ್ಮಬಲ ತುಂಬುವ ಮೂಲಕ ಅರಿವು ಮೂಡಿಸುತ್ತಿದ್ದಾರೆ. 

ತಾಲೂಕಿನ ಜೆಟ್ಟಿ ಅಗ್ರಹಾರ, ತೀತಾಮ ನೀಲಗೊಂಡನಹಳ್ಳಿ, ಎಲೆರಾಂಪುರ ಗ್ರಾಮ  ಪಂಚಾಯತ್ ವ್ಯಾಪ್ತಿಯ ಕೊರೋನಾ ರೆಡ್ ಝೋನ್ ಹಾಗೂ ಹಾಟ್‌ ಸ್ಪಾಟ್‌ ಗ್ರಾಮದ 25ಕ್ಕೂ ಅಧಿಕ ಕೊರೋನಾ ಸೋಂಕಿತರ ಮನೆಗಳಿಗೆ ಖುದ್ದು ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ ಪ್ರತಿನಿತ್ಯ ಆರೋಗ್ಯ ತಪಾಸಣೆ ಮಾಡುವಂತೆ ಆರೋಗ್ಯ, ಅಂಗನವಾಡಿ, ಆಶಾ, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ತುಮಕೂರು : ಇಳಿಕೆಯತ್ತ ಸಾಗಿದ ಕೊರೋನಾ .

ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಮಾತನಾಡಿ ಕೊರೋನಾ ರೋಗ ಹರಡದಂತೆ ತಡೆಗಟ್ಟಲು ರೆಡ್ ಝೋನ್ ಮತ್ತು ಹಾಟ್‌ ಸ್ಪಾಟ್ ಎಂದು ಗುರುತಿಸಿ ತುರ್ತು ಆರೋಗ್ಯ ಸೇವೆಗೆ ಸೂಚಿಸಲಾಗಿದೆ. ಪಾಸಿಟಿವ್ ಬಂದ 24 ಗಂಟೆಯೊಳಗೆ ಜೀವ ರಕ್ಷಕ ಸೌಲಭ್ಯ ನಿಡುತ್ತೇವೆ. ಆಮ್ಲಜನಕ ಕಡಿಮೆಯಾಗಿ ಆಸ್ಪತ್ರೆ ದಾಖಲಾಗುವ ಪ್ರಕರಣ ಕಡಿಮೆಯಾಗುತ್ತಿದೆ ಎಂದರು. 

 

ಜನಸಾಮಾನ್ಯರು  ಭಯಪಡದೆ  ಧೈರ್ಯದಿಂದ ಕೊರೋನಾ ರೋಗದ ವಿರುದ್ದ ಎಲ್ಲರೂ ಒಂದಾಗಿ ಹೋರಾಟ ಮಾಡಬೇಕು ಎಂದರು. 

ಕೊರಟಗೆರೆ ಟಾಸ್ಕ್ಫೋರ್ಸ್ ಆರೋಗ್ಯ ಇಲಾಖೆ ಗ್ರಾಪಂ, ಅಂಗನವಾಡಿ, ಆಶಾ ಪಡೆ ಇನ್ನೂ ಸಫಲವಾಗಿ ಕೆಲಸ ಮಾಡಿದರೆ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಕುಸಿಯಲಿದೆ ಎಂದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios