ಮಂಡ್ಯ ಅಭಿಮಾನಿಗೆ ಚಪ್ಪಲಿ ಕೊಡುಗೆ ನೀಡಿದ ಸಿಎಂ!

Published : Sep 10, 2019, 08:40 AM IST
ಮಂಡ್ಯ ಅಭಿಮಾನಿಗೆ ಚಪ್ಪಲಿ ಕೊಡುಗೆ ನೀಡಿದ ಸಿಎಂ!

ಸಾರಾಂಶ

ಮಂಡ್ಯ ಅಭಿಮಾನಿಗೆ ಚಪ್ಪಲಿ ಗಿಫ್ಟ್‌ ಕೊಟ್ಟಯಡಿಯೂರಪ್ಪ!| ಬಿಎಸ್‌ವೈ ಸಿಎಂ ಆಗುವವರೆಗೂ ಚಪ್ಪಲಿ ಧರಿಸಲ್ಲ ಎಂದಿದ್ದ ಅಭಿಮಾನಿ| ನಿವಾಸಕ್ಕೆ ಕರೆಸಿಕೊಂಡು ಉಡುಗೊರೆ ಹಸ್ತಾಂತರಿಸಿದ ಮುಖ್ಯಮಂತ್ರಿ

ಮಂಡ್ಯ[ಸೆ.10]: ‘ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವವರೆಗೂ ಚಪ್ಪಲಿ ಹಾಕುವುದಿಲ್ಲ’ ಎಂದು ಕಾಳಮ್ಮ ದೇವಿಗೆ ಹರಕೆ ಹೊತ್ತಿದ್ದ ಅಭಿಮಾನಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಚಪ್ಪಲಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಮಂಡ್ಯ ತಾಲೂಕಿನ ಉಪ್ಪರಕನಹಳ್ಳಿ ಶಿವಕುಮಾರ್‌ ಆರಾಧ್ಯ ಅವರು ಯಡಿಯೂರಪ್ಪ ಅಭಿಮಾನಿಯಾಗಿದ್ದು, ಸಿಎಂ ಅವರಿಂದ ಚಪ್ಪಲಿಯನ್ನು ಉಡುಗೊರೆಯಾಗಿ ಪಡೆದಿದ್ದಾರೆ. ಯಡಿಯೂರಪ್ಪ ಸಿಎಂ ಆಗಬೇಕು ಎಂದು ಸತತ 26 ತಿಂಗಳ ಕಾಲ ಚಪ್ಪಲಿ ಹಾಕದೆ ನಡೆದಾಡಿದ್ದ ಶಿವಕುಮಾರ್‌ ಅವರಿಗೆ ಸೋಮವಾರ ಬೆಂಗಳೂರಿನ ಧವಳಗಿರಿ ನಿವಾಸಕ್ಕೆ ಕರೆಸಿ ಚಪ್ಪಲಿಯನ್ನು ಉಡುಗೊರೆಯಾಗಿ ನೀಡಿದರು.

ಶಪಥ ಈಡೇರಿಸಿದ ಅಭಿಮಾನಿಗೆ ಹೊಸ ಚಪ್ಪಲಿ ಕೊಡಿಸಲಿರುವ ಯಡಿಯೂರಪ್ಪ!

ಶಿವಕುಮಾರ್‌ ಆರಾಧ್ಯ ಮಾತನಾಡಿ, ‘ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ನನ್ನ ಹರಕೆ ಈಡೇರಿದೆ. ಅಪ್ಪಾಜಿ ಯಡಿಯೂರಪ್ಪ ಕೊಟ್ಟಚಪ್ಪಲಿಯನ್ನು ಮನೆಯ ಶೋಕೇಸ್‌ನಲ್ಲಿಟ್ಟು ಕಾಪಾಡಿಕೊಳ್ಳುತ್ತೇನೆ. ನನಗೆ ಚಪ್ಪಲಿ ಉಡುಗೊರೆಯಾಗಿ ಕೊಟ್ಟಿದ್ದು ಖುಷಿ ತಂದಿದೆ’ ಎಂದು ಹೇಳಿದ್ದಾರೆ.

PREV
click me!

Recommended Stories

ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು
ರೈತ, ಆಟೋ ಚಾಲಕರ ಹೆಣ್ಮಕ್ಕಳಿಗೆ ಗವಿಮಠದಿಂದ ಫ್ರೀ ಕಾಲೇಜು, ಹಾಸ್ಟೆಲ್‌