ಚಾಲನೆ ವೇಳೆ ಮೊಬೈಲ್‌ನಲ್ಲಿ ಮಾತು: ಡ್ರೈವರ್‌ಗೆ ಬಿತ್ತು ದಂಡ..!

Published : Sep 10, 2019, 08:33 AM IST
ಚಾಲನೆ ವೇಳೆ ಮೊಬೈಲ್‌ನಲ್ಲಿ ಮಾತು: ಡ್ರೈವರ್‌ಗೆ ಬಿತ್ತು ದಂಡ..!

ಸಾರಾಂಶ

ಹೊಸ ಟ್ರಾಫಿಕ್ ರೂಲ್ಸ್ ಅಡಿಯಲ್ಲಿ ಹಲವು ಕಡೆ ದಂಡ ವಸೂಲಿ ಆದ ಮೇಲೂ ನಿಯಮಗಳ ಉಲ್ಲಂಘನೆ ಮಾತ್ರ ಆಗುತ್ತಲೇ ಇದೆ. ಮಂಗಳೂರಿನಲ್ಲಿ ಚಾಲನೆ ಸಂದರ್ಭ ಮೊಬೈಲ್ ಬಳಸಿದ್ದಕ್ಕೆ ಚಾಲಕನಿಗೆ 5,000 ರುಪಾಯಿ ದಂಡ ವಿಧಿಸಲಾಗಿದೆ. ದಂಡ ಮೊತ್ತವನ್ನು ಹೆಚ್ಚಿಸಿ ಜಾರಿ ಮಾಡಿರುವ ಹೊಸ ಮೋಟಾರು ವಾಹನ ಕಾಯ್ದೆ ಮಂಗಳೂರು ನಗರದಲ್ಲಿ ಶನಿವಾರದಿಂದ ಅನುಷ್ಠಾನಕ್ಕೆ ಬಂದಿದೆ.

ಮಂಗಳೂರು(ಸೆ.10): ನಗರದ ಹೊರವಲಯದ ಜೋಕಟ್ಟೆಯಲ್ಲಿ ಬಸ್‌ ಚಾಲನೆ ವೇಳೆ ಮೊಬೈಲ್‌ ಬಳಸಿ ಸಂಚಾರ ನಿಯಮ ಉಲ್ಲಂಘಿಸಿದ ಚಾಲಕನಿಗೆ ಸಂಚಾರ ಪೊಲೀಸರು 5,000 ರು. ದಂಡ ವಿಧಿಸಿದ್ದಾರೆ.

ಶನಿವಾರ ರಾತ್ರಿ 7 ಗಂಟೆ ಸುಮಾರು ಮಂಗಳೂರು ಉತ್ತರ ಠಾಣಾ ಪೊಲೀಸರು ಜೋಕಟ್ಟೆಕ್ರಾಸ್‌ನಲ್ಲಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಖಾಸಗಿ ಬಸ್‌ ಚಲಾಯಿಸುತ್ತಿದ್ದ ಚಾಲಕ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದನು. ಬಸ್‌ ನಿಲ್ಲಿಸಲು ಸೂಚಿಸಿದ ಪೊಲೀಸರು ಚಾಲಕನಿಂದ ಭಾರೀ ದಂಡ ವಸೂಲಿ ಮಾಡಿದ್ದಾರೆ.

ರಾಜೀನಾಮೆ ನೀಡಿದ್ದು ಸೆಂಥಿಲ್ ಹೇಡಿತನ: ಬಿಜೆಪಿ ವ್ಯಂಗ್ಯ

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಮೊತ್ತವನ್ನು ಹೆಚ್ಚಿಸಿ ಜಾರಿ ಮಾಡಿರುವ ಹೊಸ ಮೋಟಾರು ವಾಹನ ಕಾಯ್ದೆ ಮಂಗಳೂರು ನಗರದಲ್ಲಿ ಶನಿವಾರದಿಂದ ಅನುಷ್ಠಾನಕ್ಕೆ ಬಂದಿದೆ.

ಮಂಗಳೂರು: ಸೆಂಥಿಲ್‌ ವಿರುದ್ಧ ದೇಶದ್ರೋಹಿ ತನಿಖೆ..?

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು