ವಿಜಯನಗರ ಸ್ಥಾಪನೆಗೆ ಕಾಲ ಹತ್ತಿರ, ಬಳ್ಳಾರಿ ಇಬ್ಭಾಗಕ್ಕೆ ಸಿಎಂ ಒಪ್ಪಿಗೆ?

By Web Desk  |  First Published Sep 29, 2019, 7:19 PM IST

ವಿಜಯನಗರ  ಪ್ರತ್ಯೇಕ ಜಿಲ್ಲೆ ಒಪ್ಪಿಗೆ ಕೊಟ್ರಾ ಸಿಎಂ/ ದಾವಣಗೆರೆಯಯಲ್ಲಿ ಸಿಎಂ ಬಿಎಸ್ ವೈ ಹೇಳಿಕೆ ಹುಟ್ಟುಹಾಕಿದ ಪ್ರಶ್ನೆಗಳು/ ಆನಂದ್ ಸಿಂಗ್ ಕೈ ಮೇಲಾಯ್ತಾ? 


ದಾವಣಗೆರೆ[ಸೆ. 29]  ಈ ಸಲ ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿವೇಶನ ಅಸಾಧ್ಯ. ಆ ಭಾಗದಲ್ಲಿ ಪ್ರವಾಹದಿಂದ ನಾನಾ ತೊಂದರೆಗಳಿವೆ. ಅಧಿವೇಶನ ಬೇಡ ಎಂದು ಬೆಳಗಾವಿ  ಜಿಲ್ಲಾಧಿಕಾರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಹೀಗಾಗಿ ಈ ಸಲ ಬೆಂಗಳೂರಿನಲ್ಲಿಯೇ ಅಧಿವೇಶ ನಡೆಸಲಾಗುತ್ತಿದೆ. ಪ್ರವಾಹ ಪೀಡಿತ ಪ್ರದೇಶದ ಪರಿಹಾರಕ್ಕಾಗಿ ಕೇಂದ್ರದಿಂದ ಸದ್ಯದಲ್ಲಿಯೇ ನೆರವು ಬರಲಿದೆ. ಅಕ್ಟೋಬರ್ 4,5 ಮತ್ತು 6ನೇ ತಾರೀಕು ಮೂರು ದಿನಗಳ ಕಾಲ ಪ್ರವಾಹ ಪೀಡಿತ ಪ್ರದೇಶಗಳಿಗೆ ಮತ್ತೊಮ್ಮೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುತ್ತೆನೆ ಎಂದು ತಿಳಿಸಿದರು.

Latest Videos

undefined

ಬಳ್ಳಾರಿ ಇಬ್ಭಾಗ ಆದ್ರೆ ರಾಜಿನಾಮೆ ಕೊಡ್ತೀವಿ: ಸೋಮಶೇಖರ್ ರೆಡ್ಡಿ...

ಕೆಲವು ಜಿಲ್ಲೆಗಳಲ್ಲಿ ಹತ್ತು ಹಲವು ತಾಲ್ಲೂಕುಗಳಿವೆ. ಸಣ್ಣ ಜಿಲ್ಲೆಯಾದ್ರೆ ಹೆಚ್ಚು ಉಪಯೋಗವಾಗುತ್ತದೆ ಎಂಬುದು ಸಾಮಾನ್ಯ ವಾಡಿಕೆ. ಆಯಾ ಕ್ಷೇತ್ರದ ಶಾಸಕರನ್ನು ಕರೆದು ಮಾತನಾಡುತ್ತೇನೆ ಎಂದು ಹೇಳಿದರು. ಈ ಹೇಳಿಕೆ ಮುಖಾಂತರ ಪ್ರತ್ಯೇಕ ಜಿಲ್ಲೆ ಸ್ಥಾಪನೆಗೆ ಒಪ್ಪಿಗೆ ಕೊಡಲಿದ್ದಾರೆಯೇ? ಎಂಬ ಮಾತುಗಳು ಕೇಳಿ ಬಂದಿವೆ.

ಬಳ್ಳಾರಿ ಜಿಲ್ಲೆಯನ್ನು ಒಡೆದು ಅದರಲ್ಲಿ ವಿಜಯನಗರವನ್ನು ಮತ್ತೊಂದು ಜಿಲ್ಲೆ ಮಾಡಬೇಕು ಎಂದು ಅನರ್ಹ ಶಾಸಕ ಆನಂದ್ ಸಿಂಗ್ ಮತ್ತು ಕೆಲ ಸ್ವಾಮೀಜಿಗಳು ಸಿಎಂ ಭೇಟಿಯಾಗಿ ಮನವಿ ನೀಡಿದ್ದರು. ಇದಾದ ಮೇಲೆಸಚಿವ ಶ್ರೀರಾಮುಲು, ಸೋಮಶೇಖರ ರೆಡ್ಡಿ ಅವರಿಂದ ಜಿಲ್ಲೆ ಇಬ್ಭಾಗಕ್ಕೆ ವಿರೋಧ ಕೇಳಿ ಬಂದಿತ್ತು. 

click me!