'ಮುಂದಿನ 15 ದಿನ ಯಾರೂ ಬೆಂಗ್ಳೂರಿಂದ ಹಳ್ಳಿಗೆ ಹೋಗೋ ಹಾಗಿಲ್ಲ...!'

By Suvarna NewsFirst Published Mar 22, 2020, 2:55 PM IST
Highlights

ಮುಂದಿನ 15 ದಿನ ನಗರದಿಂದ ಯಾರು ಹಳ್ಳಿಗಳಿಗೆ ಹೋಗಬೇಡಿ ಎಂದು ಸಿಎಂ ಬಿ. ಎಸ್‌. ಯಡಿಯೂರಪ್ಪ ಹೇಳಿದ್ದಾರೆ. ಜನತಾ ಕರ್ಫ್ಯೂ ಸಂಬಂಧಿಸಿ ಮಾತನಾಡಿದ ಅವರು ಕೆಲವು ಪ್ರಮುಖ ತೀರ್ಮಾನಗಳನ್ನು ತಿಳಿಸಿದ್ದಾರೆ.

ಬೆಂಗಳೂರು(ಮಾ.22): ಮುಂದಿನ 15 ದಿನ ನಗರದಿಂದ ಯಾರು ಹಳ್ಳಿಗಳಿಗೆ ಹೋಗಬೇಡಿ ಎಂದು ಸಿಎಂ ಬಿ. ಎಸ್‌. ಯಡಿಯೂರಪ್ಪ ಹೇಳಿದ್ದಾರೆ. ಜನತಾ ಕರ್ಫ್ಯೂ ಸಂಬಂಧಿಸಿ ಮಾತನಾಡಿದ ಅವರು ಕೆಲವು ಪ್ರಮುಖ ತೀರ್ಮಾನಗಳನ್ನು ತಿಳಿಸಿದ್ದಾರೆ.

15 ದಿನಗಳ ಯಾರು ಸಿಟಿ ಯಿಂದ ಹಳ್ಳಿಗಳಿಗೆ ಹೋಗಬೇಡಿ. ಈಗಾಗಲೇ ಹಳ್ಳಿಗಳಲ್ಲಿ ಯಾವುದೇ ಸಮಸ್ಯೆ ಇಲ್ಲ. ಹೀಗಾಗಿ ಸಿಟಿಯಿಂದ ಹಳ್ಳಿಗಳಿಗೆ ಯಾರು ಹೋಗಬೇಡಿ ಎಂದು ಸಿಎಂ ಮನವಿ ಮಾಡಿದ್ದಾರೆ.

ಕೊರೋನಾ ಭೀತಿ: ವಿಜಯಪುರ ನಗರದಾದ್ಯಂತ ಫಾಗಿಂಗ್ ಕಾರ್ಯ

1700 ಹಾಸಿಗೆಯ ವಿಕ್ಟೋರಿಯಾ ಆಸ್ಪ್ರತ್ರೆಯನ್ನ ಕೊರೋನಾ ವೈರಸ್‌ ಚಿಕಿತ್ಸೆಗಾಗಿ ಪರಿವರ್ತಿಸಿ ಆದೇಶ ನೀಡಿದ್ದು, ಅಲ್ಲಿರುವ ರೋಗಿಗಳಿಗೆ ಬೇರೆಕಡೆ ಶಿಫ್ಟ್ ಮಾಡಲು ವ್ಯವಸ್ಥೆ ಮಾಡಲಾಗಿದೆ.

ಎಸ್ ಎಸ್ ಎಲ್ ಸಿ ಪರೀಕ್ಷೆ ಮತ್ತು ಇತರ ಎಲ್ಲಾ ಪರೀಕ್ಷೆ ಮುಂದೂಡಿಕೆಯಾಗಿದ್ದು, ರಾಜ್ಯದ ಎಲ್ಲಾ ಗಡಿ ಭಾಗ ಬಂದ್ ಮಾಡಲು ತಿರ್ಮಾನಿಸಲಾಗಿದ. ಸರ್ಕಾರಿ ಮತ್ತು ಸರ್ಕಾರೇತರ ಆಸ್ಪತ್ರೆಗಳಿಗೂ ಕೊವಿಡ್ ತಪಾಸಣೆಗೆ ಪರವಾನಿಗೆ ನೀಡಲು ಸೂಚನೆ ನೀಡಲಾಗಿದೆ.

ಸ್ಥಳಿಯ ವಿಮಾನ ಪ್ರಯಾಣಿಕರಿಗೂ ತಪಾಸಣೆ ಕಡ್ಡಾಯ ಮಾಡಲಾಗಿದ್ದು, ಎಲ್ಲಾ ಚುನಾವಣೆಗಳು ಮುಂದುಡಿಕೆಯಾಗಿವೆ. ಬಾಲ್ ಬ್ರೂಹಿ ಅಧಿತಿ ಗೃಹವನ್ನ ಕೊರೊನಾ ವಾರ್ ರೂಂ ಆಗಿ ಪರಿವರ್ತನೆ ಮಾಡಿ, ನನ್ನ ಅಧ್ಯಕ್ಷತೆಯಲ್ಲಿ ಇಲ್ಲಿಂದಲೆ ಎಲ್ಲಾ ಕಾರ್ಯಗಳು ನಡೆಯಲಿವೆ ಎಂದು ಸಿಎಂ ತಿಳಿಸಿದ್ದಾರೆ. ಎರಡು ತಿಂಗಳ ರೇಷನ್ ಕೊಡಲು ತಿರ್ಮಾನ ಮಾಡಲಾಗಿದೆ.

click me!