ರೈಲ್ವೆ ಬುಕ್ಕಿಂಗ್‌ ರದ್ದು: ಹಣ ಹಿಂಪಡೆಯಲು ಸರಳ ಕ್ರಮ

By Kannadaprabha NewsFirst Published Mar 22, 2020, 1:45 PM IST
Highlights

ಭಾರತೀಯ ರೈಲ್ವೆ ಕೋವಿಡ್‌- 19 ಭೀತಿಯ ಹಿನ್ನೆಲೆಯಲ್ಲಿ ರೈಲ್ವೆ ಬುಕ್ಕಿಂಗ್‌ ಮಾಡಿ, ಬಳಿಕ ಟಿಕೆಟ್‌ ರದ್ದುಗೊಳಿಸುವ ಪ್ರಯಾಣಿಕರಿಗೆ ಹಣ ವಾಪಸ್‌ ಮಾಡಲು ಸರಳ ವಿಧಾನ ಸೌಲಭ್ಯ ಕಲ್ಪಿಸಿದೆ.

ಮೈಸೂರು(ಮಾ.22): ಭಾರತೀಯ ರೈಲ್ವೆ ಕೋವಿಡ್‌- 19 ಭೀತಿಯ ಹಿನ್ನೆಲೆಯಲ್ಲಿ ರೈಲ್ವೆ ಬುಕ್ಕಿಂಗ್‌ ಮಾಡಿ, ಬಳಿಕ ಟಿಕೆಟ್‌ ರದ್ದುಗೊಳಿಸುವ ಪ್ರಯಾಣಿಕರಿಗೆ ಹಣ ವಾಪಸ್‌ ಮಾಡಲು ಸರಳ ವಿಧಾನ ಸೌಲಭ್ಯ ಕಲ್ಪಿಸಿದೆ.

ಪ್ರಯಾಣಿಕರು ಮಾ.21 ರಿಂದ ಏ.15ರವರೆಗೆ ರೈಲು ಟಿಕೆಟ್‌ ಬುಕ್ಕಿಂಗ್‌ ಮಾಡಿಕೊಂಡಿದ್ದಲ್ಲಿ ಅಂತವರಿಗೆ ಈ ಸೌಲಭ್ಯ ಅನ್ವಯಿಸಲಿದೆ. ಈ ಅವಧಿಯಲ್ಲಿ ಬುಕ್ಕಿಂಗ್‌ ಮಾಡಿದ್ದ ರೈಲು ಸಂಚಾರ ರದ್ದುಗೊಂಡಲ್ಲಿ ಟಿಕೆಟ್‌ ಹಣವನ್ನು ವಾಪಸ್‌ ಪಡೆಯಬಹುದು. ಬುಕ್ಕಿಂಗ್‌ ಮಾಡಿದ ದಿನಾಂಕದಿಂದ 45 ದಿನಗಳೊಳಗೆ ಟಿಕೆಟ್‌ ವಾಪಸ್‌ ಮಾಡಿ (ವಾಪಸ್‌ ಮಾಡಿದ 3 ರಿಂದ 72 ಗಂಟೆಯೊಳಗೆ) ಹಣ ಪಡೆಯಪಡೆಬಹುದು.

ಕೊರೋನಾ ಆತಂಕ: ಶಾಸಕ ಅಭಯ್ ಪಾಟೀಲ್‌ರಿಂದ ಸ್ಯಾನಿಟೈಸೇಷನ್ ಕಾರ್ಯ!

ಒಂದು ವೇಳೆ ರೈಲು ಸಂಚಾರ ಸೇವೆಯಿದ್ದು, ಪ್ರಯಾಣಿಕರೇ ಪ್ರಯಾಣ ಮಾಡಲು ಹಿಂದೇಟು ಹಾಕಿದ್ದಲ್ಲಿ ಅಂತವರು ಬುಕ್ಕಿಂಗ್‌ ಮಾಡಿದ 30ದಿನಗಳೊಳಗೆ ಟಿಕೆಟ್‌ ವಾಪಸ್‌ ಮಾಡಿ 3 ದಿನಗಳೊಳಗೆ ಹಣ ವಾಪಸ್‌ ಪಡೆಯಬಹುದು.

ಅಲ್ಲದೆ ಟಿಕೆಟನ್ನು ಮುಖ್ಯ ವ್ಯವಸ್ಥಾಪಕರಿಗೆ 60 ದಿನಗಳೊಳಗೆ ತಲುಪಿಸಿದಲ್ಲಿ 10 ದಿನಗಳೊಳಗೆ ಹಣ ವಾಪಸಾಗಲಿದೆ. 139 ಸಹಾಯವಾಣಿ ಮುಖಾಂತರ ಟಿಕೆಟ್‌ ರದ್ದುಗೊಳಿಸಿಕೊಳ್ಳಬಹುದು. ಕೌಂಟರ್‌ನಲ್ಲಿ 30 ದಿನಗಳೊಳಗೆ ಹಿಂದಿರುಗಿಸಿದ ಟಿಕೆಟ್‌ ಹಣ ಪಡೆದುಕೊಳ್ಳಬಹುದಾಗಿದೆ.

click me!